ಅಮ್ಮಎಂದರೆ ಏನೋ ಹರುಷವೋ…
ಹೆಣ್ಣುಅಮ್ಮನ ಸ್ಥಾನಕ್ಕೆ ಬಂದಾಗ ಎಷ್ಟೋ ಬದಲಾವಣೆಗಳಾಗುತ್ತದೆ.,ಅದೇ ಹೆಣ್ಣುಚಿಕ್ಕದಾಗಿದ್ದಾಗಎಷ್ಟೊಂದುತರಲೆ ಮಾಡಿದರೂ ಮುಂದೆ ಸರಿಪಡಿಸಿಕೊಳ್ಳುತ್ತಾಳೆ.ಮಕ್ಕಳು ದೊಡ್ಡದಾದಂತೆಕಿರಿಕಿರಿಯನ್ನು ಸಹಿಸಿಕೊಂಡುಅವರಿಗೆ ಪ್ರೀತಿಯನ್ನು ನೀಡಿ ಸಾಕುತ್ತಾಳೆ. ಅವಳ ಪ್ರೀತಿ, ವಾತ್ಸಲ್ಯ, ಮಮತೆ,.ತನ್ನಗಂಡಅಥವಾ ಬಂಧುಗಳಿಂದಲೂ ದೊರಕದು.
ಅಮ್ಮ ಎಂಬ ಎರಡಕ್ಷರ ಕೇಳಿದಾಗ ಎಲ್ಲರ ಮನದಲ್ಲಿಮೂಡುವುದು ಮಕ್ಕಳ ನೆನಪು.ಏಕೆಂದರೆಚಿಕ್ಕಂದಿನಲ್ಲಿ ಮಕ್ಕಳು ಮೊದಲುಕಲಿಯೋ ಪದವೇ ’ಅಮ್ಮ’.ಮೊದಲಿಗೆದೊರಕೋ ಪ್ರೀತಿಯೇ ಮೊದಲ ಪದವಾಗಿರುತ್ತದೆ.ಅದೇರೀತಿ ಮಗು ಕೂಡ ಈ ಎರಡು ಪದವನ್ನುಚಿಕ್ಕಂದಿನಲ್ಲಿಯಾರೇಕಂಡರೂಕರೆಯಲು ಪ್ರಾರಂಬಿಸುತ್ತದೆ.
ಅಮ್ಮತನ್ನಎಲ್ಲಾಜವಾಬ್ದಾರಿಯನ್ನು ನಿಭಾಯಿಸಿಕೊಂಡು ಹೋಗಲು ಶಕ್ತಳಾಗಿರುತ್ತಾಳೆ; ಅದಕ್ಕಾಗೇತನ್ನಗಂಡನ ಸುಖ-ದುಃಖದಲ್ಲಿಯೂ ಭಾಗಿಯಾಗುತ್ತಾಳೆ.ಅದಕ್ಕಾಗೆಈಕೆಯನ್ನು ಪತಿಯಅರ್ಧಾಂಗಿಎಂಬುವುದಾಗಿಕರೆಯುವ ವಾಡಿಕೆಯಿದೆ.ಗಂಡನು ಮುಂದುವರೆಯಲು ಹೆಣ್ಣಿನ ಬಲವೂ ಬೇಕೆಂಬುವುದನ್ನು ಮರೆಯಬಾರದು; ಸುಖದ ಸಂಸಾರವನ್ನು ನಡೆಸಲು ಒಳ್ಳೆಯ ಮನಸ್ಸಿನ ಗೃಹಿಣಿಯಿಂದಲೇ ಸಾದ್ಯ.
