ಸ್ನಾತಕೋತ್ತರ ವಿಭಾಗ
ಅರ್ಹತೆಗಳು :
- ಸ್ನಾತಕೋತ್ತರ ಪದವಿಗೆ ಸೇರಬಯಸುವ ವಿದ್ಯಾರ್ಥಿಗಳು ಮೂರು ವರ್ಷದ ಪದವಿಯನ್ನು ಯುಜಿಸಿ ಮಾನ್ಯಮಾಡಿದ ಯಾವುದೇ ವಿಶ್ವವಿದ್ಯಾಲಯದಿಂದ ಪಡೆದಿರಬೇಕು. ಅಲ್ಲದೆ ಮಂಗಳೂರು ವಿಶ್ವವಿದ್ಯಾನಿಲಯವು ಈ ಪದವಿಯನ್ನು ತತ್ಸಮಾನ ಎಂದು ಅಂಗೀಕರಿಸಬೇಕು.
- ಎಂ.ಎಸ್ಸಿ. ಸ್ನಾತಕೋತ್ತರ ಪದವಿಗೆ ಪ್ರವೇಶಾತಿಯನ್ನು ಬಯಸುವ ವಿದ್ಯಾರ್ಥಿಯು ಪದವಿಯಲ್ಲಿ ಅದೇ ವಿಷಯವನ್ನು ಅಭ್ಯಾಸ ಮಾಡಿರಬೇಕು. 45% ಅಂಕಗಳಿಗಿಂತ ಕಡಿಮೆ ಇಲ್ಲದ ಹಾಗೆ (ಭಾಷಾ ವಿಷಯದ ಅಂಕಗಳನ್ನು ಹೊರತು ಪಡಿಸಿ) ಸಂಬಂಧಿಸಿದ ವಿಷಯದಲ್ಲಿ ಅಂಕಗಳನ್ನು ಪಡೆದಿರಬೇಕು.
- ಎಂ.ಕಾಂ ತರಗತಿಗೆ ಸೇರುವ ವಿದ್ಯಾರ್ಥಿಗಳು ಪದವಿಯಲ್ಲಿ ಬಿ.ಕಾಂ. ಅಥವಾ ಬಿಬಿಎ ವಿಷಯಗಳನ್ನು 45% ಅಂಕಗಳಿಗಿಂತ ಕಡಿಮೆ ಇಲ್ಲದ ಹಾಗೆ (ಭಾಷಾ ವಿಷಯದ ಅಂಕಗಳನ್ನು ಹೊರತು ಪಡಿಸಿ) ಅಂಕಗಳನ್ನು ಪಡೆದಿರಬೇಕು.
- ಎಂ.ಎ. ಪತ್ರಿಕೋದ್ಯಮ ತರಗತಿಗೆ ಯಾವುದೇ ಪದವಿಯನ್ನು ಪಡೆದಿರುವ ವಿದ್ಯಾರ್ಥಿಗಳು 45% ಅಂಕಗಳಿಗಿಂತ ಕಡಿಮೆ ಇಲ್ಲದ ಹಾಗೆ (ಭಾಷಾ ವಿಷಯದ ಅಂಕಗಳನ್ನು ಹೊರತು ಪಡಿಸಿ) ಅಂಕಗಳನ್ನು ಪಡೆದಿರಬೇಕು.
- ಆಡಳಿತ ಮಂಡಳಿಯ ಸೀಟು ಹಂಚಿಕೆಗೆ ಸಂಬಂಧಿಸಿ ವಿದ್ಯಾರ್ಥಿಗಳು ಸ್ನಾತಕೋತ್ತರ ವಿಭಾಗದ ವಿಷಯವಾರು ಸಂಯೋಜಕರು ಅಥವಾ ಪ್ರಾಂಶುಪಾಲರನ್ನು ಸಂಪರ್ಕಿಸಬಹುದು.
ದಾಖಲಾತಿಯ ವಿಧಾನ :
ಎಂ.ಎ., ಎಂ.ಎಸ್ಸಿ., ಎಂ.ಕಾಂ., ತರಗತಿಗಳಿಗೆ ಸೇರಬಯಸುವ ವಿದ್ಯಾರ್ಥಿಯು ಕಾಲೇಜಿನಿಂದ ಅರ್ಜಿಯನ್ನು ಪಡೆದುಕೊಂಡು, ಭರ್ತಿಮಾಡಿ ನಿಗದಿತ ಶುಲ್ಕದೊಂದಿಗೆ ನಿಗದಿತ ಸಮಯದೊಳಗೆ ನೊಂದಾಯಿಸಬೇಕು.
ಅರ್ಜಿಯೊಂದಿಗೆ ಪ್ರಮಾಣೀಕರಿಸಿದ ಅಂಕಪಟ್ಟಿಯನ್ನು ಲಗತ್ತಿಸಿರಬೇಕು.
