ಪ್ರಾಂಶುಪಾಲರ ನುಡಿ
ಮಾನವನ ಬದುಕನ್ನು ರೂಪಿಸುವಲ್ಲಿ ‘ಶಿಕ್ಷಣ’ಕ್ಕೆ ಯಾರು ನಿರಾಕರಿಸದಂತಹ ಪ್ರಧಾನ ಸ್ಥಾನ ಸಲ್ಲುತ್ತದೆ. ಯಾವುದೇ ಹಂತದ ಶಿಕ್ಷಣವಾದರೂ, ಓರ್ವ ವ್ಯಕ್ತಿಯ ವೈಯಕ್ತಿಕ ವ್ಯಕ್ತಿತ್ವವನ್ನು ಬೆಳೆಸುವುದು ಮತ್ತು ಅವನ ಜೀವನವನ್ನು ಅರ್ಥೈಸಿಕೊಳ್ಳುವುದು ‘ಶಿಕ್ಷಣ’ದ ಬಹುಮುಖ್ಯ ಕರ್ತವ್ಯವಾಗಿದೆ. ಸಮಾಜದಲ್ಲಿ ಯಾವಾಗಲೂ ಮಾದರಿಯಾಗಬಲ್ಲ, ತೂಕದ ವ್ಯಕ್ತಿತ್ವವನ್ನು ಹೊಂದಬಲ್ಲಂಥ ನಾಗರಿಕರನ್ನು ರೂಪಿಸುವ ಬಹುಮುಖಿ ಪ್ರತಿಭೆಯುಳ್ಳ ವಿದ್ಯಾರ್ಥಿಗಳನ್ನು ರೂಪಿಸುವ ಶಿಕ್ಷಣವನ್ನು ನೀಡಲು ವಿವೇಕಾನಂದ ಕಾಲೇಜಿನಲ್ಲಿ ಆದ್ಯತೆ ನೀಡಲಾಗುತ್ತದೆ. ಈ ರೀತಿಯ ಶಿಕ್ಷಣವನ್ನು ಇಲ್ಲಿ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳೆಲ್ಲರಿಗೆ ನೀಡಲಾಗುತ್ತದೆ.
ಈ ಶಿಕ್ಷಣ ಸಂಸ್ಥೆಯಲ್ಲಿ ನಿರಂತರವಾಗಿ ಗುಣಮಟ್ಟದ ಶಿಕ್ಷಣವನ್ನು ನೀಡುವುದರೊಂದಿಗೆ ಕಾಲೇಜಿನ ಸಾಮಥ್ರ್ಯ ಮತ್ತು ಗುಣಮಟ್ಟವನ್ನು ಹೆಚ್ಚಿಸುವುದಕ್ಕೆ ಪ್ರಥಮ ಆದ್ಯತೆ ಸಲ್ಲುತ್ತದೆ. ಯು.ಜಿ.ಸಿ.ಯಿಂದ ಕಾಲೇಜಿಗೆ ಈಗಾಗಲೇ ಸಿ.ಪಿ.ಇ. (ಕಾಲೇಜು ವಿದ್ ಪೊಟೆನ್ಸಿಯಲ್ ಫಾರ್ ಎಕ್ಸ್‍ಲೆನ್ಸ್) ಸ್ಥಾನಮಾನ ಲಭಿಸಿದ್ದು, 2017ರಲ್ಲಿ “ನ್ಯಾಕ್”(ರಾಷ್ಟ್ರೀಯ ಮೌಲಾಂಕನ ಸಂಸ್ಥೆಯು) ಕಾಲೇಜಿಗೆ 3.30 C.G.P.A. ಯೊಂದಿಗೆ ‘ಎ’ ಶ್ರೇಯಾಂಕ ನೀಡಿದೆ. ಅಲ್ಲದೇ, ಭಾರತ ಸರಕಾರದ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯು, ‘ನಿರ್ಫ್’(NIRF) ಮುಖಾಂತರ ನಡೆಸಿದ ಅಖಿಲಾ ಭಾರತ ಮಟ್ಟದ ಪದವಿ ಕಾಲೇಜುಗಳ ರ್ಯಾಂಕಿಂಗ್‍ನಲ್ಲಿ ನಮ್ಮ ಕಾಲೇಜಿಗೆ 