ಜೀವನಕ್ಕಿರಲೊಂದು ಗುರಿ
ಚಿಕ್ಕ ಮಗುವಾಗಿದ್ದಾಗ ಇದ್ದ ಗುರಿ ಮನಸ್ಸು ಬೆಳೆದಂತೆ ಬದಲಾಗುತ್ತಾ ಹೋಗುತ್ತದೆ. ಇದು ಎಲ್ಲರ ಸಹಜ ಮನಸ್ಥಿತಿ. ಕೆಲವರಿಗೆ ಚಿಕ್ಕಂದಿನ ಕನಸು ನನಸಾದ ಕ್ಷಣವಾದರೆ, ಹಲರಿಗೆವರಿಗೆ ತಮ್ಮ ಗುರಿಯನ್ನು ತಲುಪಲು ಅಸಾಧ್ಯವಾಗುವುದು ವಿಪರ್ಯಾಸ.
ತಮ್ಮ ಮುಂದಿನ ಗುರಿಯನ್ನು ಯಾರೂ ತಿಳಿಯಲು ಸಾಧ್ಯವಿಲ್ಲ ಎಂಬುದು ತಪ್ಪು. ಅವರವರ ಗುರಿಯನ್ನು ಅವರವರೇ ನಿರ್ಧರಿಸುವುವದು ಸೂಕ್ತ ಅಲ್ಲವೇ? ಯಾಕೆಂದರೆ ತಮ್ಮ ತಮ್ಮ ಯೋಚನೆಗೆ ತಕ್ಕಂತೆ ತಾವೇ ನಿರ್ಧಾರ ಮಾಡುವುದು ಅಗತ್ಯ. ಹಾಗೆಯೇ ದೊಡ್ಡವರಾದ ನಂತರ ತಮಗೆ ಬೇಕಾದ ವಸ್ತುಗಳನ್ನು ತಾವೇ ನಿರ್ಧರಿಸಿ ಸರಿಯಾದ ದಾರಿಯಲ್ಲಿ ಹೋಗುವುದು ಪ್ರತಿಯೊಬ್ಬನ ಆಧ್ಯ ಕರ್ತವ್ಯ.
ನಾನು ಹೀಗೆ ಆಗಬೇಕು ಎಂಬ ಭಾವನೆ ಪ್ರತಿಯೊಬ್ಬನ ಮನಸ್ಸಿನಲ್ಲರುತ್ತದೆ. ಅಷ್ಟರಲ್ಲಿ ಹೆತ್ತವರು ತಮ್ಮ ಆಸೆಯನ್ನು ಅವನ ಮೇಲೆ ಹೇರಬಾರದು. ಇದರಿಂದ ಮಕ್ಕಳ ಭವಿಷ್ಯವೇ ಹಾಳಾಗುವು ಸಾಧ್ಯತೆಗಳು ಹೆಚ್ಚಿರುತ್ತದೆ. ಆದ್ಧರಿಂದ ಮಗು ಆಯ್ಕೆ ಮಾಡಿದ ವಿಷಯದ ಬಗ್ಗೆ ಆಲೋಚಿಸಿ, ತಪ್ಪಾದರೆ ತಿಳಿ ಹೇಳಿ ಸಮಾಧಾನಿಸಬೇಕು. ಮಕ್ಕಳ ಮೇಲೆ ದರ್ಪ ತೋರಿದರೆ ಮಗುವಿನ ಮುಂದಿನ ಜೀವನ ನರಕ ಸದೃಷವಾಗುವುರಲ್ಲಿ ಸಂಶಯವಿಲ್ಲ.
ತಪ್ಪು ದರಿಯನ್ನು ಮಗ/ಮಗಳು ಹಿಡಿದಳೆಂದಾದರೆ ಮಾತ್ರ ಹಿರಯರು ಸರಿ ದಾರಿಗೆ ಕರೆದುಕೊಂಡು ಹೋಗುವಲ್ಲಿ ಶ್ರಮ ವಹಿಸಬೇಕು. ಅದು ಬಿಟ್ಟು ದರ್ಪದಿಂದ ರ್ಬದು, ಹೊಡೆದು ಮಾಡಿದಲ್ಲಿ ಅನಾಹುತವಾಗ ಬಹುದು. ಹಾಗೆಯೇ ಮಗು ತನ್ನ ದಾರಿಯನ್ನು ಹಿಡಿದಲ್ಲ ಆತ/ಆಕೆಯ ಧ್ಯೇಯ ಫಲಿಸಿ ಸಾರ್ಥಕ ಜೀವನವಾಗುತ್ತದೆ.
ಗುರು ಹಿರಿಯರ ಮಾತು ಕೇಳುವುದು ತಪ್ಪಲ್ಲ ಆದರೆ ತಮ್ಮ ನಿರ್ಧಾರಕ್ಕೆ ಕಳಂಕ ತಂದೊಡ್ಡುವುದು ಮಾತ್ರ ಕೆಟ್ಟದ್ದು. ಯಾವುದನ್ನು ಆರಿಸಲಿ ಎಂಬ ಖಚಿತ ನಿಲುವಿದ್ದಲ್ಲಿ ಮಾತ್ರ ಗುರು ಹಿರಿಯರ ಮಾತು ಕೇಳಿಕೊಂಡು ಮುಂದುವರಿಯುವುದು ಸೂಕ್ತ.
ಚಿಕ್ಕಂದಿನಲ್ಲಿ ಇದ್ದ ಹಲವಾರು ಆಸೆಗಳು ದೊಡ್ಡದಾದ ನಂತರ ಇರದು. ಹಾಗೆಯೇ ದೊಡ್ಡವರಾದಂತೆ ಮನಸ್ಸು ಪ್ರಸ್ತುತತೆಯನು ಅರಿತು ಕಷ್ಟ-ಸುಖಗಳಿಗನುಗುಣವಾಗಿ ಜೀವನೋಪಾಯಕ್ಕೆ ತಕ್ಕಂತೆ ತಮ್ಮ ಆಸೆ ಬೆಳೆಯುತ್ತಾ ಹೋದರೆ ಬಾಳು ಹಸನಾಗುವುದು ನಿಶ್ಚಿತ.
ದ್ಯೇಯ ಎಂಬುದನ್ನು ಹಿಡಿಯುವುದು ಮುಖ್ಯವಲ್ಲ. ಹಿಡಿದ ಗುರಿ ಫಲಿಸಿದೆಯೋ ಎಂಬುದು ಮುಖ್ಯ. ಆದ್ಧರಿಂದ ತಮ್ ಯೋಚನೆಗೆ ತಕ್ಕಂತೆ , ಬುದ್ದಿವಂತಿಕೆಗೆ ಅನುಗುಣವಾಗಿ ಕೆಲಸವನ್ನು ಹಿಡಿಯುವಲ್ಲಿ ಕಾರ್ಯನಿರತರಾಗುವುದು ಉತ್ತಮ. ಇಲ್ಲಿ ವಿವೇಕಾನಂದರು ಹೇಳಿದ ಮಾತು ನೆಪಿಗೆ ಬರುತ್ತದೆ. ಏಳಿ ಎದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಎಂದು. ಆದುದರಿಂದ ಎಲ್ಲರೂ ಅವರವರ ಗುರಿಯತ್ತ ಮುನ್ನಡೆಯೋಣ.
ಸಂಧ್ಯಾ ಸಾವಿತ್ರಿ. ಕೆ.ಜಿ ವಿವೇಕಾನಂದ ಕಾಲೇಜು, ಪುತ್ತೂರು