ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬರುವ ಪುತ್ತೂರು ತಾಲೂಕು ಪಶ್ಚಿಮ ಘಟ್ಟದ ಸೆರಗಿನಲ್ಲಿ ಬರುವ ಸ್ಥಳಗಳಲ್ಲಿ ಒಂದು.
ಜಿಲ್ಲಾ ಕೇಂದ್ರವಾದ ಮಂಗಳೂರಿನಿಂದ ಪೂರ್ವಕ್ಕೆ ಸುಮಾರು 50 ಕಿಲೋಮೀಟರ್ ದೂರದಲ್ಲಿ ಬರುವ ಪುತ್ತೂರು ಕಂದಾಯ ಉಪವಿಭಾಗವಾಗಿ ಗುರುತಿಸಲ್ಪಟ್ಟಿದೆ. ಬಂಟ್ವಾಳ – ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಪುತ್ತೂರು ಹೊರವಲಯದ ನೆಹರು ನಗರದಿಂದ ಒಂದು ಕಿಲೋಮೀಟರ್ ಒಳಗೆ ಬಂದರೆ ವಿವೇಕಾನಂದ ಕಾಲೇಜು ಸಿಗುತ್ತದೆ.
ಮಾನವನ ಬದುಕನ್ನು ರೂಪಿಸುವಲ್ಲಿ ‘ಶಿಕ್ಷಣ’ಕ್ಕೆ ಯಾರು ನಿರಾಕರಿಸದಂತಹ ಪ್ರಧಾನ ಸ್ಥಾನ ಸಲ್ಲುತ್ತದೆ. ಯಾವುದೇ ಹಂತದ ಶಿಕ್ಷಣವಾದರೂ, ಓರ್ವ ವ್ಯಕ್ತಿಯ ವೈಯಕ್ತಿಕ ವ್ಯಕ್ತಿತ್ವವನ್ನು ಬೆಳೆಸುವುದು ಮತ್ತು ಅವನ ಜೀವನವನ್ನು ಅರ್ಥೈಸಿಕೊಳ್ಳುವುದು ‘ಶಿಕ್ಷಣ’ದ ಬಹುಮುಖ್ಯ ಕರ್ತವ್ಯವಾಗಿದೆ. ... ಮುಂದೆ ಓದಿ