ಅವಕಾಶಗಳ ಸದ್ವಿನಿಯೋಗ ಮತ್ತು ಧೈರ್ಯ ಸ್ಪರ್ಧಾತ್ಮಕ ಜಗತ್ತಿಗೆ ಅವಶ್ಯಕ: ಎ. ನವ್ಯಶ್ರೀ
ಪುತ್ತೂರು. ಏಪ್ರಿಲ್, 4: ಜೀವನದಲ್ಲಿ ಅನಿರೀಕ್ಷಿತ ತಿರುವುಗಳು ಸಹಜ. ಮುಂದೆ ಸಿಗುವ ತಿರುವುಗಳನ್ನು ಧೈರ್ಯದಿಂದ ಎದುರಿಸಿದಾಗ ಮಾತ್ರ ಸ್ಪರ್ಧಾತ್ಮಕ ಜಗತ್ತಿನಲ್ಲಿ ಜಯ ಗಳಿಸಲು ಸಾಧ್ಯ. ಸಮಾಜದಲ್ಲಿ ಮುಖ್ಯ ಭೂಮಿಕೆಗೆ ಬಂದಾಗ ಒಬ್ಬಂಟಿಯಾಗಿ ಹೋರಾಡಲು ವಿದ್ಯಾರ್ಥಿಗಳು ಸಜ್ಜಾಗಬೇಕು. ಕಾಲೇಜು ಹಂತದಲ್ಲೇ ಸಿಗುವ ಅವಕಾಶಗಳನ್ನು ಸದ್ವಿನಿಯೋಗಿಸುತ್ತಾ, ವ್ಯಕ್ತಿತ್ವ ವಿಕಸನ ಕೌಶಲ್ಯಗಳನ್ನು ಮೈಗೂಡಿಸಿಕೊಂಡು ಜಗತ್ತನ್ನು ಎದುರಿಸಬೇಕು ಎಂದು ಸುಳ್ಯದ ಸೌತ್ ಕೆನರಾ ಕೊಕೊನಟ್ ಫಾರ್ಮರ್ಸ್ ಪೆÇ್ರಡ್ಯೂಸರ್ಸ್ ಕೊ.ಲಿಮಿಟೆಡ್ ನ ಮೇಲ್ವಿಚಾರಕಿ ಎ. ನವ್ಯಶ್ರೀ ಹೇಳಿದರು.
ಇಲ್ಲಿನ ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ಶಾಸ್ತ್ರ ವಿಭಾಗ ಮತ್ತು ಐಕ್ಯೂಎಸಿ ಘಟಕದ ಜಂಟಿ ಆಶ್ರಯದಲ್ಲಿ ಆಯೋಜಿಸಲಾದ ‘ಪಯಣ ‘ ವಿಶೇಷ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಸೋಮವಾರ ಅವರು ಮಾತನಾಡಿದರು.
ಪ್ರತಿಭೆಗಳು ಬಾಲ್ಯದಿಂದಲೇ ಜೀವನದಲ್ಲಿ ಅಡಕಗೊಂಡಿರುತ್ತದೆ. ಹೀಗಾಗಿ ಎಲ್ಲಾ ರೀತಿಯ ಸವಾಲುಗಳಿಗೆ ತೆರೆದುಕೊಳ್ಳಲು ವಿಧ್ಯಾರ್ಥಿಗಳು ತಯಾರಿ ನಡೆಸಿರಬೇಕು. ವಿದ್ಯಾಭ್ಯಾಸ ಪೂರ್ಣಗೊಳಿಸಿ ವೃತ್ತಿ ಜೀವನಕ್ಕೆ ಕಾಲಿಡುವ ಹಂತದಲ್ಲಿ ಸಂವಹನವು ಪ್ರಮುಖ ಪಾತ್ರ ವಹಿಸುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಸಂವಹನ ಕೌಶಲ್ಯವು ಅತ್ಯಗತ್ಯ ಎಂದು ಅಭಿಪ್ರಾಯಪಟ್ಟರು.
ಸ್ನಾತಕೋತ್ತರ ವಾಣಿಜ್ಯ ಶಾಸ್ತ್ರ ವಿಭಾಗದ ಸಂಯೋಜಕಿ ಡಾ. ವಿಜಯ ಸರಸ್ವತಿ ಮಾತನಾಡಿ, ನಾವು ಗುರಿಯನ್ನು ತಲುಪುವ ಪ್ರತಿ ಹೆಜ್ಜೆಯಲ್ಲೂ ಸಾಕಷ್ಟು ಜನರು ನಮ್ಮ ಜೊತೆಯಾಗುತ್ತಾರೆ. ಈ ಪಯಣಿಗರ ಪಾತ್ರ ಜೀವನದಲ್ಲಿ ಮಹತ್ತರವಾದದ್ದು. ಇನ್ನು ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳೊಂದಿಗೆ ಉತ್ತಮ ಭಾಂಧವ್ಯ ಬೆಸೆಯುವಲ್ಲಿ ‘ಪಯಣ’ ವೇದಿಕೆ ಸಾಕ್ಷಿಯಾಗಿದೆ. ಹಿರಿಯ ವಿದ್ಯಾರ್ಥಿಗಳ ಅನುಭವದ ಮಾತುಗಳು ಪ್ರಸ್ತುತ ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ಸಹಕಾರಿಯಾಗುತ್ತದೆ ಎಂದರು.
ವೇದಿಕೆಯಲ್ಲಿ ಸ್ನಾತಕೋತ್ತರ ವಾಣಿಜ್ಯ ಶಾಸ್ತ್ರ ವಿಭಾಗದ ಉಪನ್ಯಾಸಕಿ ಲಕ್ಷ್ಮೀ ಭಟ್, ಉಪನ್ಯಾಸಕ ರಾಘವೆಂದ್ರ ಉಪಸ್ಥಿತರಿದ್ದರು. ಎಂಕಾಂ ವಿದ್ಯಾರ್ಥಿನಿ ಮನಿμÁ ಶೆಟ್ಟಿ ಸ್ವಾಗತಿಸಿ, ಸ್ವಾತಿ ಎನ್.ವಿ. ವಂದಿಸಿದರು. ವಿದ್ಯಾರ್ಥಿನಿ ರೂಪ ಪ್ರಾರ್ಥಿಸಿ, ಅನುಶ್ರೀ ಕಾರ್ಯಕ್ರಮ ನಿರೂಪಿಸಿದರು.