ವಿವೇಕಾನಂದ ಕಾಲೇಜು, ಪುತ್ತೂರು

’ನ್ಯಾಕ್’‍ನಿಂದ "ಎ" ಶ್ರೇಣಿಯನ್ನು ಪಡೆದುಕೊಂಡಿರುವ ಸಂಸ್ಥೆ

College with Potential for Excellence (CPE) ಎಂದು ಯುಜಿಸಿಯಿ೦ದ ಗುರುತಿಸಲ್ಪಟ್ಟಿದೆ

| +91 8251 230 455 | English

ಶೈಕ್ಷಣಿಕ ಸೌಲಭ್ಯಗಳು

ವೈವಿಧ್ಯಮಯ ಕಲಿಕಾ ವಿಷಯಗಳು

ಬದಲಾಗುತ್ತಿರುವ ಸಮಾಜದ ಮತ್ತು ಶೈಕ್ಷಣಿಕ ವಾತಾವರಣಕ್ಕೆ ಪೂರಕವಾಗಿರುವಂತಹ ವಿಷಯಗಳನ್ನು ಕಲಿಕೆಯ ಸಲುವಾಗಿ ಒದಗಿಸಲಾಗುತ್ತಿದೆ. ಈ ಮೂಲಕ ಆಧುನಿಕ ಸಮಾಜದ ಅಗತ್ಯಗಳನ್ನು ಪೂರೈಸಲಾಗುತ್ತಿದೆ. ಅಲ್ಲದೆ ಸ್ಥಳೀಯವಾಗಿಯೇ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಅಧ್ಯಯನದ ಸೌಲಭ್ಯವನ್ನು ಒದಗಿಸುವ ದೃಷ್ಟಿಯಿಂದ ವಿವೇಕಾನಂದ ಕಾಲೇಜಿನಲ್ಲಿ ಎಂ.ಕಾಂ. ಎಂಎಸ್ಸಿ. ರಸಾಯನ ಶಾಸ್ತ್ರ, ಎಂ.ಸಿ.ಜೆ. ಮತ್ತು ಎಂ.ಎಸ್ಸಿ. ಗಣಿತಶಾಸ್ತ್ರವನ್ನು ಅಧ್ಯಯನ ವಿಷಯವನ್ನಾಗಿ ಆರಂಭಿಸಲಾಗಿದೆ.

ಅತ್ಯುತ್ತಮ ಕಲಿಕೆ ಮತ್ತು ಬೋಧನೆಯ ಅನುಭವ :

ಕಲಿಕೆಗೆ ಪೂರಕ ಸೌಲಭ್ಯಗಳಿರುವ ತರಗತಿಗಳು, ಪ್ರಯೋಗಾಲಯಗಳು, ಶ್ರವ್ಯ – ದೃಶ್ಯ ಕೊಠಡಿಗಳು, ಕಂಪ್ಯೂಟರ್ ಪ್ರಯೋಗಾಲಯ, ಭಾಷಾ ಪ್ರಯೋಗಾಲಯ, ಮಾಧ್ಯಮ ಕೇಂದ್ರ ಇತ್ಯಾದಿಗಳು ವಿದ್ಯಾರ್ಥಿಗಳಿಗೆ ಸ್ವಾನುಭವವನ್ನು ನೀಡುವಲ್ಲಿ ಸಹಕಾರಿಯಾಗಿದೆ. ಅಲ್ಲದೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಸಂಬಂಧವನ್ನು ಅತ್ಯಂತ ಸೌಹಾರ್ದಯುತವಾಗಿ ರೂಪಿಸುವಲ್ಲಿ ನೆರವಾಗಿದೆ.

ಉತ್ತಮ ಶೈಕ್ಷಣಿಕ ಅರ್ಹತೆ ಮತ್ತು ಅನುಭವೀ ಪ್ರಧ್ಯಾಪಕ ವರ್ಗ : ಕಲಾ, ವಿಜ್ಞಾನ, ವಾಣಿಜ್ಯ ಮತ್ತು ಸ್ನಾತಕೋತ್ತರ ವಿಭಾಗಗಳಲ್ಲಿ ಅನುಭವೀ ಪ್ರಾಧ್ಯಾಪಕರಿದ್ದು ಶೈಕ್ಷಣಿಕ ವಲಯದಲ್ಲಿ ತಮ್ಮ ಸಾಧನೆಗಳ ಮೂಲಕ ಇವರು ಗುರುತಿಸಲ್ಪಟ್ಟಿದ್ದಾರೆ. ಪ್ರಾಧ್ಯಾಪಕರಲ್ಲಿ 16 ಮಂದಿ ಡಾಕ್ಟರೇಟ್ ಪದವಿಯನ್ನು ಪಡೆದಿದ್ದು, 13 ಮಂದಿ ಎಂ.ಫಿಲ್ ಪದವಿಯನ್ನು ಪಡೆದಿದ್ದಾರೆ. ಅಲ್ಲದೆ ಹಲವರು ಈಗಾಗಲೇ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಅಧ್ಯಯನಕ್ಕೆ ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದಾರೆ.


