News & Updates

ನಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಉದ್ಯಮವನ್ನು ಸ್ಥಾಪಿಸಬೇಕು— ರಾಜಾರಾಮ್ ಬಲಿಪಗುಳಿ;

ಪುತ್ತೂರು, ಅಕ್ಟೋಬರ್ 15:

ನಾವು ಒಂದು ಉದ್ದಿಮೆಯನ್ನು ಸ್ಥಾಪಿಸಿದಾಗ ನಮಗೆ ನಾವೇ ಮಾಲಿಕರಾಗುತ್ತೇವೆ. ಶ್ರಮವನ್ನು ನಾವು ಅನುಭವಿಸುತ್ತೇವೆ. ಆಗ ಸಾರ್ಥಕ ಮನೋಭಾವವೂ ನಮಗಾಗುತ್ತದೆ. ಅಂತಾರಾಷ್ಟ್ರೀಯ ಮಟ್ಟಕ್ಕೆ ಉದ್ಯಮವನ್ನು ವಿಸ್ತರಿಸುವಾಗ ಸ್ಪರ್ಧಾತ್ಮಕ ಮನೋಭಾವ ಬೇಕು. ಕ್ರಿಯಾತ್ಮಕತೆ ಹಾಗೂ ವಿನೂತನತೆಯನ್ನೂ ಮೈಗೂಡಿಸಿಕೊಳ್ಳಬೇಕಾಗುತ್ತದೆ.
ನಮ್ಮ ಕನಸುಗಳನ್ನು ನನಸಾಗಿಸಬೇಕಿದ್ದರೆ ಛಲ ಹಾಗೂ ನಿರಂತರತೆ ಬೇಕು. ನಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಮುಂದುವರಿದು ಉದ್ಯಮ ಸ್ಥಾಪಿಸಬೇಕು ಎಂದು ಬಲಿಪಗುಳಿ ಇಕೋ ಬ್ಲಿಸ್ ಸಂಸ್ಥೆಯ ಮಾಲಕ ರಾಜಾರಾಮ್ ಬಲಿಪಗುಳಿ ತಿಳಿಸಿದರು.

ಇವರು ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ(ಸ್ವಾಯತ್ತ) ಇಲ್ಲಿ ವ್ಯವಹಾರ ಆಡಳಿತ ವಿಭಾಗ, ಮ್ಯಾನೇಜ್ಮೆಂಟ್ ಅಸೋಸಿಯೇಷನ್, ಉದ್ಯಮ ಅಭಿವೃದ್ಧಿ ಘಟಕ, ಐಕ್ಯೂಎಸಿ ಹಾಗೂ ಇಕೋ ಬ್ಲಿಸ್ ಸಂಸ್ಥೆಯ ಸಹಯೋಗದಲ್ಲಿ ನಡೆದ ಔದ್ಯಮಿಕ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು

ಉದ್ದಿಮೆ ನಡೆಸುವಾಗ ಅದರ ಕಾರ್ಯಚಟುವಟಿಕೆಗಳನ್ನು ಇತರರಿಗೂ ತಿಳಿಸಿಕೊಡಬೇಕು. ಆ ಮೂಲಕ ಉದ್ಯೋಗಾವಕಾಶಗಳನ್ನು ನಿರ್ಮಿಸಬೇಕು. ಕೆಲಸಗಾರರಿಗೆ ಬೇಕಾದ ವ್ಯವಸ್ಥೆ, ಅಗತ್ಯತೆಗಳನ್ನು ಪೂರೈಸುವುದು ಅಗತ್ಯ. ಸಂಸ್ಥೆಯೊಂದರ ಯಶಸ್ಸಿಗೆ ಈ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ. ಶ್ರೀಧರ ನಾಯಕ್ ಬಿ ಮಾತನಾಡಿ ಕೃಷಿ ಆಧಾರಿತ ಉದ್ದಿಮೆಯಲ್ಲಿ ಸಾಕಷ್ಟು ಅವಕಾಶಗಳಿವೆ. ಇವುಗಳು ಆರ್ಥಿಕತೆಗೆ ಪೂರಕವಾಗಿದೆ. ಇಂತಹಾ ಉದ್ದಿಮೆಗಳನ್ನು ಸ್ಥಾಪಿಸುವಲ್ಲಿ ಮನಮಾಡಬೇಕು ಎಂದರು.

ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿ ಕೃಷ್ಣ ಕೆ.ಎನ್ ಶುಭಹಾರೈಸಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ವ್ಯವಹಾರ ಆಡಳಿತ ವಿಭಾಗದ ವಿದ್ಯಾರ್ಥಿ ವಿವೇಕ್ ಹಾಗೂ ಅನುಶ್ರೀ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಸಾತ್ವೀ ಸ್ವಾಗತಿಸಿ ಶ್ರೀದೇವಿ ವಂದಿಸಿದರು.
ಅಕ್ಷತಾ ನಿರೂಪಿಸಿದರು.

Related News

ವಿವೇಕಾನಂದ ಕಾಲೇಜಿನಲ್ಲಿ ‘ನಶಾ ಮುಕ್ತ ಭಾರತ’ ಜಾಗೃತಿ ಅಭಿಯಾನ;

ವಿವೇಕಾನಂದ ಕಾಲೇಜಿನಲ್ಲಿ ‘ನಶಾ ಮುಕ್ತ ಭಾರತ’…

ಪುತ್ತೂರು, ನ. 24; ನಶೆ ಮತ್ತು ಮದ್ಯವ್ಯಸನ…

ತಂತ್ರಜ್ಞಾನ ಮಾನವ ಜೀವನದ ಅವಿಭಾಜ್ಯಅಂಗ: ಡಾ. ರಾಜೇಶ್ವರಿ ಎಂ:ಇoಟರ್ನೆಟ್ ಆಫ್ ಥಿಂಗ್ಸ್ (ಐಓಟಿ) ಹ್ಯಾಂಡ್ಸ್-ಆನ್ ಕಾರ್ಯಾಗಾರ ಉದ್ಘಾಟನೆ;

ತಂತ್ರಜ್ಞಾನ ಮಾನವ ಜೀವನದ ಅವಿಭಾಜ್ಯಅಂಗ: ಡಾ.…

ಪುತ್ತೂರು ನ.24: ಇತ್ತೀಚಿನ ದಿನಗಳಲ್ಲಿ ಇಂಟರ್ನೆಟ್ ಆಫ್…

ವಿವೇಕಾನಂದ ಕಾಲೇಜಿನಲ್ಲಿ ಪರಿಸರ ರಕ್ಷಣಾದಿನಾಚರಣೆ ಹಾಗೂ ಜಾಗೃತಿ ಕಾರ್ಯಕ್ರಮ;

ವಿವೇಕಾನಂದ ಕಾಲೇಜಿನಲ್ಲಿ ಪರಿಸರ ರಕ್ಷಣಾದಿನಾಚರಣೆ ಹಾಗೂ…

ಪುತ್ತೂರು. ನ. 22: ಮನುಷ್ಯ ಯಾವಾಗ ನೈತಿಕ…