ವಿವೇಕಾನಂದ ಕಾಲೇಜಿನಲ್ಲಿ ಖೋಖೋ ಚಾಂಪಿಯನ್ಶಿಪ್ ಅಲ್ಟಿಮೇಟ್ ಟ್ರೋಪಿ -2024

ಪುತ್ತೂರು,ಮೇ.27: ಕ್ರೀಡೆ ಎನ್ನುವುದು ನಮ್ಮ ಸದೃಢಆರೋಗ್ಯಕ್ಕೆ ಬಹಳ ಸಹಕಾರಿ. ದೇಹಕ್ಕೆ ಸಮರ್ಪಕವಾದವ್ಯಾಯಾಮ ಸಿಕ್ಕಾಗ ನಮ್ಮ ಮಾನಸಿಕ ಆರೋಗ್ಯವು ಕೂಡಾವೃದ್ಧಿಯಾಗುತ್ತದೆ. ಕ್ರೀಡಾ ಪಂದ್ಯಾಟಗಳನ್ನುಆಯೋಜಿಸುವುದರಿAದ ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹಸಿಗುತ್ತದೆ. ನಾನು ಒಬ್ಬ ಖೋ ಖೋ ಪಟುವಾಗಿ ದಕ್ಷಿಣ ಕನ್ನಡಜಿಲ್ಲೆಯವರಿಗಾಗಿ ಇಂತಹ ಪಂದ್ಯಾಟವನ್ನು ಆಯೋಜನೆ ಮಾಡಿದಕ್ಕಾಗಿಹೆಮ್ಮೆಪಡುತ್ತೇನೆ ಎಂದು ಉಪ್ಪಿನಂಗಡಿಯ ಎಸ್‌ಬಿಐ ಬ್ಯಾಂಕ್ ಇದರನಿವೃತ್ತ ಉದ್ಯೋಗಿ ಜಿ. ಕೆ ಪೂವಪ್ಪ ಹೇಳಿದರು.ಇವರು ಪುತ್ತೂರಿನ ವಿವೇಕಾನಂದ ಕಾಲೇಜು, ಕ್ರೀಡಾಂಗಣದಲ್ಲಿಅಲ್ಟಿಮೇಟ್ ಸ್ಪೋರ್ಟ್ಸ್ ಕ್ಲಬ್ ಪುತ್ತೂರು ಮತ್ತು ವಿವೇಕಾನಂದಕಾಲೇಜು (ಸ್ವಾಯತ್ತ), ಪುತ್ತೂರು ಇವರ ಸಂಯುಕ್ತಆಶ್ರಯದಲ್ಲಿ ನಡೆದ ದಕ್ಷಿಣ […]

ವಿವೇಕಾನಂದ ಕಾಲೇಜಿನಲ್ಲಿ ಕಲಾ ಸಾಮ್ರಾಟ್-2024 ಕಾರ್ಯಕ್ರಮ

ಪುತ್ತೂರು,ಮೇ.24ವಿದ್ಯಾರ್ಥಿಗಳಲ್ಲಿ ಕೌಶಲ್ಯದ ಜೊತೆ ಒಂದಿಷ್ಟು ಸಂಸ್ಕಾರ ಇರಬೇಕು ಅದರೊಂದಿಗೆ ವಿನಯ ಇದ್ದರೆ ನಿಜವಾಗಲೂ ನಾವು ಜೀವನದಲ್ಲಿ ಗೆಲ್ಲುತ್ತೇವೆ. ಸಂಸ್ಕೃತಿ ಎಂಬುದು ಕಾಲಕ್ಕಿಂತ ಹಳೆಯದು, ಆದ್ದರಿಂದ ಸಂಸ್ಕೃತಿಯನ್ನು ಬಿಡದೆ, ಅದನ್ನು ಉಳಿಸಿಕೊಂಡು ಜೀವನದಲ್ಲಿ ನಾವು ಯಶಸ್ಸು ಗಳಿಸಬಹುದು. ಜಗತ್ತಿನ ಮುಂದೆ ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವುದು ವಿದ್ಯಾರ್ಥಿಗಳ ಕರ್ತವ್ಯ ಎಂದು ಖ್ಯಾತ ಭರತನಾಟ್ಯ ಕಲಾವಿದ ವಿದ್ವಾನ್ ದೀಪಕ್ ಕುಮಾರ್ ಹೇಳಿದರು.ಇವರು ಪುತ್ತೂರಿನ ವಿವೇಕಾನಂದ ಕಲಾ,ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ(ಸ್ವಾಯತ್ತ) ಇಲ್ಲಿ ಕಲಾ ವಿಭಾಗ, ಮಾನವಿಕ ಸಂಘ ಮತ್ತು ಐಕ್ಯೂಎಸಿ […]

