ನಾವು ಆಯ್ಕೆ ಮಾಡುವ ಸಂಶೋಧನಾ ವಿಷಯಗಳು ಭವಿಷ್ಯದಲ್ಲಿ ನಮಗೆ ಉಪಕಾರವಾಗುವಂತಿರಬೇಕು: ಡಾ. ಸಂದೀಪ್ ಕೆ.ಎಮ್.
ಪುತ್ತೂರು. ಡಿ. 13: ಸಮಾಜ ಬದಲಾದಂತೆ ಸಂಶೋಧನಾ ವಿಷಯಗಳು ಕೂಡ ಬದಲಾಗುತ್ತಾ ಹೋಗುತ್ತದೆ. ವಿದ್ಯಾರ್ಥಿಗಳು ವಿಷಯವನ್ನು ಆಯ್ಕೆ ಮಾಡುವಾಗ, ತಮಗೆ ಹಾಗೂ ಸಮಾಜಕ್ಕೆ ಯಾವ ರೀತಿ ನಮ್ಮ ವಿಷಯಗಳು ಸಹಕಾರಿಯಾಗುತ್ತದೆ ಎಂದು ಆಲೋಚಿಸಬೇಕು. ಸಂಶೋಧನಾ ಕಾರ್ಯಗಳು ಒಂದೇಕ್ಷೇತ್ರಕ್ಕೆ ಸಂಬAಧಿಸಿದ್ದಲ್ಲ. ಎಲ್ಲಾ ಕ್ಷೇತ್ರದಲ್ಲೂ ಮಹತ್ತರವಾದ ಪಾತ್ರವನ್ನು ಸಂಶೋಧನಾ ಕಾರ್ಯಗಳು ವಹಿಸುತ್ತದೆ. ನಾವು ಆಯ್ಕೆ ಮಾಡುವ ಸಂಶೋಧನಾ ವಿಷಯಗಳು ಭವಿಷ್ಯದಲ್ಲಿ ನಮಗೆ ಉಪಕಾರವಾಗುವಂತಿರಬೇಕು. ಪರಿಪೂರ್ಣ ಸಂಶೋಧನಾ ಯೋಜನೆಯನ್ನು ಪ್ರಕಟಿಸಲು ಇರುವ ಹಂತಗಳನ್ನು ವಿದ್ಯಾರ್ಥಿಗಳು ಕಲಿತುಕೊಳ್ಳಬೇಕು ಎಂದು ಮೈಸೂರಿನ ಜೆಎಸ್‌ಎಸ್ ವಿಜ್ಞಾನ ಹಾಗೂ ತಂತ್ರಜ್ಞಾನ ವಿಶ್ವವಿದ್ಯಾಲಯದ ಭೌತಶಾಸ್ತç ವಿಭಾಗದ ಪ್ರಾಧ್ಯಾಪಕ ಡಾ.ಸಂದೀಪ್ ಕೆ.ಎಮ್. ಹೇಳಿದರು.
ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದಲ್ಲಿ ವಿವೇಕಾನಂದ ಸಂಶೋಧನ ಕೇಂದ್ರ, ಸ್ನಾತಕೋತ್ತರ ಅಧ್ಯಯನಕೇಂದ್ರ ಮತ್ತು ಐಕ್ಯೂಎಸಿ ಘಟಕದ ಆಶ್ರಯದಲ್ಲಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗಾಗಿ ‘ಸಂಶೋಧನ ವಿಧಾನ’(ರಿಸರ್ಚ್ ಮೆಥಡಾಲಜಿ) ಎಂಬ ವಿಷಯದ ಕುರಿತು ಆಯೋಜಿಸಿದ ಎರಡು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಸೋಮವಾರ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ.ವಿಷ್ಣು ಗಣಪತಿ ಭಟ್ ಮಾತನಾಡಿ, ಉತ್ತಮ ಮಾರ್ಗದರ್ಶಕರ ಸಹಯೋಗದೊಂದಿಗೆ ಕಾಲೇಜಿನ ಸಂಶೋಧನಾ ಕೇಂದ್ರ ಎದ್ದು ನಿಂತಿದೆ. ವಿದ್ಯಾರ್ಥಿಗಳಿಗೆ ಅಗತ್ಯವಿರುವಂತಹ ವಸ್ತು ವಿಷಯಗಳು ಯಾವುದೇ ತೊಂದರೆಯಿಲ್ಲದೆ ಸಿಗಬೇಕು ಅನ್ನುವ ಉದ್ದೇಶದಿಂದ ಕಾಲೇಜು ಈ ಪ್ರಯತ್ನ ನಡೆಸುತ್ತಿದೆ. ಕಾಲೇಜಿನಲ್ಲಿ ದೊರಕುವ ಎಲ್ಲಾ ಅವಕಾಶಗಳನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ, ಡಾ.ಶ್ರೀಪತಿ ಕಲ್ಲೂರಾಯ ಮಾತನಾಡಿ, ಸಮಾಜದ ಎಲ್ಲ ವಿಷಯಗಳನ್ನು ಕಲಿತು, ಅನುಭವಿಸಿ, ಅದರ ಬಗ್ಗೆ ಆಳವಾಗಿ ನಡೆಸುವ ಅಧ್ಯಯನವೇ ಸಂಶೋಧನೆ. ವಿದ್ಯಾರ್ಥಿಗಳು ಸಂಶೋಧನೆಗಳನ್ನು ಮಾಡುವಾಗ ಹೊಸ ವಿಷಯವನ್ನುಕಲಿಯುತ್ತಾರೆ. ಜೊತೆಗೆ ಭಾಷೆಯನ್ನು ಕೂಡ ಕಲಿಯಬೇಕು. ವಸ್ತು ವಿಷಯಗಳನ್ನು ಓದುವಾಗ ಒತ್ತಾಯಪೂರ್ವಕವಾಗಿ ಓದಬಾರದು. ಅದರ ಅವಶ್ಯಕತೆಗಳನ್ನು ತಿಳಿದು ಅಧ್ಯಯನ ಮಾಡಬೇಕು. ಕಲಿಯಬೇಕು ಅನ್ನುವ ತುಡಿತ ವಿದ್ಯಾರ್ಥಿಗಳಲ್ಲಿರಬೇಕು ಎಂದು ನುಡಿದರು.
ಕಾಲೇಜಿನ ವಿವೇಕಾನಂದ ಸಂಶೋಧನ ಕೇಂದ್ರದ ನಿರ್ದೇಶಕ, ಕನ್ನಡ ವಿಭಾಗದ ಮುಖ್ಯಸ್ಥ ಡಾ. ಹೆಚ್. ಜಿ. ಶ್ರೀಧರ್ ಸ್ವಾಗತಿಸಿ ಪ್ರಸ್ತಾವನೆಗೈದರು. ಐಕ್ಯೂಎಸಿ ಘಟಕದ ಸಂಯೋಜಕ ಪ್ರೊ.ಶಿವಪ್ರಸಾದ್ ಕೆ. ಎಸ್. ವಂದಿಸಿದರು. ಸ್ನಾತಕೋತ್ತರ ರಸಾಯನಶಾಸ್ತç ವಿಭಾಗದ ಉಪನ್ಯಾಸಕಿ ರಚನಾ ಕುಂದರ್ ಕಾರ್ಯಕ್ರಮ ನಿರೂಪಿಸಿದರು.