ಕಾಲೇಜಿನ ಎನ್. ಸಿ. ಸಿ. ಘಟಕದ ಬಿ .ಸಿ .ಎ ವಿದ್ಯಾರ್ಥಿ ಎಂ. ಶಮಂತ್ ಇವರು ಅಗ್ನಿಪಥ್ ಯೋಜನೆಯ ಅಡಿಯಲ್ಲಿ ಭಾರತೀಯ ಸೇನೆಗೆ ಆಯ್ಕೆ

ಪುತ್ತೂರು: ಇಲ್ಲಿನವಿವೇಕಾನಂದ ಕಲಾ ವಾಣಿಜ್ಯ ಹಾಗೂ ವಿಜ್ಞಾನ (ಸ್ವಾಯತ್ತ) ಕಾಲೇಜಿನ ಎನ್ ಸಿಸಿ ಘಟಕದ ಬಿಸಿಎ ವಿದ್ಯಾರ್ಥಿ ಎಂ.ಶಮಂತ್ ಇವರು ಅಗ್ನಿಪಥ್ ಯೋಜನೆಯಡಿಯಲ್ಲಿ ಭಾರತೀಯ ಸೇನೆಗೆ ಆಯ್ಕೆಯಾಗಿದ್ದು ಇವರನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ.ವಿಷ್ಣು ಗಣಪತಿ ಭಟ್ ಕಾಲೇಜಿನಲ್ಲಿ ಸನ್ಮಾನಿಸಿದರು.ಈ ಸಂದರ್ಭದಲ್ಲಿ ಕಾಲೇಜಿನ ಎನ್ ಸಿಸಿ ಅಧಿಕಾರಿ‌ ಲೆ.ಭಾಮಿ‌ ಅತುಲ್‌ ಶೆಣೈ ಉಪಸ್ಥಿತರಿದ್ದರು. ವಿದ್ಯಾರ್ಥಿಯ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಉಪನ್ಯಾಸಕ ಹಾಗೂ‌ಉಪನ್ಯಾಸಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಶುಭ ಹಾರೈಸಿದರು. ಇವರು ಮೂಲತಃ ಸುಳ್ಯ ತಾಲೂಕಿನ ಮಂಡೆಕೋಲು ನಿವಾಸಿ‌ […]

ವ್ಯಕ್ತಿತ್ವ ವಿಕಸನಕ್ಕೆ ಮೌಲ್ಯಾಧಾರಿತ ಶಿಕ್ಷಣವೇ ಅಡಿಪಾಯ – ಸ್ವಾಮಿ ವಿವೇಕ ಚೈತನ್ಯಾನಂದ

ಪುತ್ತೂರು,ಎ.12 :- ಇಂದು ಭಾರತ ಬದಲಾವಣೆಯತ್ತ ಗಮನ ಹರಿಸುತ್ತಿದೆಯಾದರೂ ನಾವು ಆಧ್ಯಾತ್ಮಿಕವಾಗಿ ಬದಲಾಗುತ್ತಿದ್ದೇವೆಯೇ ಎಂಬುದನ್ನು ನಾವೇ ಪ್ರಶ್ನಿಸಿಕೊಳ್ಳಬೇಕಾದ ಪರಿಸ್ಥತಿ ಇದೆ. ಭಾರತೀಯರು ಸನಾತನ ಧರ್ಮಿಗಳು. ನಮಗೆ ಆದಿಯೂ ಇಲ್ಲ, ಅಂತ್ಯವೂ ಇಲ್ಲ. ಪ್ರತಿಯೊಂದು ಮಾನವನ ಜನ್ಮ ಭಗವಂತನ ಸಾಕ್ಷಾತ್ಕಾರವಾಗಿದೆ. ನಾವು ಯಾವುದೇ ಜಾತಿ-ಮತದ ಹಂಗಿಲ್ಲದೆ ಸತ್ಯ- ಧರ್ಮದಿಂದ ಬದುಕಿ ಇತರರಿಗೆ ಮಾದರಿಯಾಗಬೇಕು ಎಂದು ಪೊಳಲಿಯ ರಾಮಕೃಷ್ಣ ತಪೋವನದ ಅಧ್ಯಕ್ಷ ಸ್ವಾಮಿ ವಿವೇಕಚೈತನ್ಯಾನಂದ ಹೇಳಿದರು. ಇವರು ವಿವೇಕಾನಂದ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು, ಇಲ್ಲಿನ […]

