News & Updates

ಉದ್ಯೋಗ ಸೇತು ನೋಂದಣಿ ಕಾರ್ಯಗಾರ

ಪುತ್ತೂರು: ವಿದ್ಯಾರ್ಥಿಗಳು ವಿಷಯ ಜ್ಞಾನದ ಜೊತೆಗೆ
ಔದ್ಯೋಗಿಕ ರಂಗಕ್ಕೆ ಬೇಕಾದ ಕೌಶಲಗಳನ್ನು
ಮೈಗೂಡಿಸಿಕೊಳ್ಳಬೇಕು. ಉದ್ಯೋಗಾಕಾಂಕ್ಷಿ ವಿದ್ಯಾರ್ಥಿ
ಸಮೂಹವನ್ನು ಉದ್ಯಮರಂಗಕ್ಕೆ ಜೋಡಿಸುವ ಕೆಲಸವನ್ನು
ಉದ್ಯೋಗ ಸೇತು ಆ್ಯಪ್ ಮಾಡುತ್ತದೆ ಎಂದು ಬೆಂಗಳೂರಿನ ಕೋ-
ವರ್ಕ್ಸ ಸೊಲ್ಯುಷನ್ ಪ್ರೆöÊ.ಲಿಮಿಟೆಡ್ ನ ರಾಹುಲ್ ಜಾದವ್ ಹೇಳಿದರು.
ಇವರು ವಿವೇಕಾನಂದ ಕಲಾ, ವಿಜ್ಞಾನ ಹಾಗೂ ವಾಣಿಜ್ಯ(ಸ್ವಾಯತ್ತ)
ಕಾಲೇಜಿನ ಗಣಕ ಶಾಸ್ತç ವಿಭಾಗ ಹಮ್ಮಿಕೊಂಡಿದ್ದ ಒಂದು ದಿನದ
ಕಾರ್ಯಾಗಾರದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿ ಮಾತಾನಾಡಿದ ಕಾಲೇಜು
ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್ ಮಾತನಾಡಿ, ಸ್ವಾಯತ್ತ
ಕಾಲೇಜು ಹಲವು ಕಾರ್ಪೊರೇಟ್ ಕಂಪನಿಗಳ ಜೊತೆ ಮಾಡಿದ
ಒಡಂಬಡಿಕೆಗಳ ಮಹತ್ವವನ್ನು ವಿವರಿಸಿದರು. ಕಾಲೇಜಿನ ತರಬೇತಿ
ಮತ್ತು ಉದ್ಯೋಗ ಘಟಕದ ಸಂಯೋಜಕಿ ರೇಖಾ
ಪ್ರಸ್ತಾವನೆಗೈದರು.
ಕಾಲೇಜಿನ ಐಕ್ಯೂಎಸಿ ಸಂಯೋಜಕ ಪ್ರೊ.ಶಿವಪ್ರಸಾದ್, ಗಣಕ ಶಾಸ್ತç
ವಿಭಾಗದ ಮುಖ್ಯಸ್ಥ ಪ್ರಕಾಶ್ ಕುಮಾರ್ ಪಿ ಉಪಸ್ಥಿತರಿದ್ದರು. ಅಂತಿಮ
ವರ್ಷದ ಪದವಿ ವಿದ್ಯಾರ್ಥಿಗಳು ಉದ್ಯೋಗ ಸೇತು ಆ್ಯಪ್ ನಲ್ಲಿ
ನೋಂದಣಿ ಮಾಡಿಕೊಂಡರು. ಉಪನ್ಯಾಸಕರಾದ ಸೂರ್ಯನಾರಾಯಣ
ಪಿ.ಎಸ್ ಸ್ವಾಗತಿಸಿ, ಧನಂಜಯ ವಂದಿಸಿದರು. ಪ್ರಿಯಾ ನಿರೂಪಿಸಿದರು.

Related News

ವಿವೇಕಾನಂದ ಕಾಲೇಜಿನಲ್ಲಿ ಅತಿಥಿ ಉಪನ್ಯಾಸ ಕಾರ್ಯಕ್ರಮ;

ವಿವೇಕಾನಂದ ಕಾಲೇಜಿನಲ್ಲಿ ಅತಿಥಿ ಉಪನ್ಯಾಸ ಕಾರ್ಯಕ್ರಮ;

ಪುತ್ತೂರು, ಫೆ. ೦೨ : ನಮ್ಮನ್ನು ಯೋಚಿಸುವಂತೆ…

ದೇಶವೇ ಪ್ರಥಮ ಆದ್ಯತೆಯಾಗಿರಲಿ-ಡಾ. ಕಲ್ಲಡ್ಕ ಪ್ರಭಾಕರ ಭಟ್;

ದೇಶವೇ ಪ್ರಥಮ ಆದ್ಯತೆಯಾಗಿರಲಿ-ಡಾ. ಕಲ್ಲಡ್ಕ ಪ್ರಭಾಕರ…

ಪುತ್ತೂರು: ರಾಮನನ್ನು ನಾವು ಸದಾ ನೆನಪಿಡಬೇಕಾದಅಗತ್ಯವಿದೆ. ಎಲ್ಲಾ…

ವಿವೇಕಾನಂದ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ.

ವಿವೇಕಾನಂದ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ.

ಪುತ್ತೂರು: ನಾಯಕತ್ವ ಎನ್ನುವುದು ನಮ್ಮೊಳಗಿನಒಳ್ಳೆಯತನವನ್ನು ಹೊರಗೆ ತರುವ…