News & Updates

ವಿವೇಕಾನಂದ ಕಾಲೇಜಿನಲ್ಲಿ ಪತ್ರಿಕೋದ್ಯಮವಿದ್ಯಾರ್ಥಿಗಳಿಗೆ ವಿಚಾರ ಸಂವಾದ;ಕಾರ್ಯಕ್ರಮಮಾಧ್ಯಮ ಕ್ಷೇತ್ರದಲ್ಲಿ ಬೆಳೆಯಲು ಶ್ರಮ ಅಗತ್ಯ

ಶ್ರವಣ್ ಕುಮಾರ್ ನಾಳ

Oplus_131072

ಪುತ್ತೂರು,ಮೇ7: ಮಾಧ್ಯಮ ಕ್ಷೇತ್ರವು ಬಹಳ
ವಿಸ್ತಾರಗೊಳ್ಳುತ್ತಾ ಬಂದಿದೆ. ಡಿಜಿಟಲೀಕರಣದಿಂದಾಗಿ ಮಾಧ್ಯಮ
ಕ್ಷೇತ್ರದಲ್ಲಿ ಹೊಸ ಪರ್ವ ಆರಂಭವಾಯಿತು. ಕೆಲವು ವರ್ಷಗಳಿಂದ
ಪತ್ರಿಕೋದ್ಯಮದಲ್ಲಿ ಅನೇಕ ಬದಲಾವಣೆಗಳು ಉಂಟಾಗಿದೆ..
ಪತ್ರಿಕೋದ್ಯಮದಲ್ಲಿ ತುಂಬಾ ಆಯಾಮಗಳಿವೆ. ಮಾಧ್ಯಮ
ಕ್ಷೇತ್ರದಲ್ಲಿ ಬೆಳೆಯಲು ಶ್ರಮದ ಅವಶ್ಯಕತೆಯಿದೆ ಹಾಗೂ
ಪತ್ರಕರ್ತರಿಗೆ ಸಮಾಜವನ್ನು ಉನ್ನತಿಯತ್ತ ಕೊಂಡೊಯ್ಯುವ
ಜವಾಬ್ದಾರಿಯಿದೆ. ಹಾಗಾಗಿ ಮುಂದೆ ಪತ್ರಿಕೋದ್ಯಮದಲ್ಲಿ ಕರ‍್ಯ
ನಿರ್ವಹಿಸಲು ಇಚ್ಛಿಸುವವರು ಈಗಾಗಲೇ ಪೂರ್ವ ತಯಾರಿಯನ್ನು
ಮಾಡಿಕೊಳ್ಳಬೇಕಾಗಿದೆ. ಪತ್ರಕರ್ತರು ಪತ್ರಿಕಾ
ಸ್ವಾತಂತ್ರ‍್ಯವನ್ನು ಅರ್ಥೈಸಿಕೊಂಡು ಕೆಲಸ ಮಾಡಬೇಕು ಎಂದು
ವಿಜಯವಾಣಿಯ ಮಂಗಳೂರಿನ ವರದಿಗಾರ ಶ್ರವಣ್ ಕುಮಾರ್
ನಾಳ ಹೇಳಿದರು.
ಇವರು ಪುತ್ತೂರಿನ ವಿವೇಕಾನಂದ ಕಲಾ,ವಿಜ್ಞಾನ ಮತ್ತು ವಾಣಿಜ್ಯ
ಮಹಾವಿದ್ಯಾಲಯ (ಸ್ವಾಯತ್ತ)ದ ಪದವಿ ಪತ್ರಿಕೋದ್ಯಮ ವಿಭಾಗದ
ವತಿಯಿಂದ ಆಯೋಜಿಸಿದ ವಿಚಾರ ಸಂವಾದ ಕಾರ್ಯಕ್ರಮದಲ್ಲಿ
ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪತ್ರಿಕೊದ್ಯಮ ವಿಭಾಗದ ಮುಖ್ಯಸ್ಥೆ
ಭವ್ಯಾ.ಪಿ.ಆರ್ ನಿಡ್ಪಳ್ಳಿ ಮಾತನಾಡಿ, ಮಾಧ್ಯಮ ಎನ್ನುವುದು
ಪ್ರಜಾಪ್ರಭುತ್ವದ ನಾಲ್ಕನೇಯ ಅಂಗವಾಗಿ ಕರ‍್ಯನಿರ್ವಹಿಸುತ್ತದೆ.
ಹಾಗಾಗಿ ಪತ್ರಿಕೋದ್ಯಮದಲ್ಲಿ ಕರ‍್ಯನಿರ್ವಹಿಸುತ್ತಿರುವ
ನಮಗೆಲ್ಲರಿಗೂ ಹೆಚ್ಚಿನ ಜವಾಬ್ದಾರಿಗಳು ಇರುತ್ತದೆ. ಸಮಾಜದ
ಸ್ವಾಥ್ಯವನ್ನು ಕಾಪಾಡಿಕೊಂಡು ಮುಂದುವರೆಯಬೇಕು ಎಂದು
ಅಭಿಪ್ರಾಯಪಟ್ಟರು.
ವೇದಿಕೆಯಲ್ಲಿ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಹವ್ಯಶ್ರೀ ಪಿ
ಕೆ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿನಿ ದೀಪ್ತಿ
ಅಡ್ಡಂತಡ್ಕ ಸ್ವಾಗತಿಸಿ, ಲತಾ ಚೆಂಡೆಡ್ಕ ವಂದಿಸಿ, ಸಂಶೀನಾ ಸೂರ್ಯ
ನಿರೂಪಿಸಿದರು.

