News & Updates

ಜೀವನದಲ್ಲಿ ಎಚ್ಚರಿಕೆ ಹೆಜ್ಜೆ ಇಡುವುದು ಅಗತ್ಯ: ಡಾ. ಸಂಕೀರ್ತ ಹೆಬ್ಬಾರ್;

ಪುತ್ತೂರು ಏ.11: ಜೀವನ ಎನ್ನುವುದು ಹಗ್ಗದ ಮೇಲಿನ ನಡಿಗೆ ಇದ್ದಂತೆ.
ಇಲ್ಲಿ ಯಾವ ಸಂದರ್ಭದಲ್ಲಿ ಬೇಕಾದರೂ ಅವಗಢಗಳು ಸಂಭವಿಸಬಹುದು.
ಹಾಗೆAದು ನಾವು ರಿಸ್ಕ್ ತೆಗೆದುಕೊಳ್ಳದೇ ಇದ್ದರೆ ಹೇಗೆ? ಸವಾಲುಗಳಿಗೆ
ನಮ್ಮನ್ನು ಒಡ್ಡಿದಾಗ ಮಾತ್ರವೇ ನಮಗೆ ಹೊಸತುಗಳನ್ನು
ಕಂಡುಕೊಳ್ಳಲು ಸಾಧ್ಯವಾಗುವುದು. ಹೊಸ ಆಲೋಚನೆಗಳು,
ಹೊಸಪರಿಕಲ್ಪನೆಗಳು ನಮ್ಮಲ್ಲಿ ಮೂಡುವುದು. ಹೀಗಾಗಿ ನಾವು
ಸವಾಲುಗಳನ್ನು ಎದುರಿಸಲು ತಯಾರಾಗಿರಬೇಕು. ಕಷ್ಟ ಎಂದು ದೂರ
ಉಳಿಯುವುದಲ್ಲ ಎಂದು ಸುಬ್ರಹ್ಮಣ್ಯದ ಎಸ್‌ಎಸ್‌ಪಿಯು ಕಾಲೇಜಿನ ಪ್ರಾಂಶುಪಾಲ
ಡಾ. ಸಂಕೀರ್ತ ಹೆಬ್ಬಾರ್ ಹೇಳಿದರು.
ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಸ್ವಾಯತ್ತ ಮಹಾವಿದ್ಯಾಲಯದ
ಟ್ರೈನಿಂಗ್ ಮತ್ತು ಪ್ಲೇಸ್‌ಮೆಂಟ್ ಸೆಲ್ ಹಾಗೂ ಐಕ್ಯೂಎಸಿ ವತಿಯಿಂದ ನಡೆದ
“ಅನ್‌ಲಾಕಿಂಗ್ ಯುವರ್ ಫ್ಯುಚರ್” ಎನ್ನುವ ವಿಷಯಾಧಾರಿತ ಕಾರ್ಯಾಗಾರದಲ್ಲಿ
ಮಾತನಾಡಿದ ಅವರು ಸಾಮಾನ್ಯ ವಿಜ್ಞಾನ, ಗಣಿತಕ್ಕೆ ಇರುವ
ಪ್ರಾಮುಖ್ಯತೆಯ ಬಗ್ಗೆ, ಎಂಎಸ್ಸಿ ಪ್ರವೇಶ ಪರೀಕ್ಷೆ ಇವುಗಳ ಬಗ್ಗೆಯೂ
ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಉಪಪ್ರಾಂಶುಪಾಲ ಪ್ರೊ.ಶಿವಪ್ರಸಾದ್ ಕೆ.ಎಸ್,
ಸ್ನಾತಕೋತ್ತರ ವಾಣಿಜ್ಯ ವಿಭಾಗದ ಉಪನ್ಯಾಸಕಿ ಶ್ವೇತಾ ಜೆ.ರಾವ್ ಮತ್ತು
ಕಾಲೇಜಿನ ಪದವಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸ್ನಾತಕೋತ್ತರ
ರಸಾಯನ ಶಾಸ್ತç ವಿಭಾಗದ ಪ್ರಾಧ್ಯಾಪಕಿ ಡಾ.ಸ್ಮಿತಾ ರೈ
ಕಾರ್ಯಕ್ರಮವನ್ನು ಸ್ವಾಗತಿಸಿ ನಿರೂಪಿಸಿದರು.

Related News

ವಿವೇಕಾನಂದ ಕಾಲೇಜಿನಲ್ಲಿ ‘ನಶಾ ಮುಕ್ತ ಭಾರತ’ ಜಾಗೃತಿ ಅಭಿಯಾನ;

ವಿವೇಕಾನಂದ ಕಾಲೇಜಿನಲ್ಲಿ ‘ನಶಾ ಮುಕ್ತ ಭಾರತ’…

ಪುತ್ತೂರು, ನ. 24; ನಶೆ ಮತ್ತು ಮದ್ಯವ್ಯಸನ…

ತಂತ್ರಜ್ಞಾನ ಮಾನವ ಜೀವನದ ಅವಿಭಾಜ್ಯಅಂಗ: ಡಾ. ರಾಜೇಶ್ವರಿ ಎಂ:ಇoಟರ್ನೆಟ್ ಆಫ್ ಥಿಂಗ್ಸ್ (ಐಓಟಿ) ಹ್ಯಾಂಡ್ಸ್-ಆನ್ ಕಾರ್ಯಾಗಾರ ಉದ್ಘಾಟನೆ;

ತಂತ್ರಜ್ಞಾನ ಮಾನವ ಜೀವನದ ಅವಿಭಾಜ್ಯಅಂಗ: ಡಾ.…

ಪುತ್ತೂರು ನ.24: ಇತ್ತೀಚಿನ ದಿನಗಳಲ್ಲಿ ಇಂಟರ್ನೆಟ್ ಆಫ್…

ವಿವೇಕಾನಂದ ಕಾಲೇಜಿನಲ್ಲಿ ಪರಿಸರ ರಕ್ಷಣಾದಿನಾಚರಣೆ ಹಾಗೂ ಜಾಗೃತಿ ಕಾರ್ಯಕ್ರಮ;

ವಿವೇಕಾನಂದ ಕಾಲೇಜಿನಲ್ಲಿ ಪರಿಸರ ರಕ್ಷಣಾದಿನಾಚರಣೆ ಹಾಗೂ…

ಪುತ್ತೂರು. ನ. 22: ಮನುಷ್ಯ ಯಾವಾಗ ನೈತಿಕ…