News & Updates

ವಿವೇಕಾನಂದ ಪದವಿ ಕಾಲೇಜಿನಲ್ಲಿ 2024-2025 ವಿದ್ಯಾರ್ಥಿ ಸಂಘದ ರಚನೆ

Oplus_131072
Oplus_131072

ಪುತ್ತೂರು, ಆ. 22: ಇಲ್ಲಿನ ವಿವೇಕಾನಂದ ಕಲಾ,ವಿಜ್ಞಾನ ಮತ್ತು
ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಇಲ್ಲಿ 2024-25 ನೇ ಸಾಲಿನ ವಿದ್ಯಾರ್ಥಿ
ಸಂಘವನ್ನು ಚುನಾವಣೆಯ ಮುಖಾಂತರ ರಚಿಸಲಾಯಿತು.
ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಿ ಅಂತಿಮ ವರ್ಷದ ಬಿಬಿಎ
ವಿದ್ಯಾರ್ಥಿ ಕೆ ಆಶೀಶ್ ಆಳ್ವ, ಕಾರ್ಯದರ್ಶಿಯಾಗಿ ಬಿಸಿಎ ವಿಭಾಗದ ನಿಖಿಲ್
ಕುಮಾರ್ ಕೆ. ಟಿ ಜೊತೆ ಕಾರ್ಯದರ್ಶಿಯಾಗಿ ಕಲಾ ವಿಭಾಗದ ಪೃಥ್ವಿ
ಆರ್ ಆಳ್ವ ಆಯ್ಕೆಯಾದರು.
ಚುನಾವಣೆಯು ಕಾಲೇಜಿನ ಮುಖ್ಯ ಚುನಾವಣಾಧಿಕಾರಿ ಮತ್ತು
ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಅರುಣ್ ಪ್ರಕಾಶ್ ತಂಡದ
ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ
ಕಾಲೇಜಿನ ಪ್ರಾಂಶುಪಾಲ ಪ್ರೊ.ವಿಷ್ಣು ಗಣಪತಿ ಭಟ್ ಆಶಯದ
ನುಡಿಗಳನ್ನಾಡಿದರು. ಕಾಲೇಜಿನ ಆಡಳಿತ ಮಂಡಳಿ, ಉಪನ್ಯಾಸಕ
ಹಾಗೂ ಉಪನ್ಯಾಸಕೇತರ ವೃಂದ ಹಾಗೂ ವಿದ್ಯಾರ್ಥಿಗಳು
ಶುಭ ಹಾರೈಸಿದರು.

Related News

ವಿವೇಕಾನಂದ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ ರಚನೆ;

ವಿವೇಕಾನಂದ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ ರಚನೆ;

ಪುತ್ತೂರು: ಇಲ್ಲಿನ ವಿವೇಕಾನಂದ ಕಲಾ,ವಿಜ್ಞಾನ ಮತ್ತು ವಾಣಿಜ್ಯ…

ವಿವೇಕಾನಂದ ಕಾಲೇಜಿನಲ್ಲಿ ಆದಾಯ ತೆರಿಗೆ ಜಾಗೃತಿ ಕಾರ್ಯಕ್ರಮ;

ವಿವೇಕಾನಂದ ಕಾಲೇಜಿನಲ್ಲಿ ಆದಾಯ ತೆರಿಗೆ ಜಾಗೃತಿ…

ಪುತ್ತೂರು: ಆದಾಯ ತೆರಿಗೆಯು ಭಾರತ ಸರ್ಕಾರದ ಅತಿ…

ವೃತ್ತಿಜೀವನ ಯಶಸ್ಸಿಗೆ ಸಂವಹನ ಮೂಲ: ಪ್ರೊ. ಶ್ರೀಕೃಷ್ಣ ಗಣರಾಜ ಭಟ್;

ವೃತ್ತಿಜೀವನ ಯಶಸ್ಸಿಗೆ ಸಂವಹನ ಮೂಲ: ಪ್ರೊ.…

ಭಾಷಾ ಕೌಶಲ್ಯಗಳ ಐದು ದಿನಗಳ ಕಾರ್ಯಗಾರ ಉದ್ಘಾಟನೆ…