ಕೋಪ ಸಂಬಂಧವನ್ನು ಬೆಸೆಯುವ ಸಾಧನವೂ ಆಗಿದೆ: ಅತುಲ್ ಶೆಣೈ
ಪುತ್ತೂರು: ಕೋಪ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಇರುವ ಭಾವನೆ. ಆದರೆ ಅದನ್ನು ವ್ಯಕ್ತಪಡಿಸುವ ವಿಧಾನ ಮಾತ್ರ ಬೇರೆ ಬೇರೆಯಾಗಿರುತ್ತದೆ. ನಾವು ಯಾರ ಮೇಲೆ ಕೋಪವನ್ನು ಅತಿಯಾಗಿ ತೋರಿಸುತ್ತೇಯೋ ಅವರ ಮೇಲೆ ನಮಗೆ ಅತೀವ ಪ್ರೀತಿ ಇರುತ್ತದೆ ಎಂದು ವಿವೇಕಾನಂದ ಕಾಲೇಜಿನ ವ್ಯವಹಾರ ನಿರ್ವಹಣಾ ವಿಭಾಗದ ಉಪನ್ಯಾಸಕ ಅತುಲ್ ಶೆಣೈ ಮಾತನಾಡಿದರು.
ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ತೃತೀಯ ವರ್ಷದ ವಿದ್ಯಾರ್ಥಿಗಳು ಇತ್ತೀಚೆಗೆ ಆಯೋಜಿಸಿದ್ದ ಮಣಿಕರ್ಣಿಕ ಮಾತುಗಾರರ ವೇದಿಕೆಯ ಕಾರ್ಯಕ್ರಮದಲ್ಲಿ ಕೋಪ ಬಂದ್ರೆ ನೀವೇನು ಮಾಡುತ್ತೀರಾ? ಎಂಬ ವಿಷಯದ ಕುರಿತಾಗಿ ಮಾತನಾಡಿದರು.
ಕೆಲವೊಂದು ಬಾರಿ ಕೋಪದ ಕೈಗೆ ನಮ್ಮ ಬುದ್ಧಿ ನೀಡಿದಾಗ ಅವಘಡಗಳು ಸಂಭವಿಸುತ್ತವೆ. ಈ ಕಾರಣಕ್ಕಾಗಿ ಕೋಪವನ್ನು ಹೊರಹಾಕುವ ಮೊದಲು ಯೋಚಿಸುವುದು ಅತ್ಯಗತ್ಯ. ಕೋಪದಿಂದಾಗಿ ಹಲವಾರು ಕೆಟ್ಟ ವಿಚಾರಗಳು ಸಂಭವಿಸುತ್ತದೆ ಅಂತೆಯೇ ಕೋಪದಿಂದ ಜೀವನದಲ್ಲಿ ಅಭಿವೃದ್ಧಿ ಕಾಣಲೂ ಸಾಧ್ಯ. ಕೋಪ ಮಾನವೀಯ ಸಂಬಂಧವನ್ನು ಹಾಳುಗೆಡವುತ್ತದೆ ಹಾಗೆಯೇ ಸಂಬಂಧನ್ನು ಅನುಬಂಧವಾಗಿ ಬೆಸೆಯುವ ಕೊಂಡಿಯಾಗಿಯೂ ಕಾರ್‍ಯ ನಿರ್ವಹಿಸುತ್ತದೆ ಎಂದರು.
ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ಮಾತನಾಡಿ ನಮ್ಮ ಕೋಪವನ್ನು ವಸ್ತುಗಳ ಮೇಲೆ ತೋರಿಸುವಿಕೆ ಸೂಚ್ಯವಲ್ಲ. ಕೆಲಮೊಂದು ಸಂದರ್ಭಗಳಲ್ಲಿ ಕೋಪಕ್ಕೆ ಮೂಖ ಪ್ರಾಣಿಗಳು ಬಲಿಯಾಗಿ ಹಿಂಸೆ ಅನುಭಸುವಂತಾಗುತ್ತದೆ. ನಮ್ಮಲ್ಲಿ ಕೋಪವಿರಬೇಕು, ಆದರೆ ಅದು ಅತಿರೇಕಕ್ಕೆ ಹೋಗದಂತೆ ಕಾಳಜಿಯನ್ನು ವಹಿಸುವುದು ಉತ್ತಮ ಎಂದರು.
ವಿದ್ಯಾರ್ಥಿಗಳಾದ ವೈಷ್ಣವಿ ಯಂ.ಯಸ್, ಸುಮಯ್ಯ, ಪ್ರಸಾದ್ ಆಚಾರ್‍ಯ ಕೆ, ಸೃಜನಿ ರೈ, ಸಂಧ್ಯಾ ಎಂ, ಮೇಘಲಕ್ಷ್ಮೀ, ಸಾಗರ್ ಹೆಗ್ಡೆ, ಅನುಶ್ರೀ ಸಿ.ಸಿ, ರಮ್ಯ, ಪ್ರೆಸಿಲ್ಲಾ, ಆಶಿಕ್, ಸೌಮ್ಯ ಪಿ.ಬಿ. ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.
ವೇದಿಕೆಯಲ್ಲಿ ಕಾಲೇಜಿನ ಪತ್ರಿಕೋದ್ಯಮ ಉಪನ್ಯಾಸಕಿ ಭವ್ಯ ಆರ್. ಪಿ. ನಿಡ್ಪ್‌ಳ್ಳಿ ಉಪಸಿತ್ಥಿತರಿದ್ದರು. ಮಣಿಕರ್ಣಿಕ ಮಾತುಗಾರರ ವೇದಿಕೆಯ ಕಾರ್‍ಯದರ್ಶಿ ಜಯಶ್ರೀ ವಂದಿಸಿದರು. ಪ್ರಣವ ಕೆ.ವಿ ಸ್ವಾಗತಿಸಿ, ಕಾರ್‍ಯಕ್ರಮ ನಿರೂಪಿಸಿದರು.