ವಿವೇಕಾನಂದ ಕಾಲೇಜಿನಲ್ಲಿ ಕಾಮರ್ಸ್ ಫೆಸ್ಟ್ ಏಕತ್ರ -2024

ಪುತ್ತೂರು, ಮೇ.22:ಒಂದು ಉದ್ಯಮವನ್ನು ಯಶಸ್ವಿಯಾಗಿ ನಡೆಸಲು ಹಲವಾರು ಸಮಸ್ಯೆಗಳು ಉಂಟಾಗುತ್ತದೆ. ಆಗ ಅವುಗಳಿಗೆಲ್ಲ ಯೋಚಿಸಿ ಪರಿಹಾರವನ್ನು ಕಂಡುಕೊಂಡು ಮುಂದುವರೆಯುವ ಶಕ್ತಿ ನಮ್ಮಲ್ಲಿರಬೇಕು.ಉದ್ಯಮ ಕ್ಷೇತ್ರಕ್ಕೆ ಕೌಶಲ್ಯವೆನ್ನುವುದು ಅತ್ಯಗತ್ಯ. ಬದಲಾವಣೆಗೆ ನಾವು ಹೊಂದಿಕೊಂಡು ನಮ್ಮ ಕೆಲಸದಲ್ಲಿ ಹೊಸತನವನ್ನು ಕಂಡು ಯಶಸ್ವಿಗೊಳ್ಳಬೇಕು ಅದಕ್ಕಾಗಿ ನಿರಂತರವಾದ ಕಲಿಕೆಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳೋಣ. ಆರ್ಥಿಕವಾಗಿ ಯಾರು ಕೂಡ ಬಲಿಷ್ಠರಾಗಬಹುದು ಆದರೆ,ಅದನ್ನು ಹೊರತುಪಡಿಸಿ ಸಮಾಜಕ್ಕೆ ಸೇವೆ ಮಾಡುವ ಜನರಿಗೆ ಒಳಿತನ್ನು ಮಾಡುವ ಗುಣ ನಮ್ಮದಾಗಬೇಕು ಎಂದು ಮಾಸ್ಟರ್ ಪ್ಲಾನರಿ ಪುತ್ತೂರು ಇದರ ಉದ್ಯಮಿ ಆಕಾಶ್ ಎಸ್. […]

