
ಪುತ್ತೂರು ನ.24: ಇತ್ತೀಚಿನ ದಿನಗಳಲ್ಲಿ ಇಂಟರ್ನೆಟ್ ಆಫ್ ಥಿಂಗ್ಸ್
(ಐಓಟಿ) ಅತೀ ಅಗತ್ಯವಾಗಿದೆ. ಮಾನವ ತನ್ನ ಎಲ್ಲಾ ಕಾರ್ಯಗಳಿಗೂ
ತಂತ್ರಜ್ಞಾನ ಬಳಸಿಕೊಂಡು ಮುಂದುವರಿಯುತ್ತಿದ್ದಾನೆ.
ತoತ್ರಜ್ಞಾನದ ಸಹಾಯದಿಂದ ಬುದ್ಧಿವಂತನಾಗುತ್ತಿದ್ದಾನೆ.
ಹೀಗಾಗಿ ತಂತ್ರಜ್ಞಾನವಿಲ್ಲದೆ ಜಗತ್ತನ್ನು ಊಹಿಸುವುದು ಅಸಾಧ್ಯ.
ಅದು ಮಾನವನ ಜೀವನದ ಅವಿಭಾಜ್ಯ ಅಂಗವಾಗಿದೆ ಎಂದು
ವಿವೇಕಾನoದ ಕಾಲೇಜ್ ಆಫ್ ಇಂಜಿನಿಯರಿoಗ್ & ಟೆಕ್ನಾಲಜಿಯ ಎಂಸಿಎ
ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ರಾಜೇಶ್ವರಿ ಎಂ. ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಲಾ, ವಿಜ್ನಾನ ಮತ್ತು ವಾಣಿಜ್ಯ
ಮಹಾವಿದ್ಯಾಲಯ (ಸ್ವಾಯತ್ತ) ದ ಕಂಪ್ಯೂಟರ್ ಸೈನ್ಸ್ ಮತ್ತು
ಐಕ್ಯೂಎಸಿ, ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿoಗ್ &
ಟೆಕ್ನಾಲಜಿಯ ಎಂಸಿಎ ವಿಭಾಗದ ಸಹಯೋಗದಲ್ಲಿ ನಡೆದ ಎರಡು
ದಿನಗಳ ಫ್ಯಾಕಲ್ಟಿ ಡೆವಲಪ್‌ಮೆಂಟ್ ಕಾರ್ಯಕ್ರಮದಡಿಯಲ್ಲಿ
ಇಂಟರ್ನೆಟ್ ಆಫ್ ಥಿಂಗ್ಸ್(ಐಓಟಿ) ಹ್ಯಾಂಡ್ಸ್-ಆನ್ ಕಾರ್ಯಾಗಾರ ಉದ್ಘಾಟಿಸಿ
ಮಾತನಾಡಿದರು.
ಕಾಲೇಜಿನ ಉಪಪ್ರಾಶುಂಪಾಲ ಪ್ರೊ.ಶ್ರೀಕೃಷ್ಣ ಗಣರಾಜ ಭಟ್
ಮಾತನಾಡಿ, ಆಧುನಿಕ ಯುಗದಲ್ಲಿ ಇಂಟರ್ನೆಟ್ ಆಫ್ ಥಿಂಗ್ಸ್
ಪ್ರತಿಯೊಬ್ಬನ ಅವಶ್ಯಕತೆಯಾಗಿದೆ. ಸಣ್ಣ ಮಕ್ಕಳಿಂದ ತೊಡಗಿ
ಉದ್ಯೋಗಸ್ಥರು ಕೂಡಾ, ತಮ್ಮ ಕೆಲಸಕಾರ್ಯಗಳಿಗೆ
ಇಂಟರ್ನೆಟ್ ಸೆನ್ಸಾರ್ ಗಳನ್ನು ಬಳಸುತ್ತಾರೆ. ಇದರ ಕುರಿತಾದ
ಕಾರ್ಯಾಗಾರಗಳು ವಿದ್ಯಾರ್ಥಿಗಳಲ್ಲಿ ಕೌಶಲ್ಯವನ್ನು
ಹೆಚ್ಚುಗೊಳಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ವಿವೇಕಾನಂದ ಎಲೆಕ್ಟ್ರಾನಿಕ್ಸ್ ಮತ್ತು
ಕಮ್ಯುನಿಕೇಷನ್ ಎಂಜಿನಿಯರಿoಗ್ ವಿಭಾಗದ ಸಹಾಯಕ
ಪ್ರಾಧ್ಯಾಪಕರುಗಳಾದ ಮಹಾಬಲೇಶ್ವರ ಭಟ್ ಪಿ, ಶ್ರೇಯಸ್
ಹೆಚ್. ಉಪಸ್ಥಿತರಿದ್ದರು.
ಕಂಪ್ಯೂಟರ್ ಲ್ಯಾಬ್ ಸಹಾಯಕಿ ನಿರೀಕ್ಷಾ ಪ್ರಾರ್ಥಿಸಿ, ಕಂಪ್ಯೂಟರ್ ಸೈನ್ಸ್
ವಿಭಾಗದ ಮುಖ್ಯಸ್ಥ ಪ್ರಕಾಶ್ ಕುಮಾರ್ ಸ್ವಾಗತಿಸಿದರು.
ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸುಪ್ರೀತಾ ವಂದಿಸಿ, ವಿದ್ಯಾರ್ಥಿನಿ
ರಕ್ಷಿತಾ ಕೆ.ಜಿ. ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಎರಡು ಹಂತಗಳಲ್ಲಿ
ಕಾರ್ಯಾಗಾರ ಕಾರ್ಯಕ್ರಮ ನಡೆಯಿತು.
