News & Updates

ಡಿಸೆಂಬರ್ 16 ರಂದು ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವವಿದ್ಯಾರ್ಥಿಗಳ ಜಿಲ್ಲಾಮಟ್ಟದ ಚೆಸ್ ಪಂದ್ಯಾಟ.

ಪುತ್ತೂರು. ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ)
ಪುತ್ತೂರು ಮತ್ತು ಬಾಬಿ ಫಿಶರ್ ಚೆಸ್ ಅಸೋಸಿಯೇಷನ್ (ರಿ) ಇದರ
ಆಶ್ರಯದಲ್ಲಿ ಕಾಲೇಜಿನ ಸುವರ್ಣ ಮಹೋತ್ಸವ ಸಭಾಭವನದಲ್ಲಿ
ಡಿಸೆಂಬರ್ 16 ರಂದು ಪ್ರಾಥಮಿಕ, ಪ್ರೌಢ ಮತ್ತು ಪದವಿ ಪೂರ್ವ
ವಿಭಾಗದ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಚೆಸ್ ಸ್ಪರ್ಧೆ ನಡೆಯಲಿದೆ.
ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಕಿರಿಯ
ಪ್ರಾಥಮಿಕ ವಿಭಾಗ (1ರಿಂದ 5ನೇ ತರಗತಿ ) ಹಿರಿಯ ಪ್ರಾಥಮಿಕ
ವಿಭಾಗ (6 ರಿಂದ 8 ನೇ ತರಗತಿ ) ಮತ್ತು ಪ್ರೌಢ ಹಾಗೂ
ಪದವಿಪೂರ್ವ ವಿಭಾಗ (9 ರಿಂದ 12ನೇ ತರಗತಿ) ದಲ್ಲಿ ನಡೆಯಲಿದೆ.
ಪ್ರತಿ ವಿಭಾಗದಲ್ಲಿಯೂ ಪ್ರಥಮ ಮೂರು ಸ್ಥಾನ ವಿಜೇತರಿಗೆ
ನಗದು ಬಹುಮಾನ ಮತ್ತು ಉತ್ತಮ 5 ಸ್ಥಾನ ಪಡೆದವರಿಗೆ
ಟ್ರೋಫಿಯನ್ನು ನೀಡಲಾಗುವುದು. ಭಾಗವಹಿಸುವ ಎಲ್ಲಾ
ವಿದ್ಯಾರ್ಥಿಗಳು ಸ್ವತಃ ಚೆಸ್ ಬೋರ್ಡ್ ಹಾಗೂ ಶಾಲಾ ಐ. ಡಿ. ಕಾರ್ಡ್ ಅಥವಾ
ಗುರುತಿನ ಪತ್ರ ಅನ್ನು ತರುವುದು. ಈ ಪಂದ್ಯಾಟಕ್ಕೆ ಪ್ರವೇಶ
ಶುಲ್ಕವಿದ್ದು ಪ್ರಾಥಮಿಕ ಶಾಲಾ ವಿಭಾಗ 200 ರೂಪಾಯಿ ಮತ್ತು
ಹೈಸ್ಕೂಲ್ ಹಾಗೂ ಪದವಿ ಪೂರ್ವ ವಿಭಾಗಕ್ಕೆ ರೂಪಾಯಿ 300
ಆಗಿರುತ್ತದೆ. ಭಾಗವಹಿಸುವ ಸ್ಪರ್ಧಿಗಳು ದಿನಾಂಕ 13.12.2024ರ
ಮೊದಲು ಹೆಸರು ನೋಂದಾಯಿಸಬೇಕೆAದು ಕಾಲೇಜಿನ ಪ್ರಕಟಣೆ
ತಿಳಿಸಿದೆ.

Related News

ವಿವೇಕಾನಂದ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ ರಚನೆ;

ವಿವೇಕಾನಂದ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ ರಚನೆ;

ಪುತ್ತೂರು: ಇಲ್ಲಿನ ವಿವೇಕಾನಂದ ಕಲಾ,ವಿಜ್ಞಾನ ಮತ್ತು ವಾಣಿಜ್ಯ…

ವಿವೇಕಾನಂದ ಕಾಲೇಜಿನಲ್ಲಿ ಆದಾಯ ತೆರಿಗೆ ಜಾಗೃತಿ ಕಾರ್ಯಕ್ರಮ;

ವಿವೇಕಾನಂದ ಕಾಲೇಜಿನಲ್ಲಿ ಆದಾಯ ತೆರಿಗೆ ಜಾಗೃತಿ…

ಪುತ್ತೂರು: ಆದಾಯ ತೆರಿಗೆಯು ಭಾರತ ಸರ್ಕಾರದ ಅತಿ…

ವೃತ್ತಿಜೀವನ ಯಶಸ್ಸಿಗೆ ಸಂವಹನ ಮೂಲ: ಪ್ರೊ. ಶ್ರೀಕೃಷ್ಣ ಗಣರಾಜ ಭಟ್;

ವೃತ್ತಿಜೀವನ ಯಶಸ್ಸಿಗೆ ಸಂವಹನ ಮೂಲ: ಪ್ರೊ.…

ಭಾಷಾ ಕೌಶಲ್ಯಗಳ ಐದು ದಿನಗಳ ಕಾರ್ಯಗಾರ ಉದ್ಘಾಟನೆ…