ಸರ್ಕಾರದ / ವಿಶ್ವವಿದ್ಯಾನಿಲಯದ ಸೀಟು ಹಂಚಿಕೆಗೆ ಸಂಬಂಧಿಸಿ ಪ್ರವೇಶಾತಿಯನ್ನು ಪಡೆಯಲು ಅಪೇಕ್ಷಿಸುವ ವಿದ್ಯಾರ್ಥಿಗಳು ಮೂಲ ದಾಖಲೆಗಳನ್ನು ಕಡ್ಡಾಯವಾಗಿ ಶುಲ್ಕ ಪಾವತಿ ರಶೀದಿಯೊಂದಿಗೆ ಸ್ವತಃ ಬಂದು ಪ್ರವೇಶಾತಿಯನ್ನು ಪಡೆಯಬೇಕು. ಇದರ ಜೊತೆಗೆ ಕಡ್ಡಾಯವಾಗಿ ಕಾಲೇಜಿನ ಅರ್ಜಿಯನ್ನು ಪಡೆದು ಭರ್ತಿ ಮಾಡಿ ಕಾಲೇಜಿಗೆ ಸಲ್ಲಿಸಬೇಕು.
ಆಡಳಿತ ಮಂಡಳಿಯ ಸೀಟು ಹಂಚಿಕೆ ಪ್ರಕ್ರಿಯೆಯಲ್ಲಿ ದಾಖಲಾತಿಯನ್ನು ಬಯಸುವ ವಿದ್ಯಾರ್ಥಿಗಳು ತಮ್ಮ ಮೂಲ ದಾಖಲೆಗಳೊಂದಿಗೆ ಬಂದು ದಾಖಲಾತಿಯನ್ನು ಮಾಡಿಕೊಳ್ಳಬಹುದು.
ಪ್ರವೇಶಾತಿಗೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುವುದು. ಸಂದರ್ಶನಕ್ಕೆ ಬರುವಾಗ ವಿದ್ಯಾರ್ಥಿಯು ತಮ್ಮ ಹೆತ್ತವರು ಅಥವಾ ಪೋಷಕರೊಂದಿಗೆ ಬರುವುದು ಅಪೇಕ್ಷಣೀಯ.
ಪ್ರವೇಶಾತಿಯ ಸಂದರ್ಭದಲ್ಲಿ ಈ ಕೆಳಗಿನ ದಾಖಲೆಗಳನ್ನು ವಿದ್ಯಾರ್ಥಿಯು ಸಲ್ಲಿಸಬೇಕಾಗಿರುತ್ತದೆ.
- ಉತ್ತೀರ್ಣಗೊಂಡಿರುವ ವಿಷಯದ ಅಂಕಪಟ್ಟಿ
- ಎಸ್.ಎಸ್.ಎಲ್.ಸಿ. ಅಂಕಪಟ್ಟಿಯ ಛಾಯಾಪ್ರತಿ
- ವರ್ಗಾವಣೆ ಪ್ರಮಾಣ ಪತ್ರ ಮತ್ತು ಗುಣನಡತೆಯ ಪ್ರಮಾಣ ಪತ್ರ
- ಹೊರರಾಜ್ಯದ ವಿದ್ಯಾರ್ಥಿಗಳು ಪ್ರವೇಶಾತಿಯ ಸಂದರ್ಭದಲ್ಲಿ ವಲಸೆ ಪ್ರಮಾಣಪತ್ರ ಮತ್ತು ಅರ್ಹತಾ ಪ್ರಮಾಣ ಪತ್ರವನ್ನು ಸಲ್ಲಿಸುವುದು ಕಡ್ಡಾಯ.
- ವಿದ್ಯಾರ್ಥಿಯು ಮೀಸಲಾತಿಯನ್ನು ಪಡೆಯಬೇಕಿದ್ದಲ್ಲಿ ಅದಕ್ಕೆ ಸಂಬಂಧಿಸಿದ ಇತ್ತೀಚೆಗಿನ ಪ್ರಮಾಣ ಪತ್ರವನ್ನು ಸಲ್ಲಿಸಬೇಕು.
- ಆದಾಯ ಮಿತಿಯನ್ನು ಬಯಸುವ ವಿದ್ಯಾರ್ಥಿಯು ಇತ್ತೀಚೆಗಿನ ಆದಾಯ ಪ್ರಮಾಣ ಪತ್ರವನ್ನು ಸಲ್ಲಿಸಬೇಕು.
- ಪಾಸ್‍ಪೋರ್ಟ್ ಅಳತೆಯ ಇತ್ತೀಚಿನ ಮೂರು ಭಾವಚಿತ್ರಗಳು.