ವಿವೇಕಾನಂದ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ವಿಚಾರ ಸಂವಾದ ಕಾರ್ಯಕ್ರಮ

ಪುತ್ತೂರು: ಇಂದು ಪತ್ರಿಕೋದ್ಯಮ ಬಹಳ ವಿಶಾಲವಾದ ಕ್ಷೇತ್ರ. ಇಲ್ಲಿ ನಾವು ಕಲಿಯಬೇಕಾದ ವಿಷಯಗಳು ಹಲವಾರು ಇವೆ. ಮಾಧ್ಯಮ ಕ್ಷೇತ್ರದಲ್ಲಿ ಯಾವ ರೀತಿಯಾಗಿ ನಾವು ಮುಂದುವರೆಯಬೇಕು ಎಂದು ವಿದ್ಯಾರ್ಥಿ ಜೀವನದಲ್ಲಿಯೇ ನಿರ್ದಿಷ್ಟವಾದ ಗುರಿ ಹೊಂದಿರಬೇಕು. ಇಲ್ಲಿ ಸತ್ಯಾಸತ್ಯತೆಗಳನ್ನು ಸರಿಯಾಗಿ ಪರಿಶೀಲಿಸಿ ಕಾರ್ಯನಿರ್ವಹಿಸುವುದು ಬಹುಮುಖ್ಯ. ಓರ್ವ ಸಮರ್ಥ ಪತ್ರಕರ್ತನಾಗಬೇಕಾದರೆ ಆತ ಒಳ್ಳೆಯ ಮಾತುಗಾರಿಕೆಯ ಕೌಶಲ್ಯವನ್ನು ಹೊಂದಿರಬೇಕು ಇಂದು ಟಿವಿ9 ವರದಿಗಾರ ಅಶೋಕ್ ಕುಮಾರ್ ಹೇಳಿದರು.ಇವರು ಪುತ್ತೂರಿನ ವಿವೇಕಾನಂದ ಕಲಾ,ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ)ದ ಪತ್ರಿಕೋದ್ಯಮ ವಿಭಾಗ ವತಿಯಿಂದ ಆಯೋಜಿಸಿದ […]

ವೃತ್ತಿ ಗೌರವ ಎಂಬುದು ನಮ್ಮ ರಕ್ತಗತವಾಗಿ ಬೆರೆತು ಹೋಗಬೇಕು:ಡಾ. ಮನಮೋಹನ ಎಂ

ಪುತ್ತೂರು.ಎ.05 :ಒಬ್ಬ ವ್ಯಕ್ತಿ ಜೀವನದಲ್ಲಿ ಅಧಿಕಾರಕ್ಕಿಂತ ಸೇವೆಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು. ಜಗತ್ತಿನಲ್ಲಿ ಅಧಿಕಾರದಿಂದ ಯಾರು ಯಾರನ್ನು ಗೆಲ್ಲಲು ಸಾಧ್ಯವಿಲ್ಲ.ಪ್ರತಿಯೊಬ್ಬರ ವೃತ್ತಿಗೆ ಗೌರವವನ್ನು ನೀಡಬೇಕು. ಸೇವಾ ಮನೋಭಾವ ಎಂಬುದನ್ನು ವಿದ್ಯಾರ್ಥಿ ಜೀವನದಿಂದಲೇ ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಪ್ರತಿಯೊಂದು ಕೆಲಸದಲ್ಲೂ ಶಿಸ್ತುಬದ್ಧತಾ ಕ್ರಮ,ರೂಢಿಸಿಕೊಳ್ಳಬೇಕು ಮಾತ್ರವಲ್ಲದೆ, ಪ್ರತಿಯೊಂದು ವ್ಯಕ್ತಿಯನ್ನು ಹಾಗೂ ಅವರ ವೃತ್ತಿಯನ್ನು ಗೌರವದಿಂದ ಕಾಣಬೇಕು, ನಮ್ಮ ಜೊತೆಗಿದ್ದವರಿಗೆ ಪ್ರೀತಿ, ಗೌರವವನ್ನು ಹಂಚಬೇಕು ಎಂದು ವಿವೇಕಾನಂದ ಸ್ವಾಯತ್ತ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಮನಮೋಹನ ಎಂ ಹೇಳಿದರುಇವರು ಪುತ್ತೂರಿನ […]

