
ಪುತ್ತೂರು ನ.18; ಇತಿಹಾಸದ ಕುರಿತು ಅಪಾರ ಜ್ಞಾನ ಹೊಂದಿದ್ದ
ಡಾ. ಶ್ರೀಧರ ನಾಯ್ಕ್ ಒಬ್ಬ ಅತ್ಯುತ್ತಮ ಸಂಶೋಧಕ.
ಪರAಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕು
ಎಂಬುದು ಅವರ ಆಸೆಯಾಗಿತ್ತು. ಎಲ್ಲರೊಳಗೊಂದು ಎಂಬ
ಭಾವದೊಳಗಿದ್ದವರು. ಎಲ್ಲಿಯೂ ತಮ್ಮ ವ್ಯಕ್ತಿತ್ವವನ್ನು
ತೋರ್ಪಡಿಸುತ್ತಿರಲಿಲ್ಲ. ಯಾವುದೇ ಕೆಲಸಕ್ಕೂ ಸೈ ಎನ್ನುವ
ಮನೋಭಾವ ಅವರದ್ದು ಎಂದು ವಿವೇಕಾನಂದ ವಿದ್ಯಾವರ್ಧಕ
ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.
ಅವರು ವಿವೇಕಾನಂದ ವಿದ್ಯಾವರ್ಧಕ ಸಂಘ ಮತ್ತು
ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ
(ಸ್ವಾಯತ್ತ) ದ ವತಿಯಿಂದ ಅಗಲಿದ ಕಾಲೇಜಿನ ಪ್ರಾಚಾರ್ಯ ಡಾ.
ಶ್ರೀಧರ ನಾಯ್ಕ್ ಬಿ. ಅವರ ಆತ್ಮಕ್ಕೆ ಚಿರಶಾಂತಿಯನ್ನು
ಬಯಸುವ ಸಲುವಾಗಿ ನಡೆಸಿದ ನುಡಿನಮನದಲ್ಲಿ ಮಾತನಾಡಿದರು.
ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ ಕೆ.
ಎನ್. ಮಾತನಾಡಿ, ಡಾ. ಶ್ರೀಧರ ನಾಯ್ಕ್ ಇತಿಹಾಸದ ಬಗೆಗೆ ಅತೀವ
ಜ್ಞಾನ ಉಳ್ಳವರು. ಅವರ ಸೇವೆಯನ್ನು ಸಂಸ್ಥೆ
ಪಡೆದುಕೊAಡಿದೆ. ಸಮಾಜದ ಕಾಳಜಿಯೊಂದಿಗೆ, ಮಕ್ಕಳ
ಕಾಳಜಿಯು ಅವರಿಗೆ ಅಪಾರವಾಗಿತ್ತು. ಇಂತಹ ಒಬ್ಬ ಉತ್ತಮ
ಶಿಕ್ಷಕನನ್ನು ಸಂಸ್ಥೆ ಕಳೆದುಕೊಂಡಿದೆ. ಅವರ ಆತ್ಮಕ್ಕೆ
ಚಿರಶಾಂತಿ ಸಿಗಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ
ಕಾರ್ಯದರ್ಶಿ ಡಾ. ಕೆ. ಎಂ. ಕೃಷ್ಣ ಭಟ್, ವಿದ್ಯಾವರ್ಧಕ ಸಂಘದ
ನಿರ್ದೇಶಕರು, ಸದಸ್ಯರು ಹಾಗೂ ಕಾಲೇಜಿನ ಆಡಳಿತ
ಮಂಡಳಿಯ ಅಧ್ಯಕ್ಷ ಡಾ.ಶ್ರೀಪತಿ ಕಲ್ಲೂರಾಯ ಮತ್ತು
ಸದಸ್ಯರು ಹಾಗೂ ಸಹ ಸಂಸ್ಥೆಗಳ ಸಂಚಾಲಕರು,
ಪ್ರಾಚಾರ್ಯರು, ವಿಶ್ರಾಂತ ಪ್ರಾಚಾರ್ಯರು ಉಪಸ್ಥಿತರಿದ್ದರು.
ಕಾಲೇಜಿನ ಉಪ ಪ್ರಾಂಶುಪಾಲ ಪ್ರೊ.ಶ್ರೀಕೃಷ್ಣ ಗಣರಾಜ್ ಭಟ್
ಸ್ವಾಗತಿಸಿ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಅರುಣ್ ಪ್ರಕಾಶ್
ನುಡಿನಮನ ಸಲ್ಲಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ.
ಮನಮೋಹನ್ ನಿರೂಪಿಸಿದರು.
