VIVEKANANDA COLLEGE, PUTTUR

Re - accredited at 'A' Grade by the NAAC with 3.30 CGPA

Recognised as the College with Potential for Excellence (CPE) By the UGC

| +91 8251 230 455 | Kannada

ವಿವೇಕಾನಂದದಲ್ಲಿ ’ಜಾಗೃತಿ’ ವಾರ್ಷಿಕ ಸಂಚಿಕೆಯ ಅನಾವರಣ

ಪುತ್ತೂರು: ಬೆಳವಣಿಗೆ, ಸುಧಾರಣೆ ಹಾಗೂ ಪಕ್ವತೆಗಳಿಗೆ ಮಿತಿಯಿಲ್ಲ. ಅದು ನಿರಂತರವಾದುದು. ವಾರ್ಷಿಕ ಸಂಚಿಕೆ ಆಯಾ ಕಾಲೇಜಿನ ಅಭಿವೃದ್ಧಿ, ಬೆಳವಣಿಗೆಯನ್ನು ತೋರಿಸುತ್ತದೆ. ವಾರ್ಷಿಕ ಸಂಚಿಕೆ ಕಾಲೇಜಿನ ಇಡೀ ವರ್ಷದ ಸಾಧನೆಯನ್ನು ತೋರಿಸುವ ಕೃತಿ ಎಂದು ಮಂಗಳೂರಿನ ಶ್ರೀ ಭಾರತಿ ಕಾಲೇಜಿನ ಪ್ರಾಚಾರ್ಯ ಡಾ.ಪಿ.ಪರಮೇಶ್ವರ ಭಟ್ ಹೇಳಿದರು.

        ಅವರು ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ಶನಿವಾರ ನಡೆದ ೨೦೧೩-೧೪ನೇ ಸಾಲಿನ ಜಾಗೃತಿ ವಾರ್ಷಿಕ ಸಂಚಿಕೆಯನ್ನು ಅನಾವರಣಗೊಳಿಸಿ ಮಾತನಾಡಿದರು.

       ಜಾಗೃತಿ ವಾರ್ಷಿಕ ಸಂಚಿಕೆಯು ವರ್ಷದಿಂದ ವರ್ಷಕ್ಕೆ ವಿಭಿನ್ನತೆಯನ್ನು ಹೊಂದಿಕೊಂಡು ಅನಾವಣಗೊಳ್ಳುತ್ತಿರುವುದು ವಿಶೇಷ. ಅದರಲ್ಲಿ ಅಧ್ಯಾಪಕರಷ್ಟೇ ವಿದ್ಯಾರ್ಥಿಗಳ ಕೊಡುಗೆಯೂ ಇರುತ್ತದೆ. ಕಾಲೇಜಿನ ಸಮಗ್ರ ಚಟುವಟಿಕೆಗಳು ಹಾಗೂ ವಿದ್ಯಾರ್ಥಿಗಳ ಸಾಧನೆಗಳನ್ನು ತೋರಿಸುವ ಮಾಧ್ಯಮ ವಾರ್ಷಿಕ ಸಂಚಿಕೆಯಾಗಿದೆ ಎಂದು ತಿಳಿಸಿದರು.

       ವಾರ್ಷಿಕ ಸಂಚಿಕೆಯನ್ನು ವಿದ್ಯಾರ್ಥಿಗಳು ಬಹಳ ಸಂತೋಷದಿಂದ ಓದುವಂತಿರಬೇಕು ಹಾಗೂ ತಮ್ಮ ಸಾಧನೆಯನ್ನು ನೋಡಿ ಹೆಮ್ಮೆ ಪಡುವಂತಿರಬೇಕು. ಪೋಷಕರಿಗೆ ಕಾಲೇಜಿನ ವಾರ್ಷಿಕ ಚಟುವಟಿಕೆಗಳ ಬಗ್ಗೆ ಸಮಗ್ರ ಮಾಹಿತಿಯನ್ನು ವಾರ್ಷಿಕ ಸಂಚಿಕೆ ನೀಡುತ್ತದೆ. ಅದು ಕಾಲೇಜಿನ ಕಾರ್ಯ ಚಟುವಟಿಕೆಗಳ ಕೈಗನ್ನಡಿಯಾಗಿದೆ ಎಂದು ನುಡಿದರು.

       ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಎಚ್ ಮಾಧವ ಭಟ್ ಮಾತನಾಡಿ, ವಾರ್ಷಿಕ ಸಂಚಿಕೆ ಕಾಲೇಜಿನ ಶ್ರೀಮಂತಿಕೆಯನ್ನು ತೋರಿಸುತ್ತದೆ. ಕಾಲೇಜಿನ ವಾರ್ಷಿಕ ಸಾಧನೆಯ ಆಳ ಮತ್ತು ವೈಶಾಲ್ಯವನ್ನು ವಾರ್ಷಿಕ ಸಂಚಿಕೆ ಅನಾವಣಗೊಳಿಸುತ್ತದೆ. ಆಡಳಿತ ಮಂಡಳಿ, ಅಧ್ಯಾಪಕವೃಂದ ಹಾಗೂ ವಿದ್ಯಾಥಿಗಳು ಸೇರಿ ಮಾಡಿದ ವಾರ್ಷಿಕ ಸಂಚಿಕೆ ವಿಶೇಷತೆನ್ನು ಹೊಂದಿರುತ್ತದೆ ಎಂದರು.

       ವಾರ್ಷಿಕ ಸಂಚಿಕೆಯ ಸಂಪಾದಕ ಹಾಗೂ ಉಪನ್ಯಾಸಕ ರಾಕೇಶ್ ಕುಮಾರ್ ಕಮ್ಮಜೆ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು. ವಿದ್ಯಾರ್ಥಿನಿ ಸ್ವಾತಿ ಸುಬ್ರಹ್ಮಣ್ಯ ಪ್ರಾರ್ಥಿಸಿದರು. ಇನ್ನೊರ್ವ ಸಂಪಾದಕಿ ಡಾ. ದುರ್ಗರತ್ನ ಸಿ ವಂದಿಸಿದರು.