
ಪುತ್ತೂರು: ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘದಡಿಯಲ್ಲಿ
ನಡೆಯುತ್ತಿರುವ ವಿವೇಕಾನಂದ IAS ಅಧ್ಯಯನ ಕೇಂದ್ರ-
ಯಶಸ್ ಘಟಕದ ಆಶ್ರಯದಲ್ಲಿ ಡಿಸೆಂಬರ್ 25 ರಂದು ನಾಗರಿಕ ಸೇವಾ
ಪರೀಕ್ಷೆಗಳಿಗೆ ಉಚಿತ ತರಬೇತಿಯನ್ನು ನೀಡಲಾಗುವ ಯಶಸ್
ಘಟಕಕ್ಕೆ ಪ್ರವೇಶಾತಿ ಪಡೆಯಲು ರಾಜ್ಯದ ವಿವಿಧ ಕೇಂದ್ರಗಳಲ್ಲಿ
ಪ್ರವೇಶ ಪರೀಕ್ಷೆಯು ನಡೆಯಲಿದೆ ಎಂದು ಯಶಸ್ ಘಟಕದ
ಸಂಯೋಜಕ ಗೋವಿಂದರಾಜ ಶರ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯಶಸ್ ಘಟಕವು ವಿದ್ಯಾರ್ಥಿಗಳಿಗೆ ನಾಗರಿಕ ಸೇವಾ
ಪರೀಕ್ಷೆಗಳನ್ನು ಎದುರಿಸಲು ಉಚಿತ ತರಬೇತಿಯನ್ನು ನೀಡುವ
ಘಟಕವಾಗಿದ್ದು 2015 ರಲ್ಲಿ ಸ್ಥಾಪಿತವಾಗಿದೆ.
ಇದರಡಿಯಲ್ಲಿ ಪ್ರತಿವರ್ಷ
ವಿದ್ಯಾರ್ಥಿಗಳು ಪರಿಣಿತ ತರಬೇತುದಾರರಿಂದ ಉಚಿತ
ತರಬೇತಿಯನ್ನು ಪಡೆಯುತ್ತಿದ್ದಾರೆ.
ಈ ಪರೀಕ್ಷೆಯಲ್ಲಿ ಹತ್ತನೇ ತರಗತಿಯಲ್ಲಿ ಓದುತ್ತಿರುವ
ವಿದ್ಯಾರ್ಥಿಗಳು ಭಾಗವಹಿಸಬಹುದು.ಪರೀಕ್ಷೆಯು ರಾಜ್ಯದ ವಿವಿಧ 12
ಕೇಂದ್ರಗಳಲ್ಲಿ ನಡೆಯಲಿದೆ.ಯಶಸ್ ಪ್ರವೇಶಾತಿಯನ್ನು
ಪಡೆಯಲಿಚ್ಚಿಸುವ ವಿದ್ಯಾರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು
ಥಿಚಿshಚಿs.ಗಿiveಞಚಿಟಿಚಿಟಿಜಚಿeಜu.oಡಿg ನಿಂದ ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿ
ಸಂಬ0ಧಿತ ಶಾಲೆಯ ಮುಖ್ಯ ಶಿಕ್ಷಕರ ಸಹಿಯೊಂದಿಗೆ ಯಶಸ್
ಕಛೇರಿಗೆ ತಲುಪುವಂತೆ ಕಳುಹಿಸಬೇಕು ಅಥವಾ ವಿದ್ಯಾರ್ಥಿಗಳು
ಆನ್ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹುದು.ಅರ್ಜಿ ಸಲ್ಲಿಸಲು ಕೊನೆಯ
ದಿನಾಂಕ 20-12-2024.
ಪರೀಕ್ಷೆಯ ಕುರಿತಂತೆ ಹೆಚ್ಚಿನ ಮಾಹಿತಿಗೆ ಯಶಸ್ ಘಟಕದ
ಸಂಯೋಜಕ ಗೋವಿಂದರಾಜ ಶರ್ಮ +919901852117 ಇವರನ್ನು
ಸಂಪರ್ಕಿಸಬಹುದು.