ಮೂಲಭೂತ ಸೌಲಭ್ಯಗಳು :

ವಿಷಯಾಧಾರಿತ ಪ್ರಯೋಗಾಲಯಗಳು, ಗಾಳಿ ಬೆಳಕಿನಿಂದ ಕೂಡಿದ ತರಗತಿ ಕೊಠಡಿಗಳು, ವಿವಿಧ ಸಭಾಭವನಗಳು, ವಸತಿ ನಿಲಯಗಳು, ಕ್ರೀಡಾಂಗಣ, ಬ್ಯಾಂಕು ಇತ್ಯಾದಿ ಸೌಲಭ್ಯಗಳು ವಿದ್ಯಾರ್ಥಿಗಳ ಬಳಕೆಗೆ ನಿರಂತರವಾಗಿ ದೊರಕುತ್ತಿದೆ. ವಿಶೇಷವಾಗಿ ಈ ಕೆಳಗಿನ ಸೌಲಭ್ಯಗಳನ್ನು ಗಮನಿಸಬಹುದು.

1.ಉತ್ತಮ ಸೌಲಭ್ಯಗಳಿಂದ ಕೂಡಿರುವ ತರಗತಿಗಳು
2.ಅತ್ಯಾಧುನಿಕ ಪ್ರಯೋಗಾಲಯಗಳು
3.ಕಂಪ್ಯೂಟರ್ ಪ್ರಯೋಗಾಲಯಗಳು
4.ವಿವಿಧ ಉದ್ದೇಶಕ್ಕೆ ಅನುಗುಣವಾದ ಸಭಾಭವನಗಳು
5.ಭಾಷಾ ಪ್ರಯೋಗಾಲಯ ಮತ್ತು ಮಾಧ್ಯಮ ಕೇಂದ್ರ
6.ವಸ್ತು ಸಂಗ್ರಹಾಲಯ
7.ಕ್ರೀಡೆ ಮತ್ತು ಬಹುವಿಧ ವ್ಯಾಯಾಮ ಶಾಲೆ
8.ಪ್ರಾಥಮಿಕ ಆರೋಗ್ಯ ಕೇಂದ್ರ
9.ಉಪಾಹಾರ ಗೃಹ
10.ಸಹಕಾರಿ ಸಂಘದ ಮಳಿಗೆ
11.ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿ


ಗ್ರಂಥಾಲಯ

1.ತೆರೆದ ಕಪಾಟಿನ ವ್ಯವಸ್ಥೆ
2.70 ಸಾವಿರಕ್ಕೂ ಮಿಕ್ಕಿ ಪರಾಮರ್ಶನ ಗ್ರಂಥಗಳು
3.ಗಣಕೀಕೃತ ಗ್ರಂಥಾಲಯ ಸೇವೆ
4.ಬಾರ್‍ಕೋಡಿಂಗ್ ವ್ಯವಸ್ಥೆ
5.ಇನ್‍ಪ್ಲಿಬ್ ನೆಟ್‍ನ ಸದಸ್ಯತನ
6.220ಕ್ಕಿಂತಲೂ ಹೆಚ್ಚಿನ ಮ್ಯಾಗಜಿನ್‍ಗಳು
7.ಜೆರಾಕ್ಸ್ ಸೌಲಭ್ಯ
8.ಉಚಿತ ಬ್ರಾಸಿಂಗ್ ಸೆಂಟರ್
9.ಬುಕ್‍ಬ್ಯಾಂಕ್ ಸೌಲಭ್ಯ ಇತ್ಯಾದಿ


ವಸತಿ ನಿಲಯಗಳು :

ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ವಸತಿ ಗೃಹದ ವ್ಯವಸ್ಥೆಯಿದೆ.