ವಿವೇಕಾನಂದ ಕಾಲೇಜಿನ ನವೀಕೃತ ಜಾಲತಾಣ ಲೋಕಾರ್ಪಣೆ

ವಿವೇಕಾನಂದ ಕಾಲೇಜಿನ ನವೀಕೃತ ಜಾಲತಾಣ ಲೋಕಾರ್ಪಣೆ ಪುತ್ತೂರು. ಮಾ, ೨೭: ಆಧುನಿಕ ಯುಗದಲ್ಲಿ ಸಂಸ್ಥೆಯ ಬೆಳವಣಿಗೆಗೆ ವೆಬ್‌ಸೈಟ್ ತುಂಬಾ ಪ್ರಾಮುಖ್ಯತೆಯನ್ನು ವಹಿಸುತ್ತದೆ. ಬಹಳ ವೇಗವಾಗಿ ಬದಲಾಗುವ ತಂತ್ರಜ್ಞಾನವನ್ನು ನಾವು ಅಳವಡಿಸಿಕೊಂಡು ವಿದ್ಯಾರ್ಥಿಗಳಿಗೆ ಮತ್ತು ಸಮಾಜಕ್ಕೆ ಪರೀಕ್ಷೆಯ ವೇಳಾಪಟ್ಟಿಗಳು, ಶೈಕ್ಷಣಿಕ ನೆರವು, ಕೋರ್ಸ್ ವಿವರಣೆಗಳು ಮತ್ತು ಇತರ ಪ್ರಮುಖ ಪ್ರಕಟಣೆಗಳ ವಿವರಗಳನ್ನು ನೀಡಬಹುದು. ಈ ಮೂಲಕ ಕಾಲೇಜಿನ ಎಲ್ಲಾ ಮಾಹಿತಿ ಅಂಗೈ ಅಂಗಳದಲ್ಲೆ ದೊರಕುವುದು ಎಂದು ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಡಾ ಶ್ರೀಪತಿ ಕಲ್ಲೂರಾಯ ಹೇಳಿದರು.ಇವರು ವಿವೇಕಾನಂದ […]

ವಿವೇಕಾನಂದದಲ್ಲಿ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟನೆ

ವಿಶ್ವಗುರುವಾಗುವತ್ತ ಭಾರತದ ಚಿತ್ತ – ಪ್ರೊ ವಿಷ್ಣುಕಾಂತ್ ಚಟ್ಟಪಲ್ಲಿ ಪುತ್ತೂರು, ಮಾ. 11: ವಿಕಸಿತ ಭಾರತದ ಮುನ್ನೋಟಗಳು ಜಗತ್ತಿಗೆ ಕಾಣಲಾರಂಭಿಸಿವೆ. ವಿಜ್ಞಾನ, ಸಂಶೋಧನೆ, ಕ್ರೀಡೆ,ಆರ್ಥಿಕತೆ, ಕೃಷಿ, ವ್ಯವಹಾರ ನಿರ್ವಹಣೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಮರ್ಥವಾಗಿ ಭಾರತವು ವಿಶ್ವಗುರುವಾಗುವುದರತ್ತಮುನ್ನಡೆಯುತ್ತಿದೆ ಎಂಬುದು ಹೆಮ್ಮೆಯ ವಿಷಯ. ಈ ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆಯರು ವಿಶೇಷವಾಗಿ ಮುಂಚೂಣಿಯಲ್ಲಿನಿಂತು ದುಡಿಯುತ್ತಿದ್ದಾರೆ. ಆದ್ದರಿಂದ ಇದನ್ನು ನಾರೀಶಕ್ತಿ ಯುಗ ಎಂದು ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಹಾಗೂಪಂಚಾಯತ್‌ರಾಜ್ ವಿಶ್ವವಿದ್ಯಾನಿಲಯ ಗದಗ ಇಲ್ಲಿನ ಕುಲಪತಿ ಪ್ರೊ. ವಿಷ್ಣುಕಾಂತ್ ಚಟ್ಟಪಲ್ಲಿ ಹೇಳಿದರು.ಇವರು ವಿವೇಕಾನಂದ […]

