News & Updates

ಕೈಝೆನ್ ಪರಿಕಲ್ಪನೆಯಿಂದ ಆತ್ಮವಿಶ್ವಾಸ ವೃದ್ಧಿ- ರಂಜನ್ ಬೆಳ್ಳಾರ್ಪಾಡಿ;

ಪುತ್ತೂರು: ಭಾರತ ದೇಶ ಮುಂದುವರಿದ ದೇಶವಾದರೂ
ಸ್ವಚ್ಛತೆಯ ವಿಚಾರವಾಗಿ ಯೋಚಿಸುವಂತಾಗಿದೆ.
ಸ್ವಚ್ಛತೆಯನ್ನು ಪಾಲಿಸುವ ಕೆಲಸ ಅಗತ್ಯವಾಗಿ ಆಗಬೇಕು.
ಯುವ ಜನತೆಗೆ ಅವಕಾಶಗಳೂ ಹೆಚ್ಚಿದ್ದು ಸ್ವಚ್ಛತೆಯ
ವಿಷಯದಲ್ಲಿ ಸಾಕಷ್ಟು ಬದಲಾವಣೆಗಳನ್ನು ತರಬಹುದು
ಎಂದು ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದ
ಸಂಯೋಜಕ ರಂಜನ್ ಬೆಳ್ಳಾರ್ಪಾಡಿ ನುಡಿದರು.
ಇವರು ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ, ವಾಣಿಜ್ಯ
ಮಹಾವಿದ್ಯಾಲಯ(ಸ್ವಾಯತ್ತ) ಇಲ್ಲಿ ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ
ಸಹಕಾರ ಸಂಘ ನಿ. ಪುತ್ತೂರು ಹಾಗೂ ಸರಸ್ವತಿ ಚಾರಿಟೇಬಲ್
ಟ್ರಸ್ಟ್ ಇದರ ಸಹಭಾಗಿತ್ವದೊಂದಿಗೆ ನಡೆದ ಸತ್ಯೇಶ ಕೆದಿಲಾಯ
ಸಂಕಲಿತ ‘ಸ್ವಚ್ಛತೆಯ ಪಂಚಸೂತ್ರಗಳು ಹಾಗೂ
ಕೈಝೆನ್’ ಕೃತಿ ಬಿಡುಗಡೆ ಹಾಗೂ ಉಪನ್ಯಾಸ
ಕಾರ್ಯಕ್ರಮದಲ್ಲಿ ಕೃತಿಯನ್ನು ಲೋಕಾರ್ಪಣೆಗೊಳಿಸಿ
ಮಾತನಾಡಿದರು.
ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿ ಕೃಷ್ಣ
ಕೆ.ಎನ್ ಮಾತನಾಡಿ ಸ್ವಚ್ಛತೆ ಎಂಬುದು ನಮ್ಮ ಮನಸು,
ಭಾವನೆಗಳು ಹಾಗೂ ನೋಡುವ ದೃಷ್ಠಿಕೋನಗಳಿಗೂ
ಸಂಬAಧಿಸಿದ್ದಾಗಿರುತ್ತದೆ. ಯುವ ಸಮೂಹ ಸಮಾಜಮುಖಿಯಾಗಿ
ಕೆಲಸ ನಿರ್ವಹಿಸಲು ಪುಸ್ತಕಗಳು ಮಾರ್ಗದರ್ಶಿಯಾಗಬಲ್ಲದು
ಎಂದರು.
ಅಧ್ಯಕ್ಷೀಯ ನುಡಿಗಳನ್ನಾಡಿದ ಪುತ್ತೂರು ಶ್ರೀ ಸರಸ್ವತಿ
ಕ್ರೆಡಿಟ್ ಸೌಹಾರ್ದ ಸಹಕಾರ ಸಂಘದ ನಿರ್ದೇಶಕ ಹಾಗೂ ಶ್ರೀ
ಸರಸ್ವತಿ ಚಾರಿಟೇಬಲ್ ಟ್ರಸ್ಟಿನ ಟ್ರಸ್ಟೀ ದೇವೀಪ್ರಸಾದ್.ಕೆ ಗುರಿ
ತಲುಪಲು ಶಿಸ್ತು ಪಾಲನೆ ಹಾಗೂ ಆತ್ಮವಿಶ್ವಾಸ ಇರಬೇಕಾಗುತ್ತದೆ.
ಸ್ವಚ್ಛತೆ ನಮ್ಮ ದೈನಂದಿನ ಅಭ್ಯಾಸವಾಗಬೇಕು ಎಂದು
ತಿಳಿಸಿದರು.
ಈ ಸಂದರ್ಭದಲ್ಲಿ ಸತ್ಯೇಶ ಕೆದಿಲಾಯ ಹಾಗೂ ರಂಜನ್ ಬೆಳ್ಳಾರ್ಪಾಡಿ
ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ
ಪ್ರಾಂಶುಪಾಲ ಡಾ. ಶ್ರೀಧರ ನಾಯಕ್.ಬಿ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಕಾಲೇಜಿನ ಉಪಪ್ರಾಂಶುಪಾಲ ಶ್ರೀಕೃಷ್ಣ
ಗಣರಾಜ ಭಟ್ ಸ್ವಾಗತಿಸಿ, ಸರಸ್ವತಿ ಚಾರಿಟೇಬಲ್ ಟ್ರಸ್ಟಿನ ಸಂಯೋಜಕ
ಬಿಪಿನ್ ಚಂದ್ರ ವಂದಿಸಿದರು. ದ್ವಿತೀಯ ಕಲಾ ವಿಭಾಗದ ವಿದ್ಯಾರ್ಥಿನಿ
ಚೈತನ್ಯ ನಿರ್ವಹಿಸಿದರು.

Related News

ವಿವೇಕಾನಂದ ಕಾಲೇಜಿನಲ್ಲಿ ಅತಿಥಿ ಉಪನ್ಯಾಸ ಕಾರ್ಯಕ್ರಮ;

ವಿವೇಕಾನಂದ ಕಾಲೇಜಿನಲ್ಲಿ ಅತಿಥಿ ಉಪನ್ಯಾಸ ಕಾರ್ಯಕ್ರಮ;

ಪುತ್ತೂರು, ಫೆ. ೦೨ : ನಮ್ಮನ್ನು ಯೋಚಿಸುವಂತೆ…

ದೇಶವೇ ಪ್ರಥಮ ಆದ್ಯತೆಯಾಗಿರಲಿ-ಡಾ. ಕಲ್ಲಡ್ಕ ಪ್ರಭಾಕರ ಭಟ್;

ದೇಶವೇ ಪ್ರಥಮ ಆದ್ಯತೆಯಾಗಿರಲಿ-ಡಾ. ಕಲ್ಲಡ್ಕ ಪ್ರಭಾಕರ…

ಪುತ್ತೂರು: ರಾಮನನ್ನು ನಾವು ಸದಾ ನೆನಪಿಡಬೇಕಾದಅಗತ್ಯವಿದೆ. ಎಲ್ಲಾ…

ವಿವೇಕಾನಂದ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ.

ವಿವೇಕಾನಂದ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ.

ಪುತ್ತೂರು: ನಾಯಕತ್ವ ಎನ್ನುವುದು ನಮ್ಮೊಳಗಿನಒಳ್ಳೆಯತನವನ್ನು ಹೊರಗೆ ತರುವ…