Related News

ವಿವೇಕಾನಂದ ಕಾಲೇಜಿನಲ್ಲಿ ಖೋಖೋ ಚಾಂಪಿಯನ್ಶಿಪ್ ಅಲ್ಟಿಮೇಟ್ ಟ್ರೋಪಿ -2024

ವಿವೇಕಾನಂದ ಕಾಲೇಜಿನಲ್ಲಿ ಖೋಖೋ ಚಾಂಪಿಯನ್ಶಿಪ್ ಅಲ್ಟಿಮೇಟ್…

ಪುತ್ತೂರು,ಮೇ.27: ಕ್ರೀಡೆ ಎನ್ನುವುದು ನಮ್ಮ ಸದೃಢಆರೋಗ್ಯಕ್ಕೆ ಬಹಳ…

ವಿವೇಕಾನಂದ ಕಾಲೇಜಿನಲ್ಲಿ ಕಲಾ ಸಾಮ್ರಾಟ್-2024 ಕಾರ್ಯಕ್ರಮ

ವಿವೇಕಾನಂದ ಕಾಲೇಜಿನಲ್ಲಿ ಕಲಾ ಸಾಮ್ರಾಟ್-2024 ಕಾರ್ಯಕ್ರಮ

ಪುತ್ತೂರು,ಮೇ.24ವಿದ್ಯಾರ್ಥಿಗಳಲ್ಲಿ ಕೌಶಲ್ಯದ ಜೊತೆ ಒಂದಿಷ್ಟು ಸಂಸ್ಕಾರ ಇರಬೇಕು…

ವಿವೇಕಾನಂದ ಕಾಲೇಜಿನಲ್ಲಿ ಕಾಮರ್ಸ್ ಫೆಸ್ಟ್ ಏಕತ್ರ -2024

ವಿವೇಕಾನಂದ ಕಾಲೇಜಿನಲ್ಲಿ ಕಾಮರ್ಸ್ ಫೆಸ್ಟ್ ಏಕತ್ರ…

ಪುತ್ತೂರು, ಮೇ.22:ಒಂದು ಉದ್ಯಮವನ್ನು ಯಶಸ್ವಿಯಾಗಿ ನಡೆಸಲು ಹಲವಾರು…