News & Updates

ವಿವೇಕಾನಂದ ಕಾಲೇಜಿನಲ್ಲಿ ‘ನಶಾ ಮುಕ್ತ ಭಾರತ’ ಜಾಗೃತಿ ಅಭಿಯಾನ;

ಪುತ್ತೂರು, ನ. 24; ನಶೆ ಮತ್ತು ಮದ್ಯವ್ಯಸನ ಅನ್ನುವುದು
ಭಾರತದ ಯುವಜನಾಂಗವನ್ನು ಕಾಡುವ ಒಂದು ದೊಡ್ಡ
ಸವಾಲು. ಯುವ ಜನಾಂಗ ವ್ಯಸನ ಮುಕ್ತರಾಗಬೇಕು ಮತ್ತು
ಅದನ್ನು ತಡೆಗಟ್ಟುವಲ್ಲಿ ಕಾರ್ಯಪ್ರವೃತ್ತರಾಗಬೇಕು.
ಭವಿಷ್ಯದ ಭಾರತವನ್ನು ನಿರ್ಮಾಣ ಮಾಡುವ ಯುವಜನರು ನಶಾ
ಮುಕ್ತ ಭಾರತಕ್ಕಾಗಿ ಕೈ ಜೋಡಿಸಬೇಕು ಎಂದು
ಸ್ನಾತಕೋತ್ತರ ಸಂಶೋಧನ ಕೇಂದ್ರದ ನಿರ್ದೇಶಕಿ ಡಾ.
ವಿಜಯ ಸರಸ್ವತಿ ಹೇಳಿದರು.
ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ)
ಪುತ್ತೂರು ಮತ್ತು ಐಕ್ಯೂಎಸಿ ಘಟಕದ ಸಂಯುಕ್ತ
ಆಶ್ರಯದಲ್ಲಿ ರಾಷ್ಟೀಯ ಐಕ್ಯತಾ ಸಪ್ತಾಹ ಪ್ರಯುಕ್ತ
ನಶಾಮುಕ್ತ ಭಾರತ ಅಭಿಯಾನ ಯೋಜನೆಯ 5ನೇ
ವಾರ್ಷಿಕೋತ್ಸವದ ಅಂಗವಾಗಿ ಪ್ರತಿಜ್ಞಾವಿಧಿಯನ್ನು
ಬೋಧಿಸಲಾಯಿತು.
ಈ ಸಂದರ್ಭದಲ್ಲಿ ಕಾಲೇಜಿನ ಉಪಪ್ರಾಂಶುಪಾಲ ಪ್ರೊ. ಶ್ರೀಕೃಷ್ಣ
ಗಣರಾಜ್ ಭಟ್ ಹಾಗೂ ಸ್ನಾತಕೋತ್ತರ ಪದವಿ ವಿಭಾಗದ
ಉಪನ್ಯಾಸಕರು ಉಪಸ್ಥಿತರಿದ್ದರು. ಬಳಿಕ ವಿದ್ಯಾರ್ಥಿಗಳಿಂದ
ಕಾಲೇಜಿನ ಆವರಣದಲ್ಲಿ ನಶಾ ಮುಕ್ತ ಭಾರತ ಜಾಗೃತಿ ಜಾಥ
ನಡೆಯಿತು.

Related News

ವಿವೇಕಾನಂದ ಕಾಲೇಜಿನಲ್ಲಿ ಅತಿಥಿ ಉಪನ್ಯಾಸ ಕಾರ್ಯಕ್ರಮ;

ವಿವೇಕಾನಂದ ಕಾಲೇಜಿನಲ್ಲಿ ಅತಿಥಿ ಉಪನ್ಯಾಸ ಕಾರ್ಯಕ್ರಮ;

ಪುತ್ತೂರು, ಫೆ. ೦೨ : ನಮ್ಮನ್ನು ಯೋಚಿಸುವಂತೆ…

ದೇಶವೇ ಪ್ರಥಮ ಆದ್ಯತೆಯಾಗಿರಲಿ-ಡಾ. ಕಲ್ಲಡ್ಕ ಪ್ರಭಾಕರ ಭಟ್;

ದೇಶವೇ ಪ್ರಥಮ ಆದ್ಯತೆಯಾಗಿರಲಿ-ಡಾ. ಕಲ್ಲಡ್ಕ ಪ್ರಭಾಕರ…

ಪುತ್ತೂರು: ರಾಮನನ್ನು ನಾವು ಸದಾ ನೆನಪಿಡಬೇಕಾದಅಗತ್ಯವಿದೆ. ಎಲ್ಲಾ…

ವಿವೇಕಾನಂದ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ.

ವಿವೇಕಾನಂದ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ.

ಪುತ್ತೂರು: ನಾಯಕತ್ವ ಎನ್ನುವುದು ನಮ್ಮೊಳಗಿನಒಳ್ಳೆಯತನವನ್ನು ಹೊರಗೆ ತರುವ…