197ನೇ ಸ್ಥಾನ ಬಂದಿದ್ದು, ಕರ್ನಾಟಕ ರಾಜ್ಯದಲ್ಲಿ 7ನೇ ಸ್ಥಾನ ಪಡಕೊಂಡಿದೆ. ಅಲ್ಲದೇ, ಈ ವರ್ಷ (2018) ಪುತ್ತೂರು ಮತ್ತು ಸುತ್ತಮುತ್ತಲಿನ 10 ಕಾಲೇಜುಗಳ ‘ನ್ಯಾಕ್’ ಸಂಬಂಧಪಟ್ಟ ಕಾರ್ಯಕ್ಕೆ ವಿವೇಕಾನಂದ ಕಾಲೇಜಿಗೆ “ಮೆಂಟರ್”(Mentor) ಕಾಲೇಜು ಎಂಬ ಮಾನ್ಯತೆ ಮತ್ತು ಗೌರವವನ್ನು ‘ನ್ಯಾಕ್’ ಸಂಸ್ಥೆಯು ನೀಡಿದೆ. ಈ ಎಲ್ಲಾ ಸ್ಥಾನಮಾನಗಳು ಮತ್ತು ಗೌರವಗಳು ಕಾಲೇಜಿನ ಉದ್ಯೋಗಿಗಳ ಮತ್ತು ವಿದ್ಯಾರ್ಥಿಗಳ ಗುಣಮಟ್ಟ, ಸಾಮಥ್ರ್ಯ ಮತ್ತು ಸಾಧನೆಯನ್ನು ಪ್ರತಿಬಿಂಬಿಸುತ್ತವೆ.
ಕಾಲೇಜಿನಲ್ಲಿ ವರ್ಷಪೂರ್ತಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ವಿಚಾರಸಂಕೀರ್ಣಗಳು, ವಿಚಾರಗೋಷ್ಠಿಗಳು, ತರಬೇತಿಗಳು ದೈನಂದಿನ ಚಟುವಟಿಕೆಗಳ ಒಂದು ಭಾಗವಾಗಿದೆ. “ಉದ್ಯೋಗ ಮತ್ತು ತರಬೇತಿ” ಕೋಶದ ಮೂಲಕ ವಿದ್ಯಾರ್ಥಿಗಳಿಗೆ ಅಗತ್ಯವಾಗಿರುವ ವಿವಿಧ ಕೌಶಲ್ಯ ತರಬೇತಿಯನ್ನು ನೀಡಲಾಗುತ್ತಿದ್ದು ಅದರೊಂದಿಗೆ ಕ್ಯಾಂಪಸ್ಸಿನಲ್ಲಿ ಉದ್ಯೋಗಕ್ಕಾಗಿ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆಗೂ ಒತ್ತು ನೀಡಲಾಗುತ್ತಿದೆ. ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ಹಲವು ಕೃತಿಗಳು ಬೆಳಕುಕಂಡಿದ್ದು, ಅವರಲ್ಲಿ ಸಂಶೋಧನಾ ಪ್ರವೃತ್ತಿಯನ್ನು ಬೆಳೆಸುವತ್ತ ಆದ್ಯತೆ ನೀಡಲಾಗುತ್ತಿದೆ. 2018ರ ಸಪ್ಟೆಂಬರ್ 19 ಮತ್ತು 20 ರಂದು ಪುತ್ತೂರಿನಲ್ಲಿ ನಡೆದ 18ನೇ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಕಾಲೇಜಿನ ಪ್ರಾಂಶುಪಾಲರ ಆಯ್ಕೆ, ಕಾಲೇಜಿಗೆ ಸಂದ ಗೌರವವಾಗಿದೆ.
