News & Updates

ಅನುಭವ ಪ್ರಾಪ್ತಿಗೆ ಅಧ್ಯಯನ ಅಗತ್ಯ: ಡಾ. ಯೋಗೀಶ ಕೈರೋಡಿ;

ಪುತ್ತೂರು, ಏ. 12: ಮನಸ್ಸಿನ ಶುದ್ಧಿಗೆ ಸ್ವಾಮಿ ವಿವೇಕಾನಂದರ
ವಿಚಾರಧಾರೆಗಳು ಖಂಡಿತ ಬೇಕು. ಅವರ ಚಿಂತನೆಗಳನ್ನು ಅದೆಷ್ಟು ಸಲ
ಕೇಳಿದರೂ, ಅದೆಷ್ಟು ಸಲ ಓದಿದರೂ ಸಾಲದು. ಗುರಿಯನ್ನು ತಲುಪಲು
ಎಷ್ಟೇ ಅಡೆತಡೆಗಳು ಬಂದರು ಇಚ್ಛಾ ಶಕ್ತಿ ಇದ್ದಾಗ ಎದುರಿಸಿ ನಿಲ್ಲುವುದು
ಸುಲಭಸಾಧ್ಯ ಎಂದು ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಪ್ರಾಧ್ಯಾಪಕ ಡಾ.
ಯೋಗೀಶ ಕೈರೋಡಿ ಹೇಳಿದರು.
ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಮಹಾವಿದ್ಯಾಲಯ,
ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಕೇಂದ್ರ, ವಿವೇಕಾನಂದ
ಸAಶೋಧನಾ ಕೇಂದ್ರ ಮತ್ತು ಐಕ್ಯೂಎಸಿ ಘಟಕದ ಸಹಯೋಗದಲ್ಲಿ
ನಡೆದ ಹದಿನೈದನೇ ಆವೃತ್ತಿಯ ವಿವೇಕಸ್ಮೃತಿ ಉಪನ್ಯಾಸ ಮಾಲಿಕೆಯಲ್ಲಿ
ಮಾತನಾಡಿದ ಇವರು ಸಾಧನೆ ಮಾಡಬೇಕೆಂದರೆ ಅಂತರAಗದಲ್ಲಿರುವ
ಜ್ಞಾನವನ್ನು ಹೊರಗೆ ತರಬೇಕಾದರೆ ನಾವು ವಿವೇಕಾನಂದರAತೆ
ಅಧ್ಯಯನಶೀಲರಾಗಬೇಕು. ಜೀವನದ ಅನುಭವ ಪ್ರಾಪ್ತವಾಗಲು
‘ಅಧ್ಯಯನ’ ಅತ್ಯಗತ್ಯ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸ್ನಾತಕೋತ್ತರ
ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಹೆಚ್.ಜಿ. ಶ್ರೀಧರ ಮಾತನಾಡಿ
ವಿವೇಕಾನಂದರ ಚಿಂತನೆಗಳಲ್ಲಿ ಭಾರತ ಇತ್ತು. ಅನಂತರದ ಕಾಲಘಟ್ಟದಲ್ಲಿ
ಬಂದAತಹ ಬಹುತೇಕ ಸ್ವಾತಂತ್ರ‍್ಯ ಹೋರಾಟಗಾರರು ಸ್ವಾತಂತ್ರ‍್ಯ
ಸಮರದಲ್ಲಿ ಪಾಲ್ಗೊಳ್ಳಲು ಸ್ಫೂರ್ತಿ ಪಡೆದದ್ದು ಸ್ವಾಮಿ
ವಿವೇಕಾನಂದರಿAದಲೇ. ವಿವೇಕಾನಂದರನ್ನು ಓದಿದರೆ ಭಾರತ
ಅರ್ಥವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣುಗಣಪತಿ ಭಟ್,
ವಿವೇಕಾನಂದ ಸಂಶೋಧನಾ ಕೇಂದ್ರದ ನಿರ್ದೇಶಕಿ ಡಾ. ವಿಜಯಸರಸ್ವತಿ,
ಭಾರತೀಯ ಸಂಸ್ಕೃತಿ ಮತ್ತು ಲಲಿತ ಕಲೆಗಳ ಅಧ್ಯಯನ ಕೇಂದ್ರದ
ಸAಯೋಜಕಿ ಡಾ. ವಿದ್ಯಾ ಎಸ್. ಉಪಸ್ಥಿತರಿದ್ದರು.
ಪ್ರಥಮ ಎಂಕಾA ವಿದ್ಯಾರ್ಥಿ ಪವನ್ ರಾಜ್ ಸ್ವಾಗತಿಸಿ, ಪ್ರಥಮ ಎಂಸಿಜೆ ವಿದ್ಯಾರ್ಥಿ
ಪಂಚಮಿ ಬಾಕಿಲಪದವು, ಪ್ರಥಮ ಎಂಕಾA ವಿದ್ಯಾರ್ಥಿ ಅನನ್ಯ ಮತ್ತು ಸೌಮ್ಯ
ಪ್ರಾರ್ಥಿಸಿ, ಪ್ರಥಮ ಎಂಕಾA ವಿದ್ಯಾರ್ಥಿ ಅನನ್ಯ ನಿರೂಪಿಸಿ, ದ್ವಿತೀಯ ಎಂಕಾA ವಿದ್ಯಾರ್ಥಿ
ಲಾವಣ್ಯ ವಂದಿಸಿದರು.