ಮನೆಯಲ್ಲಿಅಡುಗೆಯ ವಿಚಾರ ಬಂದಾಗಥಟ್ಟನೆ ನೆನಪಾಗುವುದು ’ಅಮ್ಮ’. ಹೆಣ್ಣು ಎಂಬವವಳು ಅಡುಗೆಮನೆಗೆ ಮಾತ್ರವೇ ಸೀಮಿತ ಎಂಬುವುದು ಹಲವರ ಬಾವನೆ. ಇದರ ನಡುವೆಯೂ ಮನೆಗೆಲಸದಜೊತೆ ಮಕ್ಕಳ ಪಾಲನೆಯನ್ನು ಮಾಡುವಈಕೆಯಓಲೈಕೆಯನ್ನು ಮೆಚ್ಚಲೇಬೇಕು.
ಅಮ್ಮಇದ್ದ ಮನೆಯಲ್ಲಿ ಕಳೆ ಎದ್ದುಕಾಣುತ್ತದೆ. ಶುಚಿತ್ವದ ವಿಷಯದಲ್ಲಿಅಮ್ಮನನ್ನು ಮೀರಿಸುವಂತವರಿಲ್ಲ,.ಒಂದು ಮನೆ ಸುಚಿತ್ವದಿಂದ ಕಂಗೊಳಿಸುತ್ತಿದ್ದರೆ ಆ ಮನೆಯಲ್ಲಿನಹೆಣ್ಣಿನ ಪಾರ್ಥ ಮುಖ್ಯದ್ದು.
ಅಮ್ಮನ ತಾಳ್ಮೆಗೆ ಸಾಟಿಯಾರಿಲ್ಲ..!!!
ತಾಳ್ಮೆಗೆಇನ್ನೊಂದು ಹೆಸರೇಅಮ್ಮ; ತನ್ನ ಮಕ್ಕಳು ಮತ್ತುಗಂಡನ ವಿಚಾರದಲ್ಲಿಈಕೆಯ ಮನಸ್ಸು ಹಿರಿದು. ಮಕ್ಕಳು ಅಥವಾ ಪತಿತಪ್ಪುದಾರಿ ಹಿಡಿದಾಗ ಬುದ್ದಿಹೇಳುವ ಮಾತೆ ಇವಳು, ಎಂಥಹಾಕಠಿಣ ಸಂದರ್ಬದಲ್ಲೂ ತಾಳ್ಮೆ ಕಳೆದುಕೊಳ್ಳದ ಅಮ್ಮನ ಹಿರಿಮೆಗೆ ಸರಿಸಾಟಿಯಾರೂಇಲ್ಲ.
ತಾಯಿಯಾದವಳು ಮಕ್ಕಳ ವಿಚಾರದಲ್ಲಿಎಂದೂಅಸಡ್ಡೆತೋರುವುದಿಲ್ಲ; ಮಗು ಅಮ್ಮಾ….ಎಂದುಕರೆದಾಗತಾನು ಏನೇ ಕೆಲಸದಲ್ಲಿದ್ದರೂ ತಟ್ಟನೆ ಮಗುವೆಡೆಗೆಚಿತ್ತ ಹರಿಸುತ್ತಾಳೆ.ಮನೆಗೆ ಬಂಧು ಬಾಂದವರು ಬಂದರಂತೂ ಈಕೆಗೆ ಆತಿಥ್ಯದ ಹೊಣೆತಪ್ಪಿದ್ದಲ್ಲ.
ಅಮ್ಮ ಎಂಬ ಶಬ್ದದಲ್ಲೇಒಂದುರೀತಿಯ ಪ್ರೀತಿ, ವಾತ್ಸಲ್ಯ, ಆದ್ದರಿಂದಲೇ ’ಉಪ್ಪಿಗಿಂತರುಚಿಯಿಲ್ಲತಾಯಿಗಿಂತ ಬಂಧುವಿಲ್ಲ’ ಎಂಬ ತಾತ್ಪರ್ಯಅಮ್ಮನಿಗೆ ಹೇಳಿ ಮಾಡಿಸಿದಂತಿದೆ.
ಸಂಧ್ಯಾ ಸಾವಿತ್ರಿಕೆ.ಜಿ
ವಿವೇಕಾನಂದಕಾಲೇಜು ಪುತ್ತೂರು