VIVEKANANDA COLLEGE, PUTTUR

Re - accredited at 'A' Grade by the NAAC with 3.30 CGPA

Recognised as the College with Potential for Excellence (CPE) By the UGC

| +91 8251 230 455 | Kannada

ವಿವೇಕಾನಂದದಲ್ಲಿ ಡಾ.ಹರಿಹರ ಕೇಶವ ಹೆಗಡೆಗೆ ಸನ್ಮಾನ

ಪುತ್ತೂರು: ಅಮೇರಿಕಾದಲ್ಲಿನ ವಿಶ್ವವಿದ್ಯಾನಿಲಯಗಳಲ್ಲಿ ಸಂಶೋಧನೆ, ಸ್ನಾತಕೋತ್ತರ ವಿಜ್ಞಾನ ವಿಭಾಗಗಳಿಗೆ ಸೇರಿಕೊಳ್ಳುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ವಿದೇಶೀ ವಿದ್ಯಾರ್ಥಿಗಳಿಗೆ ಅದರಲ್ಲೂ ಭಾರತೀಯ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳಿವೆ. ಅಂತರ್ ಶಿಸ್ತೀಯ ಅಧ್ಯಯನದಲ್ಲಿ ಪ್ರಾವಿಣ್ಯತೆ ಇರುವ ವಿದ್ಯಾರ್ಥಿಗಳಿಗಂತೂ ಅಪಾರ ಅವಕಾಶಗಳಿವೆ ಎಂದು ವಿವೇಕಾನಂದ ಕಾಲೇಜಿನ ಹಿರಿಯ ವಿದ್ಯಾರ್ಥಿ, ಪ್ರಸ್ತುತ ಅಮೇರಿಕಾದಲ್ಲಿ ನ್ಯಾನೋ ಎಟ್ಚ್ ಸಿಸ್ಟಮ್ ಅನ್ನುವ ಸಂಸ್ಥೆಯನ್ನು ಹುಟ್ಟುಹಾಕಿ ಮುನ್ನಡೆಸುತ್ತಿರುವ ಅಂತೆಯೇ ವಿಜ್ಞಾನಿಯೂ ಆಗಿರುವ  ಡಾ.ಹರಿಹರ ಕೇಶವ ಹೆಗಡೆ ಹೇಳಿದರು.

ಅವರು ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ಸೋಮವಾರ ನಡೆದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.

       ಬದುಕಿನಲ್ಲಿ ಕಲಿಯುವಿಕೆ ಅಂತ್ಯವಿಲ್ಲದ್ದು. ನಿರಂತರ ಅಧ್ಯಯನದಿಂದ ಸಾಧನೆ ಪ್ರಾಪ್ತವಾಗುತ್ತದೆ. ಅಧ್ಯಯನಯುಕ್ತ ಬದುಕು ಸಾಗಿಸುವುದೇ ಬಹಳ ದೊಡ್ಡ ಗೌರವ. ವ್ಯಕ್ತಿಯೊಬ್ಬ ಪ್ರತಿಯೊಂದು ದಿನವೂ ಕಲಿಯುವುದು ಸಾಕಷ್ಟಿದೆ. ಪ್ರತಿಯೊಂದು ಉದ್ಯೋಗದಲ್ಲೂ ಉತ್ತಮ ಶಿಕ್ಷಣವಿದೆ. ಶೈಕ್ಷಣಿಕ ಅರ್ಹತೆಗಳೆಲ್ಲವೂ ಗೌರವ ತಂದರೆ ಜೀವನದುದ್ದಗಿನ ಶಿಕ್ಷಣ ವ್ಯಕ್ತಿಯನ್ನು ಪರಿಪೂರ್ಣಗೊಳಿಸುತ್ತದೆ. ವಿದ್ಯಾರ್ಥಿಗಳು ಹೊಸ ಹೊಸ ವಿಚಾರಗಳನ್ನು ತಿಳಿದುಕೊಳ್ಳುವ ಬಗೆಗೆ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ನುಡಿದರು.

       ಡಾ.ಹೆಗಡೆಯವರನ್ನು ಸನ್ಮಾನಿಸಿ ಮಾತನಾಡಿದ ಕಾಲೇಜಿನ ಸ್ಥಾಪಕ ಸಂಚಾಲಕ ಕೆ.ರಾಮ ಭಟ್ ಕಾಲೇಜಿನ ವಿದ್ಯಾರ್ಥಿಯೊಬ್ಬ ಸಾಧನೆ ಮಾಡಿದಾಗ ಅದರ ಹೆಮ್ಮೆ ವಿದ್ಯಾಸಂಸ್ಥೆಗೆ ಸಲ್ಲುತ್ತದೆ. ಅವರ ಸಾಧನೆಯ ಹುಮ್ಮಸ್ಸು ಸದಾ ಚಾಲ್ತಿಯಲ್ಲಿರಲಿ ಎಂದು ಹಾರೈಸಿದರು.

ಕಾಲೇಜಿನ ಪ್ರಾಚಾರ್ಯ ಡಾ.ಎಚ್.ಮಾಧವ ಭಟ್ ಪ್ರಸ್ತಾವಿಸಿ, ಸ್ವಾಗತಿಸಿದರು. ವಿಜ್ಞಾನ ಸಂಘದ ಸಂಚಾಲಕ ಡಾ.ಸುಧಾಕರನ್ ವಂದಿಸಿದರು. ಉಪನ್ಯಾಸಕಿ ರೇಯಾಂಕ ಕಾರ್ಯಕ್ರಮ ನಿರ್ವಹಿಸಿದರು.