News & Updates

ವಿವೇಕಾನಂದ ಮಹಾವಿದ್ಯಾಲಯದಲ್ಲಿ ಟೆಕ್ನೋ ಫ್ಯೂಷನ್-2024ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ ಕೃತಕ ಬುದ್ಧಿಮತ್ತೆ

ಅಭಿವೃದ್ಧಿಯ ಇಂಧನ: ಕೌಶಿಕ್ ಜಿ ಎನ್

ಪುತ್ತೂರು, ಮೇ. 30:   ಆಧುನಿಕ ಯುಗದಲ್ಲಿ ತಂತ್ರಜ್ಞಾನ, ಕೃತಕ
ಬುದ್ಧಿಮತ್ತೆಯನ್ನು ಅಭಿವೃದ್ಧಿಯ ಇಂಧನ ಎಂದು ಪರಿಗಣಿಸಲಾಗುತ್ತದೆ. ಗಣಕ
ವಿಜ್ಞಾನವನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳು ಕೃತಕ ಬುದ್ಧಿಮತ್ತೆಯನ್ನು
ಬಳಸಿ, ಹೊಸ ಉದ್ಯಮಗಳನ್ನು ಸೃಷ್ಟಿಸಿ ದೇಶದ ಆರ್ಥಿಕ ವಿಕಾಸಕ್ಕೆ ಕಾರಣವಾಗಬೇಕು
ಎಂದು ಧಾರವಾಡ ನ್ಯಾಷನಲ್ ಫೋರೆನ್ಸಿಕ್ ಸಯನ್ಸ್ ಯುನಿವರ್ಸಿಟಿಯ ಸಹಾಯಕ
ಪ್ರಾಧ್ಯಾಪಕ ಹಾಗೂ ವಿವೇಕಾನಂದ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿ ಕೌಶಿಕ್ ಜಿ ಎನ್
ಅಭಿಪ್ರಾಯಪಟ್ಟರು.
ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ
(ಸ್ವಾಯತ್ತ ) ಇಲ್ಲಿನ  ಗಣಕ ವಿಜ್ಞಾನ ವಿಭಾಗ, ಐಟಿ ಕ್ಲಬ್ ಮತ್ತು ಐಕ್ಯೂಎಸಿ ಇದರ
ಸಹಯೋಗದಲ್ಲಿ ಆಯೋಜಿಸಲಾದ ಟೆಕ್ನೋ ಫ್ಯೂಷನ್ 2024 ಕೌಶಲ್ಯ ಅಭಿವೃದ್ಧಿ
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಗ್ನಿಝೆಂಟ್ ಬೆಂಗಳೂರು, ಇಲ್ಲಿನ ಟೆಕ್ ಲೀಡ್
ಹಾಗೂ ವಿವೇಕಾನಂದ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿನಿ ಶ್ರೇಯಾ ಎಸ್
ಮಾತನಾಡಿ, ವಿದ್ಯಾರ್ಥಿಗಳು ತಮ್ಮಲ್ಲಿರುವ ಕೌಶಲ್ಯಗಳನ್ನು
ಗುರುತಿಸಿಕೊಳ್ಳಬೇಕು.  ತಮ್ಮ ಕೌಶಲ್ಯಗಳನ್ನು ಉಪಯೋಗಿಸಿ ಸ್ಪರ್ಧಾತ್ಮಕ
ಯುಗದಲ್ಲಿರುವ ವಿಪುಲ ಅವಕಾಶಗಳನ್ನು ಬಳಸಿಕೊಂಡರೆ ಉತ್ತಮ
ಭವಿಷ್ಯವನ್ನು ರೂಪಿಸಿಕೊಳ್ಳಬಹುದು ಎಂದರು.
ಕಾಲೇಜಿನ ಪ್ರಾಂಶುಪಾಲ ಪ್ರೊ ವಿಷ್ಣುಗಣಪತಿ ಭಟ್ ಪ್ರಾಸ್ತಾವಿಕ
ಮಾತುಗಳನ್ನಾಡಿದರು. ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ  ಡಾ ಶ್ರೀಪತಿ
ಕಲ್ಲೂರಾಯ ಶುಭಾಶಂಸನೆ ಗೈದರು. ವೇದಿಕೆಯಲ್ಲಿ ಗಣಕ ವಿಜ್ಞಾನ ವಿಭಾಗದ
ಮುಖ್ಯಸ್ಥ ಪ್ರಕಾಶ್ ಕುಮಾರ್, ಐಟಿ ಕ್ಲಬ್ ಕನ್ವೀನರ್ ಹೇಮಾ ಸುಭಾಶಿನಿ, ಐಟಿ ಕ್ಲಬ್ ವಿದ್ಯಾರ್ಥಿ
ಪ್ರತಿನಿಧಿ ತೃಪ್ತಿ ಉಪಸ್ಥಿತರಿದ್ದರು. ಹೇಮಾ ಸುಭಾಶಿನಿ ಸ್ವಾಗತಿಸಿ, ತೃಪ್ತಿ
ವಂದಿಸಿದರು.  ಭೂಮಿಕಾ ಬಿ ಎಸ್ ಕಾರ್ಯಕ್ರಮ ನಿರೂಪಿಸಿದರು.
ಸಮಾರೋಪ ಸಮಾರಂಭ