ಸಂಶೋಧನೆ ಎಂಬುದು ಬಾಲ್ಯದಿಂದಲೇ ಪ್ರಾರಂಭವಾಗುವಂತದ್ದು : ಶಂಕರ ಜೋಯಿಸ

ಪುತ್ತೂರು,ಮೇ.14:ವಿಜ್ಞಾನ ಎನ್ನುವುದು ಸಂಶೋಧನೆ,ಪ್ರಯೋಗ ಮತ್ತು ಮಾದರಿಗಳನ್ನು ತಯಾರಿಸುವ ಪ್ರಕಾರ. ವಿದ್ಯಾರ್ಥಿಗಳು ಪುಸ್ತಕದಲ್ಲಿ ಇದ್ದದ್ದಷ್ಟೇ ಓದಿದರೆ ಸಾಲದು, ಆಲೋಚನೆ ಮಾಡುವ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು, ಹೊಸ ಹೊಸ ವಿಚಾರಗಳನ್ನು ಕಲಿಯುವ ಕುತೂಹಲ ಇದ್ದಾಗ ವಿದ್ಯಾರ್ಥಿಗಳು ಸಂಶೋಧನೆಯಲ್ಲಿ ತೊಡಗುತ್ತಾರೆ. ಆದ್ದರಿಂದ ನಾವು ನಮ್ಮನ್ನೇ ಪ್ರೋತ್ಸಾಹಿಸಿಕೊಂಡು ಮುಂದುವರಿಯುವುದು ಬಹು ಮುಖ್ಯ ಎಂದು ಪುತ್ತೂರಿನ ವಿವೇಕಾನಂದ ಪದವಿ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯ ಶಂಕರ ಜೋಯಿಸ ಹೇಳಿದರು.ಇವರು ಪುತ್ತೂರಿನ ವಿವೇಕಾನಂದ ಕಲಾ,ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ(ಸ್ವಾಯತ್ತ) ಇಲ್ಲಿ ಸೈನ್ಸ್ ಅಸೋಸಿಯೇಷನ್ ಮತ್ತು ಐ ಕ್ಯೂ […]

ವಿವೇಕಾನಂದ ಕಾಲೇಜಿನಲ್ಲಿ ಪತ್ರಿಕೋದ್ಯಮವಿಭಾಗದಿಂದ ರಾಷ್ಟ್ರೀಯ ಮಟ್ಟದ ಪ್ರತಿಭಾನ್ವೇಷಣೆ-ವಿವೇಕ್ ಚೇತನ ೨೦೨೪

ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡ ಆಳ್ವಾಸ್ ಕಾಲೇಜು ಪುತ್ತೂರು. ಮೇ,೧೬: ಇಂದು ಇಡೀ ವಿಶ್ವದಲ್ಲಿಯೇ ಭಾರತಅದ್ಭುತ ಸ್ಥಾನಕ್ಕೆ ಏರುತಿದೆ. ಹೀಗಿರುವಾಗ ಮಾಧ್ಯಮಗಳಿಗೆದೇಶದಲ್ಲಿ ಕಂಡುಬರುವ ಎಲ್ಲಾ ಒಳ್ಳೆಯ ವಿಚಾರಗಳನ್ನುಜಗತ್ತಿಗೆ ಪರಿಚಯಿಸಿ ರಾಷ್ಟ್ರವನ್ನು ಉನ್ನತ ಮಟ್ಟಕ್ಕೆಕೊಂಡೊಯ್ಯುವ ಜವಾಬ್ದಾರಿ ಇದೆ. ಪತ್ರಕರ್ತರು ಯಾರಪರವಾಗಿಯೂ ನಿಲ್ಲದೆ, ಸತ್ಯದ ಪರ ಹಾಗೂ ರಾಷ್ಟ್ರದ ಪರನಿಲ್ಲಬೇಕು. ಸಮಾಜದಲ್ಲಿ ಕಂಡುಬರುವ ಒಳ್ಳೆತನವನ್ನು ಗಮನಿಸಿಅವುಗಳನ್ನು ಗುರುತಿಸುವ ಜವಾಬ್ದಾರಿ ಪತ್ರಕರ್ತರಿಗಿದೆ. ಇದರಜೊತೆಗೆ ಯುವ ಜನರಿಗೆ ಅಧಮ್ಯವಾದ ತಿಳುವಳಿಕೆ, ಬುದ್ಧಿವಂತಿಕೆಇರುತ್ತದೆ. ಅದನ್ನು ರಾಷ್ಟ್ರದ ಅಭಿವೃದ್ಧಿಗೆ ಬಳಸಬೇಕು ಎಂದುವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ […]

