News & Updates

ಭ್ರಮೆಗಳಿಂದ ಹೊರಬಂದಾಗ ಆತ್ಮಸಾಕ್ಷಾತ್ಕಾರವಾಗುತ್ತದೆ:ಡಾ. ಮನಮೋಹನ್ ಎಂ;

ಪುತ್ತೂರು, ಜೂ. 12: ಸಮಾಜದಲ್ಲಿ ಇರುವ ಸ್ಥಾನಮಾನಗಳನ್ನು ತ್ಯಜಿಸಿ,
ಶ್ರೀಮಂತಿಕೆಯನ್ನು ಬಿಟ್ಟು ಹೊರಬಂದಾಗ ಜೀವನದ ಅನುಭವ ಸಿಗುತ್ತದೆ
ಎಂದು ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ
(ಸ್ವಾಯತ್ತ) ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.
ಮನಮೋಹನ್ ಎಂ ಹೇಳಿದರು.
ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಮಹಾವಿದ್ಯಾಲಯ,
ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಕೇಂದ್ರ ವಿವೇಕಾನಂದ
ಸAಶೋಧನಾ ಕೇಂದ್ರ ಮತ್ತು ಐಕ್ಯೂಎಸಿ ಘಟಕದ ಸಹಯೋಗದಲ್ಲಿ
ನಡೆದ ಹದಿನೇಳನೇ ಆವೃತ್ತಿಯ ವಿವೇಕಸ್ಮೃತಿ ಉಪನ್ಯಾಸ ಮಾಲಿಕೆಯಲ್ಲಿ
ಮಾತನಾಡಿದ ಇವರು ಆತ್ಮಸಾಕ್ಷಾತ್ಕಾರವಾದಾಗ ನಿರ್ಧಾರಗಳು
ಗಟ್ಟಿಯಾಗುತ್ತದೆ. ಭ್ರಮೆಗಳಿಂದ ಹೊರಬಂದಾಗ, ಬಂಧಗಳನ್ನು
ತ್ಯಜಿಸಿದಾಗ ನಾವು ಭಯಮುಕ್ತರಾಗುವ ಮೂಲಕ
ಆತ್ಮಸಾಕ್ಷಾತ್ಕಾರವಾಗುತ್ತದೆ ಎಂಬುದನ್ನು ಸ್ವಾಮಿ ವಿವೇಕಾನಂದರು ನಿರೂಪಿಸಿ
ತೋರಿಸಿದ್ದಾರೆ. ಅವರ ಕವನಗಳಲ್ಲಿ ಈ ಬಗ್ಗೆ ಉಲ್ಲೇಖವಿದೆ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ
ಡಾ. ಶ್ರೀಧರ್ ನಾಯ್ಕ್ ಮಾತನಾಡಿ ವಿವೇಕಾನಂದರ ಕಾವ್ಯಾತ್ಮಕ
ವಿಶ್ಲೇಷಣೆಗಳಲ್ಲಿರುವಂತೆ ನಾವೆಲ್ಲರೂ ಕರ್ತವ್ಯತತ್ಪರರಾಗಬೇಕಿದೆ
ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಐಕ್ಯೂಎಸಿ ಸಂಯೋಜಕಿ ರವಿಕಲಾ
ಉಪಸ್ಥಿತರಿದ್ದರು.
ಡಾ. ವಿಜಯಸರಸ್ವತಿ ಸ್ವಾಗತಿಸಿ, ಡಾ. ವಿದ್ಯಾ ಎಸ್. ವಂದಿಸಿದರು. ಸ್ವಾತಿ ಎನ್.
ನಿರೂಪಿಸಿದರು

Related News

ವಿವೇಕಾನಂದ ಕಾಲೇಜಿನಲ್ಲಿ ಅತಿಥಿ ಉಪನ್ಯಾಸ ಕಾರ್ಯಕ್ರಮ;

ವಿವೇಕಾನಂದ ಕಾಲೇಜಿನಲ್ಲಿ ಅತಿಥಿ ಉಪನ್ಯಾಸ ಕಾರ್ಯಕ್ರಮ;

ಪುತ್ತೂರು, ಫೆ. ೦೨ : ನಮ್ಮನ್ನು ಯೋಚಿಸುವಂತೆ…

ದೇಶವೇ ಪ್ರಥಮ ಆದ್ಯತೆಯಾಗಿರಲಿ-ಡಾ. ಕಲ್ಲಡ್ಕ ಪ್ರಭಾಕರ ಭಟ್;

ದೇಶವೇ ಪ್ರಥಮ ಆದ್ಯತೆಯಾಗಿರಲಿ-ಡಾ. ಕಲ್ಲಡ್ಕ ಪ್ರಭಾಕರ…

ಪುತ್ತೂರು: ರಾಮನನ್ನು ನಾವು ಸದಾ ನೆನಪಿಡಬೇಕಾದಅಗತ್ಯವಿದೆ. ಎಲ್ಲಾ…

ವಿವೇಕಾನಂದ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ.

ವಿವೇಕಾನಂದ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ.

ಪುತ್ತೂರು: ನಾಯಕತ್ವ ಎನ್ನುವುದು ನಮ್ಮೊಳಗಿನಒಳ್ಳೆಯತನವನ್ನು ಹೊರಗೆ ತರುವ…