Related News

ವಿವೇಕಾನಂದ ಕಾಲೇಜಿನಲ್ಲಿ ಹ್ಯಾಕಥಾನ್ ಕಾರ್ಯಗಾರ“ಹ್ಯಾಕಥಾನ್ ಸೃಜನಶೀಲತೆ ಮತ್ತು ಕೌಶಲ್ಯಾಭಿವೃದ್ಧಿಗೆ ಪ್ರೇರಣೆ” – ಡಾ. ವಿಜಯ್ ವಿ. ಎಸ್;

ವಿವೇಕಾನಂದ ಕಾಲೇಜಿನಲ್ಲಿ ಹ್ಯಾಕಥಾನ್ ಕಾರ್ಯಗಾರ“ಹ್ಯಾಕಥಾನ್ ಸೃಜನಶೀಲತೆ…

ಪುತ್ತೂರು: “ಇಂದಿನ ಯುಗದಲ್ಲಿ ಶಿಕ್ಷಣ ಮಾತ್ರವಲ್ಲದೆನಮ್ಮಲ್ಲಿರುವ ಕೌಶಲ್ಯಗಳು…

ಮಂಗಳೂರು ವಿವಿ ಅಂತರ್ ಕಾಲೇಜು ಚೆಸ್ ಪಂದ್ಯಾಟದಲ್ಲಿವಿವೇಕಾನoದ ಕಾಲೇಜಿಗೆ ಪ್ರಶಸ್ತಿ;

ಮಂಗಳೂರು ವಿವಿ ಅಂತರ್ ಕಾಲೇಜು ಚೆಸ್…

ಪುತ್ತೂರು: ಇತ್ತೀಚೆಗೆ ಉಡುಪಿಯ ಉಪೇಂದ್ರ ಪೈಮೆಮೋರಿಯಲ್ ಕಾಲೇಜು…

ವಿವೇಕಾನಂದ ಕಾಲೇಜಿನಲ್ಲಿ ಪ್ರಾಧ್ಯಾಪಕರ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮ;

ವಿವೇಕಾನಂದ ಕಾಲೇಜಿನಲ್ಲಿ ಪ್ರಾಧ್ಯಾಪಕರ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮ;

ಪುತ್ತೂರು, ಅ.೨೭: ಒಬ್ಬ ಉತ್ತಮ ಶಿಕ್ಷಕ ಸಂವಹನ…