ವಿವೇಕಾನಂದ ಮಹಾವಿದ್ಯಾಲಯದಲ್ಲಿ ಬಾನ್ಸುರಿ ವಾದನ ಕಾರ್ಯಕ್ರಮ

ಪುತ್ತೂರು, ಮಾ.25: ಚಿರಂತನ ಚ್ಯಾರಿಟೇಬಲ್ ಟ್ರಸ್ಟ್ ಸುರತ್ಕಲ್ ಇವರು ಆಯೋಜಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಸಹಕಾರದೊಂದಿಗೆ ವಿವೇಕಾನಂದ ಸಂಶೋಧನಾ ಕೇಂದ್ರ, ಭಾರತೀಯ ಸಂಸ್ಕೃತಿ ಮತ್ತು ಲಲಿತ ಕಲೆಗಳ ಅಧ್ಯಯನ ಕೇಂದ್ರ,ಲಲಿತ ಕಲಾ ಸಂಘ ಮತ್ತು ಐಕ್ಯೂಎಸಿ ಇದರ ಜಂಟಿ ಆಶ್ರಯದಲ್ಲಿ ಪುತ್ತೂರಿನ ವಿವೇಕಾನಂದ ಕಲಾ, ವಾಣಿಜ್ಯ, ವಿಜ್ಞಾನಮಹಾವಿದ್ಯಾಲಯ (ಸ್ವಾಯತ್ತ) ಇಲ್ಲಿ ಬಾನ್ಸುರಿ ವಾದನ ಕಾರ್ಯಕ್ರಮ ನೆರವೇರಿತು.ಪೂರ್ವಾಹ್ನದ ರಾಗ ಆಹಿರ್ ಭೈರವ್‌ನಲ್ಲಿ ಆಲಾಪ್, ಮಧ್ಯಲಯ್ ರೂಪಕ್ ಹಾಗೂ ದೃತ್ ತೀನ್ ತಾಳದ ಸಂಯೋಜನೆ ಹಾಗೂಅಪರಾಹ್ನದ ರಾಗವಾದ ಬೃಂದಾವನಿ ಸಾರಂಗ್ […]

ಪ್ಲಾಸ್ಮಾ ತಂತ್ರಜ್ಞಾನದ ವಸ್ತು ಪ್ರದರ್ಶನ ಮತ್ತು ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಸಮಾರಂಭ.

ಪುತ್ತೂರು, ಸೆ 1:ಮೂರು ದಿನಗಳ ಕಾಲ ನಡೆದ ಪ್ಲಾಸ್ಮಾ ತಂತ್ರಜ್ಞಾನದ ವಸ್ತು ಪ್ರದರ್ಶನ ಮತ್ತು ರಾಷ್ಟ್ರೀಯ ವಿಚಾರ ಸಂಕಿರಣ ವಿದ್ಯಾರ್ಥಿಗಳಿಂದ ವಿದ್ಯಾರ್ಥಿಗಳಿಗೆ ನಡೆದಿದೆ ಮತ್ತು ಇದು ಯಶಸ್ಸನ್ನು ಕಂಡಿದೆ. ಇಲ್ಲಿನ ವಿದ್ಯಾರ್ಥಿಗಳು ಪ್ಲಾಸ್ಮಾ ತಂತ್ರಜ್ಞಾನದ ಕುರಿತು ನಾವು ಹೇಳಿದ್ದನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಇದನ್ನು ತಿಳಿಯಲು ಬಂದ ವಿದ್ಯಾರ್ಥಿಗಳಿಗೆ ಅರ್ಥವಾಗುವ ರೀತಿಯಲ್ಲಿ ವಿವರಿಸಿದ್ದಾರೆ. ಎಲ್ಲಾ ವಿದ್ಯಾರ್ಥಿಗಳು ಅತ್ಯಂತ ಆಸಕ್ತಿಯಿಂದ ಭಾಗವಹಿಸಿದ್ದಾರೆ. ವಿವೇಕಾನಂದ ವಿದ್ಯಾಸಂಸ್ಥೆಯು ನಮ್ಮ ತಂಡಕ್ಕೆ ಸಂಪೂರ್ಣ ಸಹಕಾರವನ್ನು ನೀಡಿದೆ ಎಂದು ಸಮುದಾಯ ಸಂಪರ್ಕ ವಿಭಾಗ, ಐ.ಪಿ.ಆರ್ […]