ಕಳೆದ ಮತ್ತು ಈ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳ ಸಾಧನೆ ಅದ್ಭುತ. ಎಲ್ಲಾ ತರಗತಿಗಳಲ್ಲಿ ಉತ್ತಮ ಫಲಿತಾಂಶದೊಂದಿಗೆ 06 ರ್ಯಾಂಕ್‍ಗಳು, ಬೇರೆ ಬೇರೆ ಸ್ಪರ್ಧೆಗಳಲ್ಲಿ ವಿವಿಧ ಬಹುಮಾನಗಳನ್ನು ಮತ್ತು ಗೌರವವನ್ನು ವಿದ್ಯಾರ್ಥಿಗಳು ಗಳಿಸಿದ್ದಾರೆ.ಸಾಂಸ್ಕøತಿಕ ಸ್ಪರ್ಧೆಗಳಲ್ಲಿ, ಕ್ರೀಡಾವಿಭಾಗದಲ್ಲಿ ವಿದ್ಯಾರ್ಥಿಗಳು ಅತ್ಯಂತ ಗಮನಾರ್ಹ ಸಾಧನೆ ಮಾಡಿದ್ದಾರೆ. ಕಾಲೇಜಿನ ವಿದ್ಯಾರ್ಥಿ ಸಂಘದ ಪ್ರತಿನಿಧಿಗಳು ಮತ್ತು ತರಗತಿ ಪ್ರತಿನಿಧಿಗಳು ಹಾಗೂ ವಿವಿಧ ಸಂಘಗಳ ಮೂಲಕ ಕಾರ್ಯನಿರ್ವಹಿಸುತ್ತಿರುವ ವಿದ್ಯಾರ್ಥಿಗಳು ಕಾಲೇಜಿನ ಅಭಿವೃದ್ಧಿಯ ದೃಷ್ಟಿಯಿಂದ ಕಾರ್ಯಗತಗೊಳಿಸುವ ಪ್ರತಿಯೊಂದು ಕಾರ್ಯದಲ್ಲಿ ಕೈ ಜೋಡಿಸುತ್ತಿದ್ದಾರೆ. ಕಾಲೇಜಿನ “ಸಮುದಾಯದತ್ತ” ಕಾರ್ಯಕ್ರಮವನ್ನು ಸಮೀಪದ ಕುಡಿಪ್ಪಾಡಿ ಗ್ರಾಮದಲ್ಲಿ ಮಾಡಲಾಗುತ್ತಿದೆ. ಒಟ್ಟಿನಲ್ಲಿ ಕಾಲೇಜಿನ ಆಡಳಿತ ಮಂಡಳಿ, ಸಿಬ್ಬಂಧಿವರ್ಗ, ವಿದ್ಯಾರ್ಥಿಗಳು, ರಕ್ಷಕ-ಶಿಕ್ಷಕ ಸಂಘ ಮತ್ತು ಹಿರಿಯ ವಿದ್ಯಾರ್ಥಿಗಳ ಸಾಂಘಿಕ ಪ್ರಯತ್ನದಿಂದಾಗಿ ಕಾಲೇಜು ಈ ಸಾಧನೆಯನ್ನು ಮಾಡಲು ಸಾಧ್ಯವಾಗಿದೆ. ಅದು ನನ್ನ ದೃಢ ನಂಬಿಕೆ ಕೂಡ ಆಗಿದೆ. ಪ್ರತಿನಿತ್ಯ ಒಂದೊಂದು ಚಿಕ್ಕ ಹೆಜ್ಜೆಯನ್ನು ಮುಂದೇ ಇಟ್ಟರೆ ಮಾತ್ರ ನಾವು ನಿಗದಿತ ಗುರಿಯನ್ನು ತಲುಪಲು ಸಾಧ್ಯವೆಂಬ, ವಿಚಾರದ ಬಗ್ಗೆ ನಮಗೆ ಎಚ್ಚರವಿದೆ. ಈ ಸಂಬಂಧಪಟ್ಟು ಎಲ್ಲರ ಸಹಕಾರವನ್ನು ಯಾಚಿಸುತ್ತೇನೆ.
ಶುಭಾಶಯಗಳೊಂದಿಗೆ,
ಪ್ರೊ. ಡಾ. ಪೀಟರ್ ವಿಲ್ಸನ್ ಪ್ರಭಾಕರ್
ಎಂಎ, ಪಿಹೆಚ್.ಡಿ, ಡಿ.ಐ.ಪಿ.
ಪ್ರಾಂಶುಪಾಲರು