ವಿವೇಕಾನಂದ ಕಾಲೇಜು, ಪುತ್ತೂರು

’ನ್ಯಾಕ್’‍ನಿಂದ "ಎ" ಶ್ರೇಣಿಯನ್ನು ಪಡೆದುಕೊಂಡಿರುವ ಸಂಸ್ಥೆ

College with Potential for Excellence (CPE) ಎಂದು ಯುಜಿಸಿಯಿ೦ದ ಗುರುತಿಸಲ್ಪಟ್ಟಿದೆ

| +91 8251 230 455 | English

ಪದವಿ ವಿಭಾಗ

ಪದವಿ ತರಗತಿಗೆ ಅರ್ಜಿ ಸಲ್ಲಿಸಲು ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯು ನಡೆಸುವ ಪಿ.ಯು.ಸಿ. ಪರೀಕ್ಷೆ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಯು ಅರ್ಹನಾಗಿರುತ್ತಾನೆ.
ಬಿ.ಎಸ್ಸಿ. ವಿಭಾಗಕ್ಕೆ ಸೇರಲು ಅಪೇಕ್ಷಿಸುವ ವಿದ್ಯಾರ್ಥಿಯು ಪಿಯುಸಿಯಲ್ಲಿ ವಿಜ್ಞಾನ ವಿಷಯದಲ್ಲಿ ಅಧ್ಯಯನ ಮಾಡಿರಬೇಕು.
ಬಿ.ಕಾಂ. ತರಗತಿಗೆ ಸೇರಲು ಅಪೇಕ್ಷಿಸುವ ವಿದ್ಯಾರ್ಥಿಯು ಪಿಯುಸಿಯಲ್ಲಿ ಅಕೌಂಟೆನ್ಸಿ ಮತ್ತು ಬಿಸಿನೆಸ್ ಸ್ಟಡೀಸ್ ವಿಷಯವನ್ನು ಓದಿರಬೇಕು.

ಅರ್ಹತೆ :

ಪದವಿ ತರಗತಿಗೆ ಅರ್ಜಿ ಸಲ್ಲಿಸಲು ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯು ನಡೆಸುವ ಪಿ.ಯು.ಸಿ. ಪರೀಕ್ಷೆ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಯು ಅರ್ಹನಾಗಿರುತ್ತಾನೆ.
ಬಿ.ಎಸ್ಸಿ. ವಿಭಾಗಕ್ಕೆ ಸೇರಲು ಅಪೇಕ್ಷಿಸುವ ವಿದ್ಯಾರ್ಥಿಯು ಪಿಯುಸಿಯಲ್ಲಿ ವಿಜ್ಞಾನ ವಿಷಯದಲ್ಲಿ ಅಧ್ಯಯನ ಮಾಡಿರಬೇಕು.
ಬಿ.ಕಾಂ. ತರಗತಿಗೆ ಸೇರಲು ಅಪೇಕ್ಷಿಸುವ ವಿದ್ಯಾರ್ಥಿಯು ಪಿಯುಸಿಯಲ್ಲಿ ಅಕೌಂಟೆನ್ಸಿ ಮತ್ತು ಬಿಸಿನೆಸ್ ಸ್ಟಡೀಸ್ ವಿಷಯವನ್ನು ಓದಿರಬೇಕು.
ಬಿ.ಸಿ.ಎ.ಗೆ ಸೇರಲು ಬಯಸುವ ವಿದ್ಯಾರ್ಥಿಗಳು ಕನಿಷ್ಠ 40 ಶೇಕಡಾ ಅಂಕಗಳನ್ನು ವಿಶ್ವವಿದ್ಯಾನಿಲಯದ ನಿಯಮಾನುಸಾರ ಪಡೆದಿರಬೇಕು.