ವಿದ್ಯಾರ್ಥಿಗಳಲ್ಲಿ ರಾಷ್ಟ್ರಭಕ್ತಿಯ ಚಿಂತನೆ ಮೂಡಲಿ – ಕೋಟ ಶ್ರೀನಿವಾಸ ಪೂಜಾರಿ ವಿವೇಕಾನಂದ ಮಹಾವಿದ್ಯಾಲಯದಲ್ಲಿ 2023-24ನೇ ಸಾಲಿನ ವಿದ್ಯಾರ್ಥಿ ಸಂಘ ಉದ್ಘಾಟನೆ

ಪುತ್ತೂರು.ಅ,21:- ವಿದ್ಯಾರ್ಥಿಗಳಲ್ಲಿ ರಾಷ್ಟ್ರ ಭಕ್ತಿಯ ಚಿಂತನೆಯನ್ನು ಮೂಡಿಸುವ ಶಿಕ್ಷಣ ಪ್ರತಿಯೊಂದು ವಿದ್ಯಾಸಂಸ್ಥೆಗಳಲ್ಲೂ ದೊರಕಬೇಕು. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಯಾವ ರೀತಿಯ ಶಿಕ್ಷಣ ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣಕ್ಕೆಪೂರಕವಾಗಬಹುದು ಎಂಬ ವಿಚಾರದೆಡೆಗೆ ಶಿಕ್ಷಣ ಸಂಸ್ಥೆಗಳು ಗಮನ ಹರಿಸಬೇಕು ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.ಇವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಮಹಾವಿದ್ಯಾಲಯದ 2023-24ನೇ ಸಾಲಿನ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.ಒಬ್ಬ ಧೀಮಂತ ನಾಯಕನಿಂದ ಇಂದು ಇಡೀ ವಿಶ್ವವೇ ಭಾರತದೆಡೆಗೆ ತಿರುಗಿ ನೋಡುವಂತಾಗಿದೆ ಇದಕ್ಕೆ […]

ಡಾ.ಎಚ್.ಜಿ ಶ್ರೀಧರ್ ಸಾಹಿತ್ಯದ ಅನೇಕ ಮಜಲುಗಳಲ್ಲಿ ಕೈ ಆಡಿಸಿದವರು ;ಐತಪ್ಪ ನಾಯ್ಕಪುತ್ತೂರು,

ಜ13 :- ಡಾ.ಎಚ್.ಜಿ ಶ್ರೀಧರ್ ಅವರು ಎಲೆ ಮರೆಯ ಕಾಯಿಯಂತೆ ಉಳಿದವರು. ಯಾವತ್ತಿಗೂ ತಮ್ಮ ಇರುವನ್ನು ಪ್ರದರ್ಶಿಸದೇ ನಾಟಕ, ಕಾದಂಬರಿ, ಸಂಶೋಧನೆ, ಸಂಘಟನೆ ಹೀಗೆ ಅನೇಕ ಕ್ಷೇತ್ರಗಳಲ್ಲಿ ಕೈ ಆಡಿಸಿ, ಸಮಾಜಕ್ಕೆ, ಸಾಹಿತ್ಯ ಕ್ಷೇತ್ರಕ್ಕೆ, ಶಿಕ್ಷಣ ಕ್ಷೇತ್ರಕ್ಕೆ, ಉತ್ತಮ ರೀತಿಯಲ್ಲಿ ಕೊಡುಗೆ ನೀಡಿದ ಇವರು ನಮಗೊಂದು ಹೆಮ್ಮೆ ಮತ್ತು ಇಂದಿನ ಯುವ ಸಾಹಿತಿಗಳಿಗೆ ಆದರ್ಶ ಎಂದು ಪುತ್ತೂರು ಘಟಕದ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷ ಐತಪ್ಪ ನಾಯ್ಕ ಹೇಳಿದರು. ಅವರು ಇಲ್ಲಿನ ಪುತ್ತೂರು ವಿವೇಕಾನಂದ […]