ತರಬೇತಿ ಮತ್ತು ನೇಮಕಾತಿ :

ವರ್ತಮಾನದ ಅಗತ್ಯಗಳಿಗೆ ಅನುಗುಣವಾಗಿ ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ತರಬೇತಿಗಳನ್ನು ನೀಡಲಾಗುತ್ತಿದೆ. ಅಲ್ಲದೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಇಲ್ಲಿ ತಜ್ಞರು ಬಂದು ಮಾರ್ಗದರ್ಶನವನ್ನು ಮಾಡುತ್ತಿದ್ದಾರೆ. ಉದ್ಯೋಗಕ್ಕೆ ಸಂಬಂಧಿಸಿ ಪ್ರತೀ ವರ್ಷ ಉದ್ಯೋಗ ಮೇಳವನ್ನು ಸಂಸ್ಥೆಯ ವತಿಯಿಂದ ಸಂಘಟಿಸಲಾಗುತ್ತಿದೆ.

ಅಲ್ಲದೆ ವಿವಿಧ ಕಂಪನಿಗಳು ಕಾಲೇಜಿಗೆ ಬಂದು ತಮಗೆ ಅಗತ್ಯವಿರುವ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಉದ್ಯೋಗವನ್ನು ನೀಡುತ್ತಿವೆ. ಈ ಎಲ್ಲಾ ಸಂದರ್ಭಗಳಲ್ಲಿಯೂ ಇಲ್ಲಿನ ಶಿಕ್ಷಕರು ವಿದ್ಯಾರ್ಥಿಗಳಿಗೆ ಅಗತ್ಯವಿರುವ ಸೂಕ್ತ ಮಾರ್ಗದರ್ಶನವನ್ನು ಮಾಡುತ್ತಿದ್ದಾರೆ.


ವಿದ್ಯಾರ್ಥಿ ವೇತನಗಳು:

ವಿದ್ಯಾರ್ಥಿವೇತನದ ಹೆಸರು:
1 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿದ್ಯಾರ್ಥಿವೇತನ
2
ಶುಲ್ಕ ರಿಯಾಯಿ ವಿದ್ಯಾರ್ಥಿವೇತನ ವಿದ್ಯಾರ್ಥಿ ವೇತನದವಿದ್ಯಾರ್ಥಿ ವೇತನದ
3
ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯಕ್ಕೆ ವಿದ್ಯಾರ್ಥಿವೇತನ
4 ಸಂಚಿ ಹೊನ್ನಮ್ಮ ವಿದ್ಯಾರ್ಥಿವೇತನ
5 ಸಿ.ವಿ.ರಾಮನ್ ವಿದ್ಯಾರ್ಥಿವೇತನ
6 ಎಸ್. ಎಚ್. ಇ. ಇನ್‌ಸ್ಪೈರ್ ವಿಜ್ಞಾನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ
7
ಬೀಡಿ ಕಾರ್ಮಿಕರ ನಿಧಿ ವಿದ್ಯಾರ್ಥಿವೇತನ(ಭಾರತ ಸರ್ಕಾರ)
8 ಹಿಂದಿ ವಿದ್ಯಾರ್ಥಿವೇತನ
9 ಕನ್ನಡ/ ಇಂಗ್ಲೀಷ್ ಭಾಷಾ ಪ್ರಮುಖ ವಿದ್ಯಾರ್ಥಿವೇತನ
10 ಮಾಜಿ ಸೈನಿಕರ ವಿದ್ಯಾರ್ಥಿವೇತನ
11 ಕಾರ್ಮಿಕ ಕಲ್ಯಾಣ ನಿಧಿ ವಿದ್ಯಾರ್ಥಿವೇತನ
12 ದತ್ತಿ ವಿದ್ಯಾರ್ಥಿವೇತನ
13 ರಕ್ಷಕ ಶಿಕ್ಷಕ ಸಂಘ ವಿದ್ಯಾರ್ಥಿವೇತನ
14 ವಿವೇಕಾನಂದ ವಿದ್ಯಾವರ್ಧನ ಸಂಘ ವಿದ್ಯಾರ್ಥಿವೇತನ
15
ಕರ್ನಾಟಕ ವಿಜ್ಞಾನ ತಂತ್ರಜ್ಞಾನ ವಿದ್ಯಾರ್ಥಿವೇತನ
16 ಸೀತಾರಾಮ್ ಜಿಂದಾಲ್ ಫೌಂಡೇಶನ್ ವಿದ್ಯಾರ್ಥಿವೇತನ
17 ಜಿ.ಎಸ್.ಬಿ ವಿದ್ಯಾರ್ಥಿವೇತನ
18 ಕಾಫಿ ಬೋರ್ಡ್ ವಿದ್ಯಾರ್ಥಿವೇತನ