News & Updates

ವ್ಯಕ್ತಿತ್ವವು ಆಂತರ್ಯದಿoದ ಬಾಹ್ಯಕ್ಕೆ ನಿರ್ಮಾಣವಾಗಲಿ: ರಂಜನ್ ಬೆಳ್ಳರ್ಪಾಡಿ;

ಪುತ್ತೂರು, ನ.12: ವ್ಯಕ್ತಿ ನಿರ್ಮಾಣದ ಮುಖೇನ ಮಾತ್ರ ರಾಷ್ಟç ನಿರ್ಮಾಣ
ಸಾಧ್ಯ. ಎಲ್ಲಿ ವ್ಯಕ್ತಿತ್ವ ನಿರ್ಮಾಣವಾಗುವುದಿಲ್ಲವೋ ಆ ರಾಷ್ಟç ಅವನತಿಯತ್ತ
ಸಾಗುತ್ತದೆ. ಪ್ರತಿಯೊಬ್ಬನ ಜೀವನದಲ್ಲಿಯೂ ಚಾರಿತ್ರ‍್ಯ ಮುಖ್ಯವಾದುದು.
ಹಣಕ್ಕಿಂತ ವ್ಯಕ್ತಿತ್ವ ಬೇಗನೆ ಜನರ ಗಮನಸೆಳೆಯುತ್ತದೆ. ವ್ಯಕ್ತಿತ್ವ
ನಿರ್ಮಾಣ ಆಂತರ್ಯದಿoದ ಬಾಹ್ಯಕ್ಕೆ ಮುಖ ಮಾಡಿರಬೇಕು ಎಂದು ರಾಮಕೃಷ್ಣ
ಮಿಷನ್ ಮತ್ತು ಸ್ವಚ್ಛ ಮಂಗಳೂರು ಅಭಿಯಾನದ ಪ್ರಧಾನ
ಸಂಯೋಜಕ ರಂಜನ್ ಬೆಳ್ಳರ್ಪಾಡಿ ಹೇಳಿದರು.

ಇವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ
(ಸ್ವಾಯತ್ತ) ಪುತ್ತೂರು, ವಿವೇಕಾನಂದ ಸ್ನಾತಕೋತ್ತರ ಅಧ್ಯಯನ
ಕೇಂದ್ರ, ವಿವೇಕಾನಂದ ಸಂಶೋಧನಾ ಕೇಂದ್ರ, ಭಾರತೀಯ ಸಂಸ್ಕೃತಿ
ಮತ್ತು ಲಲಿತ ಕಲೆಗಳ ಅಧ್ಯಯನ ಕೇಂದ್ರ ಮತ್ತು ಐಕ್ಯೂಎಸಿ
ಘಟಕದ ಸಂಯೋಜನೆಯಲ್ಲಿ ನಡೆದ ವಿವೇಕ ಸ್ಮೃತಿ 22ನೇ ಸಂಚಿಕೆಯ
ಉಪನ್ಯಾಸ ಮಾಲಿಕೆಯಲ್ಲಿ ‘ವ್ಯಕ್ತಿ ನಿರ್ಮಾಣದ ಮುಖೇನ ರಾಷ್ಟç ನಿರ್ಮಾಣ
ವಿವೇಕ ಪಥ’ ಎಂಬ ವಿಷಯದ ಕುರಿತು ಮಾತನಾಡಿದರು.
ವ್ಯಕ್ತಿಯು ಸುತ್ತಮುತ್ತಲಿನ ಘಟನೆಗಳ ಬಗ್ಗೆ ಜಾಗೃತಿ ಹೊಂದಿರಬೇಕು
ಹಾಗೂ ತನ್ನೊಳಗಿನ ಅಂತಃಶಕ್ತಿ ಹೆಚ್ಚು ಮಾಡಿಕೊಳ್ಳಬೇಕು. ಇದರಿಂದ
ವ್ಯಕ್ತಿತ್ವ ವಿಕಸನಗೊಳ್ಳಲು ಸಾಧ್ಯ. ನಾವು ಗುರಿ ಮತ್ತು
ಆದರ್ಶಗಳನ್ನು ಅಳವಡಿಸಿಕೊಂಡಾಗ ಮಾತ್ರ ಜೀವನದಲ್ಲಿ ಸಾಧಿಸಲು ಸಾಧ್ಯ
ಎಂದು ಹೇಳಿದರು.

ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ ಮಾತನಾಡಿ,
ಮನುಷ್ಯನೊಳಗೆ ಹಲವಾರು ಬದಲಾವಣೆಗಳು ಗೊತ್ತಿಲ್ಲದೆಯೇ
ನಡೆಯುತ್ತಿರುತ್ತದೆ. ಅದನ್ನು ವ್ಯಕ್ತಿಯು ಗುರುತಿಸಿ, ದೇಹದೊಳಗಿನ
ತತ್ವಗಳನ್ನು ಅರ್ಥೈಸಿಕೊಳ್ಳಬೇಕು. ವೈಜ್ಞಾನಿಕವಾಗಿ, ಆಧ್ಯಾತ್ಮಿಕವಾಗಿ
ದೇಹವನ್ನು ಮುನ್ನಡೆಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲ ಪ್ರೊ. ಶ್ರೀಕೃಷ್ಣ ಗಣರಾಜ ಭಟ್
ಉಪಸ್ಥಿತರಿದ್ದರು.
ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿನಿಯರು ಪ್ರಾರ್ಥಿಸಿ, ವಿವೇಕಾನಂದ
ಸoಶೋಧನಾ ಕೇಂದ್ರದ ನಿರ್ದೇಶಕಿ ಡಾ. ವಿಜಯಸರಸ್ವತಿ ಸ್ವಾಗತಿಸಿದರು,
ಭಾರತೀಯ ಸಂಸ್ಕೃತಿ ಮತ್ತು ಲಲಿತ ಕಲೆಗಳ ಅಧ್ಯಯನ ಕೇಂದ್ರದ
ಸAಯೋಜಕಿ ಡಾ. ವಿದ್ಯಾ ಎಸ್. ವಂದಿಸಿ, ದ್ವಿತೀಯ ಸ್ನಾತಕೋತ್ತರ ವಾಣಿಜ್ಯ
ವಿಭಾಗದ ವಿದ್ಯಾರ್ಥಿನಿ ಅನನ್ಯ ಅಡಿಗ ಕಾರ್ಯಕ್ರಮವನ್ನು ನಿರ್ವಹಿಸಿದರು.

Related News

ವಿವೇಕಾನಂದ ಕಾಲೇಜಿನಲ್ಲಿ ‘ನಶಾ ಮುಕ್ತ ಭಾರತ’ ಜಾಗೃತಿ ಅಭಿಯಾನ;

ವಿವೇಕಾನಂದ ಕಾಲೇಜಿನಲ್ಲಿ ‘ನಶಾ ಮುಕ್ತ ಭಾರತ’…

ಪುತ್ತೂರು, ನ. 24; ನಶೆ ಮತ್ತು ಮದ್ಯವ್ಯಸನ…

ತಂತ್ರಜ್ಞಾನ ಮಾನವ ಜೀವನದ ಅವಿಭಾಜ್ಯಅಂಗ: ಡಾ. ರಾಜೇಶ್ವರಿ ಎಂ:ಇoಟರ್ನೆಟ್ ಆಫ್ ಥಿಂಗ್ಸ್ (ಐಓಟಿ) ಹ್ಯಾಂಡ್ಸ್-ಆನ್ ಕಾರ್ಯಾಗಾರ ಉದ್ಘಾಟನೆ;

ತಂತ್ರಜ್ಞಾನ ಮಾನವ ಜೀವನದ ಅವಿಭಾಜ್ಯಅಂಗ: ಡಾ.…

ಪುತ್ತೂರು ನ.24: ಇತ್ತೀಚಿನ ದಿನಗಳಲ್ಲಿ ಇಂಟರ್ನೆಟ್ ಆಫ್…

ವಿವೇಕಾನಂದ ಕಾಲೇಜಿನಲ್ಲಿ ಪರಿಸರ ರಕ್ಷಣಾದಿನಾಚರಣೆ ಹಾಗೂ ಜಾಗೃತಿ ಕಾರ್ಯಕ್ರಮ;

ವಿವೇಕಾನಂದ ಕಾಲೇಜಿನಲ್ಲಿ ಪರಿಸರ ರಕ್ಷಣಾದಿನಾಚರಣೆ ಹಾಗೂ…

ಪುತ್ತೂರು. ನ. 22: ಮನುಷ್ಯ ಯಾವಾಗ ನೈತಿಕ…