ಡೈಲಾಗ್ ಜೀವನದ ಅವಿಭಾಜ್ಯ ಅಂಗ : ಡಾ. ಅರುಣ್ ಪ್ರಕಾಶ್
ಪುತ್ತೂರು : ವಿದ್ಯಾರ್ಥಿಗಳು ಮಾತನಾಡಲು ಉತ್ಸುಕರಾಗಿರಬೇಕು. ಉತ್ತಮ ಮಾತುಗಾರನಾದವನು ಎಲ್ಲಿ ಬೇಕಾದರೂ ಸಲ್ಲಬಲ್ಲ. ಆಕರ್ಷಕವಾದ ಮಾತು ಇಂಗ್ಲಿಷ್ನಲ್ಲಿ ’ಡೈಲಾಗ್’ ಎಂದು ವಿಶೇಷಾರ್ಥವನ್ನು ಪಡೆದು ಎಲ್ಲರನ್ನೂ ಆಕರ್ಷಿಸುತ್ತದೆ. ಅಲ್ಲದೆ ಭಾವನೆಗಳನ್ನು ವ್ಯಕ್ತಪಡಿಸಲು ಡೈಲಾಗ್ ಸಹಾಯಕ. ಅನಿಸಿಕೆಯನ್ನು ಸುಲಲಿತವಾಗಿ ಹೇಳಲು ಇದರಿಂದ ಸಾಧ್ಯ ಎಂದು ವಿವೇಕಾನಂದ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗ ಉಪನ್ಯಾಸಕ ಡಾ.ಅರುಣ್ ಪ್ರಕಾಶ್ ಹೇಳಿದರು.
ಅವರು ಕಾಲೇಜಿನ ತೃತೀಯ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ಆಯೋಜಿಸುತ್ತಿರುವ ಮಣಿಕರ್ಣಿಕ ಮಾತುಗಾರರ ವೇದಿಕೆಯಲ್ಲಿ ಡೈಲಾಗ್ ಕಾರುಬಾರು ಎಂಬ ವಿಷಯದ ಕುರಿತು ಗುರುವಾರ ಮಾತನಾಡಿದರು.
ಡೈಲಾಗ್ಗೆ ಅದರದ್ದೇ ಆದ ಇತಿಹಾಸವಿದೆ. ಡೈಲಾಗ್ಗಳನ್ನು ಕೇಳಿ ಆನಂದಿಸಬೇಕು. ಇವುಗಳಿಗೆ ಮನಸ್ಸನ್ನು ಸೆಳೆಯುವ ಶಕ್ತಿಯಿದೆ. ಮಾತ್ರವಲ್ಲದೇ ಡೈಲಾಗ್ಗಳು ವಿಸ್ತಾರವಾದ ಅರ್ಥಗಳನ್ನು ಹೊಂದಿರುತ್ತವೆ. ನಾಟಕಗಳಿಗೆ ಡೈಲಾಗ್ಗಳೇ ಜೀವಾಳ. ನಾಟಕವು ಪ್ರೇಕ್ಷಕರನ್ನು ಸೆಳೆಯುವಲ್ಲಿ ಡೈಲಾಗ್ ಮಹತ್ವದ ಪಾತ್ರವನ್ನು ವಹಿಸುತ್ತದೆ. ಡೈಲಾಗ್ನ ರಚನೆ ಒಂದು ಕಲೆ.ಎಂದು ಹೇಳಿದರು.
ವಿದ್ಯಾರ್ಥಿಗಳಾದ, ಅಕ್ಷಯ್ಕೃಷ್ಣ, ಅಕ್ಷಯ್ಕುಮಾರ್, ಭಾರವಿ, ರಂಗನಾಥ್ ಪ್ರಸಾದ್, ದಿನೇಶ್ಸಿ.ಎಚ್, ಹಿತಾಶ್ರೀ, ಸೀಮಾ, ಶಿವಶಂಕರ್, ಶಿವಪ್ರಸಾದ್, ಸಂಕೇತ್ಕುಮಾರ್, ಸಾಯೀಶ್, ಶ್ವೇತಾಂಜನಿ, ಕಾವ್ಯಾ, ಕೃಪಾ,ಆಶಿಕಾ, ರಕ್ಷಿತ್ ತಮ್ಮ ಅನುಭವ ಅಂಚಿಕೊಂಡರು.
ವೇದಿಕೆಯಲ್ಲಿ ಮಣಿಕರ್ಣಿಕ ಮಾತುಗಾರರ ವೇದಿಕೆಯ ಕಾರ್ಯದರ್ಶಿ ವಿನುತಾ.ಎಂ.ಎಸ್ ಉಪಸ್ಥಿತರಿದ್ದರು. ಪತ್ರಿಕೋದ್ಯಮ ವಿಭಾಗ ