ಜೀವಂತಿಕೆಯನ್ನು ಕಾಪಾಡಲು ನೆನಪುಗಳು ಅವಶ್ಯಕ : ಹರಿಪ್ರಸಾದ್
ಪುತ್ತೂರು : ಬದುಕಿನ ಜೀವಂತಿಕೆಗೆ ನೆನಪು ಮುಖ್ಯ. ಸಂತಸದಿಂದ ಜೀವಿಸಲು ನೆನಪುಗಳ ಸಾಂಗತ್ಯ ಅನಿವಾರ್ಯ. ನೆನಪುಗಳೇ ಇಲ್ಲವಾದರೆ ಜೀವನದ ಆಗುಹೋಗುಗಳನ್ನು ಅನುಭವಿಸುವುದು ಕಷ್ಟ ಸಾಧ್ಯ. ವ್ಯಕ್ತಿಗೆ ನೆನಪುಗಳು ತುಂಬಾ ಅವಶ್ಯಕ ಎಂದು ವಿವೇಕಾನಂದ ಮಹಾವಿದ್ಯಾಲಯದ ಸ್ನಾತಕ್ಕೋತ್ತರ ವಾಣಿಜ್ಯ ವಿಭಾಗದ ಉಪನ್ಯಾಸಕ ಹರಿಪ್ರಸಾದ್ ಹೇಳಿದರು.
ಅವರು ಕಾಲೇಜಿನ ತೃತೀಯ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ಆಯೋಜಿಸುತ್ತಿರುವ ಮಣಿಕರ್ಣಿಕ ಮಾತುಗಾರರ ವೇದಿಕೆಯಲ್ಲಿ ಮರೆಯಲಾಗದ ನೆನಪುಗಳು ಎಂಬ ವಿಷಯದ ಕುರಿತು ಗುರುವಾರ ಮಾತನಾಡಿದರು.
ವಿದ್ಯಾರ್ಥಿಗಳಾದ ಸೀಮಾ.ಪಿ.ಜೆ, ರಂಗನಾಥ್ ಪ್ರಸಾದ್, ಹಿತಾಶ್ರೀ, ಶ್ರೇಯಸ್.ಕೆ, ವರ್ಷಿತಾ, ಪ್ರಥಮಾ, ಸೌಂದರ್ಯ, ಸಂಕೇತ್ ಕುಮಾರ್, ವರ್ಷನ್ ಕುಮಾರ್, ಶ್ವೇತಾಂಜಲಿ, ಸಾಯೀಶ್, ಶಿವಶಂಕರ ಮಯ್ಯ ತಮ್ಮ ಅನುಭವ ಅಂಚಿಕೊಂಡರು.
ವೇದಿಕೆಯಲ್ಲಿ ಮಣಿಕರ್ಣಿಕ ಮಾತುಗಾರರ ವೇದಿಕೆಯ ಕಾರ್ಯದರ್ಶಿ ವಿನುತಾ.ಎಂ.ಎಸ್ ಉಪಸ್ಥಿತರಿದ್ದರು. ಪತ್ರಿಕೋದ್ಯಮ ವಿಭಾಗ ಉಪನ್ಯಾಸಕಿ ಭವ್ಯ ಪಿ. ಆರ್ ನಿಡ್ಪಳ್ಳಿ ಸ್ವಾಗತಿಸಿದರು. ವಿದ್ಯಾರ್ಥಿ ಆಝಾದ್ ಕಂಡಿಗ ವಂದಿಸಿದರು. ವಿದ್ಯಾರ್ಥಿನಿ ನಿಶ್ಮಾ ಕಾರ್ಯಕ್ರಮ ನಿರ್ವಹಿಸಿದರು.