 

ದಾಖಲಾತಿಯ ವಿಧಾನ :

ಬಿ.ಎ., ಬಿಎಸ್ಸಿ., ಬಿ.ಕಾಂ., ಬಿಬಿಎ., ಬಿಸಿಎ., ವಿಷಯಗಳಿಗೆ ಸೇರಬಯಸುವ ವಿದ್ಯಾರ್ಥಿಯು ಕಾಲೇಜಿನಿಂದ ಅರ್ಜಿಯನ್ನು ಪಡೆದುಕೊಂಡು, ಭರ್ತಿಮಾಡಿ ನಿಗದಿತ ಶುಲ್ಕದೊಂದಿಗೆ ನಿಗದಿತ ಸಮಯದೊಳಗೆ ನೊಂದಾಯಿಸಬೇಕು.
ಅರ್ಜಿಯೊಂದಿಗೆ ಪ್ರಮಾಣೀಕರಿಸಿದ ಅಂಕಪಟ್ಟಿಯನ್ನು ಲಗತ್ತಿಸಿರಬೇಕು.
ಕರ್ನಾಟಕ ಸರ್ಕಾರದ ಮೀಸಲಾತಿ ನಿಯಮದನ್ವಯ ಸೀಟು ಹಂಚಿಕೆಯನ್ನು ಈ ಕೆಳಗಿನಂತೆ ಮಾಡಲಾಗುವುದು. ಸಾಮಾನ್ಯ ವರ್ಗ 50%, ಪರಿಶಿಷ್ಟ ಜಾತಿ 15%, ಪರಿಶಿಷ್ಟ ಪಂಗಡ 3%, ಪ್ರವರ್ಗ 1 4%, ಪ್ರವರ್ಗ 2ಎ 15%, ಪ್ರವರ್ಗ 2ಬಿ 4%, ಪ್ರವರ್ಗ 3ಎ 4% ಮತ್ತು ಪ್ರವರ್ಗ 3ಬಿ 5%.
ನಿಗದಿತ ದಿನಾಂಕದೊಳಗೆ ಬಂದ ಅರ್ಜಿಗಳನ್ನು ಕ್ರೋಢೀಕರಿಸಿ ಜ್ಯೇಷ್ಠತಾ ಪಟ್ಟಿಯನ್ನು ತಯಾರಿಸಿ ಪ್ರಕಟಿಸಲಾಗುವುದು.
ಪ್ರವೇಶಾತಿಗೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುವುದು. ಸಂಧರ್ಶನಕ್ಕೆ ಬರುವಾಗ ವಿದ್ಯಾರ್ಥಿಯು ತಮ್ಮ ಹೆತ್ತವರು ಅಥವಾ ಪೋಷಕರೊಂದಿಗೆ ಬರುವುದು ಅಪೇಕ್ಷಣೀಯ.

ಪ್ರವೇಶಾತಿಯ ಸಂದರ್ಭದಲ್ಲಿ ಈ ಕೆಳಗಿನ ದಾಖಲೆಗಳನ್ನು ವಿದ್ಯಾರ್ಥಿಯು ಸಲ್ಲಿಸಬೇಕಾಗಿರುತ್ತದೆ.

 • ಉತ್ತೀರ್ಣಗೊಂಡಿರುವ ವಿಷಯದ ಅಂಕಪಟ್ಟಿ
 • ಎಸ್.ಎಸ್.ಎಲ್.ಸಿ. ಅಂಕಪಟ್ಟಿಯ ಛಾಯಾಪ್ರತಿ
 • ವರ್ಗಾವಣೆ ಪ್ರಮಾಣ ಪತ್ರ ಮತ್ತು ಗುಣನಡತೆಯ ಪ್ರಮಾಣ ಪತ್ರ
 • ಹೊರರಾಜ್ಯದ ವಿದ್ಯಾರ್ಥಿಗಳು ಪ್ರವೇಶಾತಿಯ ಸಂದರ್ಭದಲ್ಲಿ ವಲಸೆ ಪ್ರಮಾಣಪತ್ರ ಮತ್ತು ಅರ್ಹತಾ ಪ್ರಮಾಣ ಪತ್ರವನ್ನು ಸಲ್ಲಿಸುವುದು ಕಡ್ಡಾಯ.
 • ವಿದ್ಯಾರ್ಥಿಯು ಮೀಸಲಾತಿಯನ್ನು ಪಡೆಯಬೇಕಿದ್ದಲ್ಲಿ ಅದಕ್ಕೆ ಸಂಬಂಧಿಸಿದ ಇತ್ತೀಚೆಗಿನ ಪ್ರಮಾಣ ಪತ್ರವನ್ನು ಸಲ್ಲಿಸಬೇಕು.
 • ಆದಾಯ ಮಿತಿಯನ್ನು ಬಯಸುವ ವಿದ್ಯಾರ್ಥಿಯು ಇತ್ತೀಚೆಗಿನ ಆದಾಯ ಪ್ರಮಾಣ ಪತ್ರವನ್ನು ಸಲ್ಲಿಸಬೇಕು.
 • ಪಾಸ್‍ಪೋರ್ಟ್ ಅಳತೆಯ ಇತ್ತೀಚಿನ ಮೂರು ಭಾವಚಿತ್ರಗಳು

