News & Updates

ವಿವೇಕಾನಂದ ಕಾಲೇಜಿನಲ್ಲಿ ಆಹಾರಮೇಳ;

ಪುತ್ತೂರು: ಒಂದು ವ್ಯವಹಾರವನ್ನು ನಡೆಸುವುದಕ್ಕಿಂತ
ಮೊದಲು ಮಾರ್ಕೆಟಿಂಗ್ ಬಗೆಗೆ ನಾವು ಮುಖ್ಯವಾಗಿ
ಗಮನಿಸಿಕೊಳ್ಳಬೇಕು. ಆಹಾರ ಉದ್ಯಮದಲ್ಲಿ ಮುಖ್ಯವಾಗಿ
ಬೇಕಾಗಿರುವುದು ಪ್ಯಾಕಿಂಗ್ ಗಳ ಮೇಲೆ ಗಮನ ಮತ್ತು
ಅದು ವಿಶಿಷ್ಟವಾಗಿರುವಂತೆ ನೋಡಿಕೊಳ್ಳುವ ಸಾಮರ್ಥ್ಯ.
ಇದನ್ನೆಲ್ಲ ಸಾಧಿಸಲು ತಾಳ್ಮೆಯೂ ಸಹ ಅಷ್ಟೇ ಮುಖ್ಯ.
ಉದ್ಯಮಗಳು ಯಶಸ್ವಿಯಾಗಬೇಕಾದರೆ ಸಂಪರ್ಕವೂ ಅತೀ
ಅವಶ್ಯ ಎಂದು ಪುತ್ತೂರಿನ ದಕ್ಷಿಣ ಸ್ವಾದಿಷ್ಟ ಹೋಂ ಪ್ರಾಡಕ್ಟ್ಸ್
ಮಾಲಕಿ ಆಶಾ ನಾಯಕ್ ಹೇಳಿದರು.
ಇವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ(
ಸ್ವಾಯತ್ತ) ಪುತ್ತೂರು ಇಲ್ಲಿನ ವ್ಯವಹಾರ ಆಡಳಿತ ನಿರ್ವಹಣಾ
ವಿಭಾಗ ಮತ್ತು ಐಕ್ಯೂಎಸಿ ಸಹಯೋಗದೊಂದಿಗೆ ನಡೆದ ಸ್ವಾಧ
ಸಂಭ್ರಮ -2025 ಆಹಾರ ಮೇಳದಲ್ಲಿ ಕಾರ್ಯಕ್ರಮದ
ಉದ್ಘಾಟಕಿಯಾಗಿ ಮಾತನಾಡಿದರು .
ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ
ಮುರಳಿಕೃಷ್ಣ ಕೆ.ಎನ್ ಮಾತನಾಡಿ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಶ್ರೀಧರ್ ನಾಯ್ಕ್ .ಬಿ, ಉಪ
ಪ್ರಾಂಶುಪಾಲ ಶ್ರೀಕೃಷ್ಣ ಗಣರಾಜ ಭಟ್, ಸ್ನಾತಕೋತ್ತರ
ವಿಭಾಗದ ಮುಖ್ಯಸ್ಥೆ ಡಾ. ವಿಜಯ ಸರಸ್ವತಿ,ವ್ಯವಹಾರ ನಿರ್ವಹಣಾ
ವಿಭಾಗದ ಮುಖ್ಯಸ್ಥೆ ರೇಖಾ.ಪಿ ಹಾಗೂ ಮತ್ತಿತರು
ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಯಜ್ಞಶ್ರೀ ನಿರ್ವಹಿಸಿದರು.

Related News

ವಿವೇಕಾನಂದ ಕಾಲೇಜಿನಲ್ಲಿ ಹ್ಯಾಕಥಾನ್ ಕಾರ್ಯಗಾರ“ಹ್ಯಾಕಥಾನ್ ಸೃಜನಶೀಲತೆ ಮತ್ತು ಕೌಶಲ್ಯಾಭಿವೃದ್ಧಿಗೆ ಪ್ರೇರಣೆ” – ಡಾ. ವಿಜಯ್ ವಿ. ಎಸ್;

ವಿವೇಕಾನಂದ ಕಾಲೇಜಿನಲ್ಲಿ ಹ್ಯಾಕಥಾನ್ ಕಾರ್ಯಗಾರ“ಹ್ಯಾಕಥಾನ್ ಸೃಜನಶೀಲತೆ…

ಪುತ್ತೂರು: “ಇಂದಿನ ಯುಗದಲ್ಲಿ ಶಿಕ್ಷಣ ಮಾತ್ರವಲ್ಲದೆನಮ್ಮಲ್ಲಿರುವ ಕೌಶಲ್ಯಗಳು…

ಮಂಗಳೂರು ವಿವಿ ಅಂತರ್ ಕಾಲೇಜು ಚೆಸ್ ಪಂದ್ಯಾಟದಲ್ಲಿವಿವೇಕಾನoದ ಕಾಲೇಜಿಗೆ ಪ್ರಶಸ್ತಿ;

ಮಂಗಳೂರು ವಿವಿ ಅಂತರ್ ಕಾಲೇಜು ಚೆಸ್…

ಪುತ್ತೂರು: ಇತ್ತೀಚೆಗೆ ಉಡುಪಿಯ ಉಪೇಂದ್ರ ಪೈಮೆಮೋರಿಯಲ್ ಕಾಲೇಜು…

ವಿವೇಕಾನಂದ ಕಾಲೇಜಿನಲ್ಲಿ ಪ್ರಾಧ್ಯಾಪಕರ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮ;

ವಿವೇಕಾನಂದ ಕಾಲೇಜಿನಲ್ಲಿ ಪ್ರಾಧ್ಯಾಪಕರ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮ;

ಪುತ್ತೂರು, ಅ.೨೭: ಒಬ್ಬ ಉತ್ತಮ ಶಿಕ್ಷಕ ಸಂವಹನ…