ಟೆಕ್ನೋ ಫ್ಯೂಷನ್ 2024ರ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ
ಆಗಮಿಸಿದ ಉದ್ಯಮಿ ಹಾಗೂ ಸರ್ವಜ್ಞ  ಎಜು ಟೆಕ್ ಪ್ರೈವೇಟ್ ಲಿಮಿಟೆಡ್ ನ ಸ್ಥಾಪಕ ಶ್ರೀನಿಧಿ
ರವಿಶಂಕರ್ ಮಾತನಾಡಿ, ದೇಶದಲ್ಲಿ ಜನಸಂಖ್ಯೆ ಹೆಚ್ಚಿದಂತೆ ನಿರುದ್ಯೋಗ
ಸಮಸ್ಯೆಯೂ ಹೆಚ್ಚುತ್ತಿದೆ. ಈ ಡಿಜಿಟಲ್ ಯುಗದಲ್ಲಿ ಯಾವುದೇ ಕ್ಷೇತ್ರದಲ್ಲಿ
ಪ್ರವೇಶಿಸಲು ಅಗತ್ಯವಾದ ಮೂಲಭೂತ ಕೌಶಲ್ಯಗಳನ್ನು ತಂತ್ರಜ್ಞಾನದಿoದಲೇ
ಕಲಿಯಬಹುದು ಎಂದು ಹೇಳಿದರು.

      ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜು ಆಡಳಿತ ಮಂಡಳಿಯ
ಸoಚಾಲಕ ಮುರಳಿಕೃಷ್ಣ ಕೆ ಎನ್ ಮಾತನಾಡಿ, ದೇಶದಲ್ಲಿ ಉದ್ಯೋಗದಾತರಿಗಿಂತ
ಉದ್ಯೋಗಿಗಳ ಸಂಖ್ಯೆ ಜಾಸ್ತಿ ಇದೆ. ಹಾಗಾಗಿ ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆಯ
ಮನೋಭಾವ ಬರಬೇಕು ಎಂದು ಅಭಿಪ್ರಾಯಪಟ್ಟರು.
ವೇದಿಕೆಯಲ್ಲಿ  ಕಾಲೇಜಿನ ವಿಶೇಷಾಧಿಕಾರಿ ಹಾಗೂ ಇತಿಹಾಸ ವಿಭಾಗದ ಮುಖ್ಯಸ್ಥ ಡಾ
ಶ್ರೀಧರ್ ನಾಯ್ಕ್, ಪ್ರಾಂಶುಪಾಲ ಪ್ರೊ ವಿಷ್ಣುಗಣಪತಿ ಭಟ್, ಐಕ್ಯೂಎಸಿ ಸಂಯೋಜಕ
ಪ್ರೊ ಶಿವಪ್ರಸಾದ್ ಕೆ ಎಸ್,  ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರಕಾಶ್ ಕುಮಾರ್, ಐಟಿ
ಕ್ಲಬ್ ಕನ್ವೀನರ್ ಹೇಮಾಸುಭಾಶಿನಿ, ಐಟಿ ಕ್ಲಬ್ ವಿದ್ಯಾರ್ಥಿ ಪ್ರತಿನಿಧಿ ತೃಪ್ತಿ  ಉಪಸ್ಥಿತರಿದ್ದರು.
ಉಪನ್ಯಾಸಕ ಅರವಿಂದ ಶರ್ಮ ಸ್ವಾಗತಿಸಿ, ವಿದ್ಯಾಶ್ರೀ ವಂದಿಸಿದರು. ಭಕ್ತಿಶ್ರೀ ಶರ್ಮ
ಕಾರ್ಯಕ್ರಮ ನಿರೂಪಿಸಿದರು.

Related News

ರಾಜ್ಯ ಮಟ್ಟದ ವೈಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ವಿವೇಕಾನಂದದರಕ್ಷಾ ಜಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ.

ರಾಜ್ಯ ಮಟ್ಟದ ವೈಟ್ ಲಿಫ್ಟಿಂಗ್ ಚಾಂಪಿಯನ್…

ಪುತ್ತೂರು: ಬೆಂಗಳೂರಿನ ಕಂಠೀರವ ಸ್ಟೇಡಿಯಂ ನಲ್ಲಿ ಜರುಗಿದರಾಜ್ಯ…

ವಿವೇಕಾನಂದ ಕಾಲೇಜಿನಲ್ಲಿ ಸಂಶೋಧನಾವಿಧಿವಿಧಾನಗಳು ಮತ್ತು ಪ್ರಬಂದ ರಚನೆ ಕಾರ್ಯಗಾರ ಕಾರ್ಯಕ್ರಮ.

ವಿವೇಕಾನಂದ ಕಾಲೇಜಿನಲ್ಲಿ ಸಂಶೋಧನಾವಿಧಿವಿಧಾನಗಳು ಮತ್ತು ಪ್ರಬಂದ…

ಪುತ್ತೂರು, ನ. 14 ಸಂಶೋಧನ ವರದಿ ತಯಾರಿಸುವುದರಲ್ಲಿವಿದ್ಯಾರ್ಥಿಗಳು…

ಮಂಗಳೂರು ವಿವಿ ಫಲಿತಾಂಶ ಪ್ರಕಟ,ವಿವೇಕಾನಂದ ಕಾಲೇಜಿನ ಸುಲಕ್ಷಣಾ ಶರ್ಮಾ ಹತ್ತನೇ ರಾಂಕ್.

ಮಂಗಳೂರು ವಿವಿ ಫಲಿತಾಂಶ ಪ್ರಕಟ,ವಿವೇಕಾನಂದ ಕಾಲೇಜಿನ…

ಪುತ್ತೂರು ಜೂ.14: ಮಂಗಳೂರು ವಿಶ್ವವಿದ್ಯಾನಿಲಯದ 2022-23 ಸಾಲಿನಅಂತಿಮ…