ವಿಶೇಷ ಸೂಚನೆ :

 • ಬಿಬಿಎ ಮತ್ತು ಬಿಸಿಎ ತರಗತಿಗೆ ಪದವಿಪೂರ್ವ ವಿಭಾಗದಲ್ಲಿ ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ಓದಿದ ವಿದ್ಯಾರ್ಥಿಗಳಿಗೆ ಆದ್ಯತೆಯನ್ನು ನೀಡಲಾಗುವುದು. ಉಳಿದವರೂ ಸಹ ಅರ್ಜಿಯನ್ನು ಸಲ್ಲಿಸಲು ಅವಕಾಶವಿದೆ.
 • ಹೊರರಾಜ್ಯದ ವಿದ್ಯಾರ್ಥಿಗಳಿಗೆ ಮಂಗಳೂರು ವಿಶ್ವವಿದ್ಯಾಲಯದಿಂದ ಅರ್ಹತಾ ಪ್ರಮಾಣ ಪತ್ರವನ್ನು ಪಡೆಯುವುದು ಕಡ್ಡಾಯ.
 • ಪದವಿ ತರಗತಿಗೆ ಪ್ರವೇಶವನ್ನು ಪಡೆಯಲು ಅಪೇಕ್ಷಿಸುವ ವಿದ್ಯಾರ್ಥಿಗೆ ಯಾವುದೇ ಪ್ರವೇಶ ಪರೀಕ್ಷೆಯನ್ನು ನಡೆಸುತ್ತಿಲ್ಲ. ಆದರೆ ಅಗತ್ಯವಿದ್ದಲ್ಲಿ ಇಂತಹ ಪರೀಕ್ಷೆಯನ್ನು ಸಂಸ್ಥೆಯ ವತಿಯಿಂದ ನಡೆಸಲಾಗುವುದು.
 • ಪ್ರವೇಶಾತಿ ಮತ್ತು ದಾಖಲಾತಿಗೆ ಸಂಬಂಧಿಸಿದ ಮಾಹಿತಿಗಳಿಗೆ ವಿದ್ಯಾರ್ಥಿಗಳು ಕಾಲೇಜಿನ ಸೂಚನಾ ಫಲಕ ಮತ್ತು ಅಂತರ್ಜಾಲ ತಾಣವನ್ನು ಗಮನಿಸಬೇಕು. ಈ ಬಗ್ಗೆ ಯಾವುದೇ ಮಾಹಿತಿಯ ಅಗತ್ಯವಿದ್ದಲ್ಲಿ ಕಾಲೇಜಿನ ಕಛೇರಿಯನ್ನು ಕೆಲಸದ ಅವಧಿಯಲ್ಲಿ ಸಂಪರ್ಕಿಸಬಹುದು.
 • ಹುಡುಗರು ಮತ್ತು ಹುಡುಗಿಯರಿಗೆ ಪ್ರತ್ಯೇಕ ವಸತಿ ನಿಲಯದ ಸೌಲಭ್ಯವನ್ನು ಕಲ್ಪಿಸಲಾಗಿದೆ. ವಸತಿ ನಿಲಯದ ಸೌಲಭ್ಯವು ಅಗತ್ಯವಿರುವ ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಹಾಸ್ಟೆಲ್ ಕಛೇರಿಯನ್ನು ಸಂಪರ್ಕಿಸಬಹುದು.