ಮಂಗಳೂರು ವಿಶ್ವ ವಿದ್ಯಾನಿಲಯ ಮಟ್ಟದ Power Lifting ಸ್ಪರ್ದೆ ಯಲ್ಲಿ ಕಂಚಿನ ಪದಕ

ಉಡುಪಿಯ, Thenkanidiyoor ನ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಇಲ್ಲಿ ಜರುಗಿದ, ಮಂಗಳೂರು ವಿಶ್ವ ವಿದ್ಯಾನಿಲಯ ಮಟ್ಟದ Power Lifting ಸ್ಪರ್ದೆ ಯಲ್ಲಿ ನಮ್ಮ ಕಾಲೇಜನ್ನು ಪ್ರತಿನಿಧಿಸಿದ Kum. Raksha G – ll BCA(D) ಇವರು, +84 kg category ಯಲ್ಲಿ ಕಂಚಿನ ಪದಕ ಗಳಿಸಿದ್ದಾರೆ. ಹಾಗು Kum. ಆಶಾಕಿರಣ – l B Com(A) ಇವರು Power Lifting ಸ್ಪರ್ಧೆಯಲ್ಲಿ, ನಮ್ಮ ಕಾಲೇಜನ್ನು ಪ್ರತಿನಿಧಿಸಿ 63 kg category […]

ವೃತ್ತಿ ಜೀವನವು ವಿದ್ಯಾರ್ಥಿ ಜೀವನಕ್ಕಿಂತ ಭಿನ್ನ

ವೃತ್ತಿ ಜೀವನವು ವಿದ್ಯಾರ್ಥಿ ಜೀವನಕ್ಕಿಂತ ಭಿನ್ನ. ವೃತ್ತಿ ಜೀವನದಲ್ಲಿ ನಮ್ಮನ್ನು ನಾವು ಕ್ರಿಯಾಶೀಲರಾಗಿ ತೊಡಗಿಸಿಕೊಳ್ಳಬೇಕಾದರೆ ವಿದ್ಯಾರ್ಥಿ ಜೀವನದಲ್ಲಿ ಸಿಗುವ ಎಲ್ಲಾ ಅವಕಾಶಗಳನ್ನು ಬಳಸಿಕೊಳ್ಳಬೇಕು. ವ್ಯಕ್ತಿತ್ವ ವಿಕಸನವಾದರೆ ಮಾತ್ರ ನಾವು ಕಾರ್ಪೊರೇಟ್ ಹಂತದಲ್ಲಿ ಗೆಲ್ಲಲು ಸಾಧ್ಯ. ಹಾಗಾಗಿ ವಿದ್ಯಾರ್ಥಿ ತನ್ನ ಜೀವನದಲ್ಲಿ ಕೌಶಲ್ಯ ಅಭಿವೃದ್ಧಿಗೆ ಬೇಕಾದಂತಹ ಅಂಶಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಎಎಂಡಿ ಸಂಸ್ಥೆ ,  ಟೆಕ್ಸಾಸ್ ಯು,ಎಸ್ ಎ ಕಾರ್ಯಪಡೆಯ ಯೋಜನಾ ವ್ಯವಸ್ಥಾಪಕಿ  ಸೌಮ್ಯ ಬೋನಂತಾಯ ಹೇಳಿದರು. ಇವರು ಗುರುವಾರ ನಡೆದ ವಿವೇಕಾನಂದ ಕಲಾ, ವಿಜ್ಞಾನ, ವಾಣಿಜ್ಯ […]

ವಿವೇಕಾನಂದ ಕಾಲೇಜಿನ ರಾಷ್ಟ್ರೀಯ ಸೇವಾಯೋಜನೆ ಶಿಬಿರ ಉದ್ಘಾಟನೆ.

