VIVEKANANDA COLLEGE, PUTTUR

Re - accredited at 'A' Grade by the NAAC with 3.30 CGPA

Recognised as the College with Potential for Excellence (CPE) By the UGC

| +91 8251 230 455 | Kannada

ವಿವೇಕಾನಂದದಲ್ಲಿ ಸ್ಪೋಕನ್ ಇಂಗ್ಲೀಷ್ ತರಗತಿ

ಪುತ್ತೂರು: ಪ್ರತಿಯೊಬ್ಬ ವಿದ್ಯಾರ್ಥಿಗೂ ಸಂವಹನ ಕೌಶಲ್ಯ ಅತೀ ಅಗತ್ಯ. ಸಂವಹನ ಎಂಬುವುದು ಅತ್ಯಂತ ಮುಖ್ಯವಾದ ವಿಚಾರವಾಗಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ನಮ್ಮ ಸಂವಹನ ಕೌಶಲ್ಯವನ್ನು ಬೆಳೆಸಿಕೊಳ್ಳುವ ಅಗತ್ಯವಿದೆ. ಸರಿಯಾದ ವಿಷಯವನ್ನು ಸರಿಯಾದ ವ್ಯಕ್ತಿಯ ಜೊತೆ, ಸರಿಯಾದ ಸಮಯದಲ್ಲಿ ಹೇಗೆ ವ್ಯವಹರಿಸಬೇಕೆಂಬುವುದರ ಬಗೆಗಿನ ಜ್ಞಾನ ವಿದ್ಯಾರ್ಥಿಗಳಿಗಿರಬೇಕು ಎಂದು ಮಂಗಳೂರಿನ ಎಮ್‌ಎಚ್‌ಆರ್‌ಡಿ ಸಂಸ್ಥೆಯ ನಿರ್ದೇಶಕ ಪ್ರೊ.ಸನ್ನಿ ಥೆರಪನ್ ಹೇಳಿದರು.

       ಅವರು ಇತ್ತೀಚೆಗೆ ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ಸ್ನಾತಕೋತ್ತರ ವಿಭಾಗ ಆಯೋಜಿಸಿದ್ದ ಸ್ಪೋಕನ್ ಇಂಗ್ಲೀಷ್ ತರಗತಿಯನ್ನು ಉದ್ಘಾಟಿಸಿ ಮಾತನಾಡಿದರು.

       ಸಂವಹನ ಎಂಬುದು ಸಾಮರ್ಥ್ಯವೇ ಹೊರತು ಕೌಶಲ್ಯವಲ್ಲ. ತರಬೇತಿ ಶಿಬಿರಗಳು ವಿದ್ಯಾರ್ಥಿಗಳಲ್ಲಿ  ಸಂವಹನಾ ಸಾಮರ್ಥ್ಯವನ್ನು ಬೆಳೆಸುತ್ತದೆ. ಇದರ ಜೊತೆಗೆ ಸಾಮಾಜಿಕ ಕೌಶಲ್ಯ ಮತ್ತು ಭಾಷಾ ಕೌಶಲ್ಯವೂ ವಿದ್ಯಾರ್ಥಿಗಳಲ್ಲಿ ಅಗತ್ಯವಾಗಿರಬೇಕು ಎಂದು ಅವರು ಕಿವಿಮಾತು ಹೇಳಿದರು.

       ಕಾಲೇಜಿನ ಪ್ರಾಂಶುಪಾಲ ಡಾ.ಎಚ್ ಮಾಧವ ಭಟ್ ಪ್ರಸ್ತಾವನೆಗೈದು, ಸ್ನಾತಕೋತ್ತರ ವಿದ್ಯಾರ್ಥಿಗಳಲ್ಲೂ ಇಂಗ್ಲೀಷ್‌ನಲ್ಲಿ ಸಂವಹನದ ಸಮಸ್ಯೆಗಳಿವೆ. ಅಂತಹ ತೊಡಕುಗಳನ್ನು ನಿವಾರಿಸಲು ಸ್ಪೋಕನ್ ಇಂಗ್ಲೀಷ್ ತರಗತಿಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ವಿದ್ಯಾರ್ಥಿಗಳು ಇಂತಹ ತರಬೇತಿ ಶಿಬಿರಗಳಲ್ಲಿ ತಮ್ಮನ್ನು ತಾವು ಸರಿಯಾಗಿ ತೊಡಗಿಸಿಕೊಳ್ಳಬೇಕು ಎಂದರು.

       ಕಾರ್ಯಕ್ರಮದಲ್ಲಿ ಮಂಗಳೂರಿನ ಎಮ್‌ಎಚ್‌ಆರ್‌ಡಿ ಸಂಸ್ಥೆಯ ಪ್ರಾಂಶುಪಾಲೆ ಪ್ರೊ.ಅನಿಲ ಉಪಸ್ಥಿತರಿದ್ದರು.