News & Updates

ವಿವೇಕಾನಂದ ವಿದ್ಯಾವರ್ಧಕ ಸಂಘದಿoದ ಬಾಂಗ್ಲಾವಿರುದ್ಧ ಮಾನವ ಸರಪಳಿ ಮೂಲಕ ಜನಜಾಗೃತಿ ಜಾಥಾ

ಪುತ್ತೂರು: ಬಾಂಗ್ಲಾ ದೇಶದಲ್ಲಿ ನಡೆಯುತ್ತಿರುವ
ಹಿಂಸಾಚಾರವನ್ನು ವಿರೋಧಿಸಿ ಹಾಗೂ ಸಮಾಜದಲ್ಲಿ ರಾಷ್ಟ್ರೀಯ
ಜಾಗೃತಿಯನ್ನು ಮೂಡಿಸಲು ಪುತ್ತೂರಿನ ವಿವೇಕಾನಂದ
ವಿದ್ಯಾವರ್ಧಕ ಸಂಘ(ರಿ) ಇದರ ವತಿಯಿಂದ ನಡೆಸಲ್ಪಡುವ
ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು ಒಟ್ಟುಗೂಡಿ ಮಾನವ ಸರಪಳಿ
ಜಾಥಾ ಇಂದು ತೆಂಕಿಲದ ಶಾಲಾ ಆವರಣದಲ್ಲಿ ನಡೆಯಲಿದೆ ಎಂದು
ವಿವೇಕಾನAದ ವಿದ್ಯಾವರ್ಧಕ ಸಂಘ(ರಿ)ಇದರ ಕಾರ್ಯದರ್ಶಿ ಡಾ.ಕೆ.ಎಂ
ಕೃಷ್ಣ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೆಹರೂ ನಗರದಲ್ಲಿರುವ ವಿವೇಕಾನಂದ ಕಾಲೇಜಿನ ಆವರಣದಿಂದ
ವಿದ್ಯಾರ್ಥಿಗಳು ಮಾನವ ಸರಪಳಿಯ ಮೂಲಕ ಹೊರಟು
ವಿವೇಕನಗರದ ತೆಂಕಿಲದಲ್ಲಿ ಇರುವ ವಿವೇಕಾನಂದ ಶಾಲಾ
ಆವರಣದಲ್ಲಿ ಒಟ್ಟಾಗಿ ಜನ ಜಾಗೃತಿಯನ್ನು ಮೂಡಿಸುವ
ಕಾರ್ಯಕ್ರಮ ನಡೆಯಲಿದೆ.
ಈ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ
ಡಾ.ಪ್ರಭಾಕರ ಭಟ್ ಕಲ್ಲಡ್ಕ ಕಾರ್ಯಕ್ರಮಕ್ಕೆ ಚಾಲನೆಯನ್ನು
ನೀಡಲಿದ್ದಾರೆ ಹಾಗೂ ಈ ಮಾನವ ಸರಪಳಿ ಕಾರ್ಯಕ್ರಮದಲ್ಲಿ
ವಿವೇಕಾನಂದ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ಕಾರ್ಯನಿರ್ವಹಿಸುವ
ವಿವಿಧ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರು,
ಪ್ರಾಂಶುಪಾಲರು, ಉಪನ್ಯಾಸಕ ಹಾಗೂ ಉಪನ್ಯಾಸಕೇತರ
ವೃಂದದವರು ಹಾಗೂ ಸುಮಾರು ಹತ್ತು ಸಾವಿರ ವಿದ್ಯಾರ್ಥಿಗಳು
ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Related News

ವಿವೇಕಾನಂದ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ ರಚನೆ;

ವಿವೇಕಾನಂದ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ ರಚನೆ;

ಪುತ್ತೂರು: ಇಲ್ಲಿನ ವಿವೇಕಾನಂದ ಕಲಾ,ವಿಜ್ಞಾನ ಮತ್ತು ವಾಣಿಜ್ಯ…

ವಿವೇಕಾನಂದ ಕಾಲೇಜಿನಲ್ಲಿ ಆದಾಯ ತೆರಿಗೆ ಜಾಗೃತಿ ಕಾರ್ಯಕ್ರಮ;

ವಿವೇಕಾನಂದ ಕಾಲೇಜಿನಲ್ಲಿ ಆದಾಯ ತೆರಿಗೆ ಜಾಗೃತಿ…

ಪುತ್ತೂರು: ಆದಾಯ ತೆರಿಗೆಯು ಭಾರತ ಸರ್ಕಾರದ ಅತಿ…

ವೃತ್ತಿಜೀವನ ಯಶಸ್ಸಿಗೆ ಸಂವಹನ ಮೂಲ: ಪ್ರೊ. ಶ್ರೀಕೃಷ್ಣ ಗಣರಾಜ ಭಟ್;

ವೃತ್ತಿಜೀವನ ಯಶಸ್ಸಿಗೆ ಸಂವಹನ ಮೂಲ: ಪ್ರೊ.…

ಭಾಷಾ ಕೌಶಲ್ಯಗಳ ಐದು ದಿನಗಳ ಕಾರ್ಯಗಾರ ಉದ್ಘಾಟನೆ…