ಪುತ್ತೂರು.ಮೇ 12:ನಮ್ಮ ಜೀವನದಲ್ಲಿ ಶಿಕ್ಷಣ ಮಾತ್ರ ಮುಖ್ಯವಲ್ಲಶಿಕ್ಷಣದೊಂದಿಗೆ ಬದುಕಿಗೆ ಪೂರಕವಾದ ಅಂಶಗಳು ಬಹುಮುಖ್ಯ.ನಾವು ನಮ್ಮ ಪರಿಸರ, ದೇಶ ಮತ್ತು ಮಣ್ಣು ಇವುಗಳಿಗೆಸಂಬoಧಿಸಿದ ವಿಷಯಗಳನ್ನು ಅರಿಯಬೇಕು. ಈ ಶಿಬಿರದಿಂದ ನೀವುಯಾವೆಲ್ಲ ವಿಷಯಗಳನ್ನು ಕಲಿಯುತ್ತೀರೋ ಅವುಗಳನ್ನುನಿಮ್ಮ ಜೀವನದಲ್ಲಿ ಅಳವಡಿಸಿಕೊಂಡು ಭವಿಷ್ಯದಲ್ಲಿಮುನ್ನಡೆಯಬೇಕು ಎಂದು ಶ್ರೀಕ್ಷೇತ್ರ ಹನುಮಗಿರಿಯಧರ್ಮದರ್ಶಿ ಶಿವರಾಮ ಪಿ. ಇವರು ಹೇಳಿದರು.ಇವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯಮಹಾವಿದ್ಯಾಲಯ (ಸ್ವಾಯತ್ತ), ಪುತ್ತೂರು ಇದರನೇತೃತ್ವದೊಂದಿಗೆ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಶ್ರೀಗಜಾನನ ವಿದ್ಯಾಸಂಸ್ಥೆಗಳು, ಶ್ರೀಕ್ಷೇತ್ರ ಹನುಮಗಿರಿ ಇದರಆಶ್ರಯದಲ್ಲಿ ವಿಜ್ಞಾನ ಮತ್ತು ವೈಜ್ಞಾನಿಕ ಮನೋಧರ್ಮಕ್ಕಾಗಿಯುವಜನತೆ […]

ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ನಿರಂಜನ ಪ್ರಶಸ್ತಿ ಹಾಗೂ ಶಂಕರ ಸಾಹಿತ್ಯ ಪ್ರಶಸ್ತಿ ಪ್ರದಾನ

ಪ್ರೊ.ವಿ. ಬಿ ಅರ್ತಿಕಜೆಯವರ ವ್ಯಕ್ತಿತ್ವ ಎಲ್ಲರಿಗೂ ಮಾದರಿ- ಡಾ.ನಿರಂಜನ ವಾನಳ್ಳಿ ಪುತ್ತೂರು, ಮೇ.೦೯ – ಸಾಹಿತಿ ಹಾಗೂ ವಿಶ್ರಾಂತ ಪ್ರಾಧ್ಯಾಪಕ ಪ್ರೊ ವಿ ಬಿ ಅರ್ತಿಕಜೆಯವರಿಗೆ ನಿರಂಜನ ಪ್ರಶಸ್ತಿ ನೀಡಿ  ಮಾತನಾಡಿದಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಡಾ. ನಿರಂಜನ ವಾನಳ್ಳಿ, ಪುತ್ತೂರು ವಿವೇಕಾನಂದ ಕಾಲೇಜು  ನಿರಂಜನರನ್ನು  ಸದಾ ನೆನಪಿನಲ್ಲಿಟ್ಟುಕೊಂಡು ಅವರ ಹೆಸರಿನಲ್ಲಿ ಪ್ರಶಸ್ತಿಯನ್ನು  ನೀಡುತ್ತಿರುವುದು  ಸಮರ್ಥನೀಯ. ನಿರಂಜನರ ಕಾದಂಬರಿಗಳಿಂದ, ಅಂಕಣಗಳಿಂದ ಅಂದು  ಮಾತ್ರವಲ್ಲ  ಇಂದಿಗೂ ಜನ ಮನದಲ್ಲಿ  ಜೀವಂತವಾಗಿರುವವರು, ಪ್ರಗತಿ ಶೀಲರಾಗಿ ಉಚ್ಚ ಮಟ್ಟದಲ್ಲಿ ಸಾಧನೆ ಮಾಡಿದವರು. […]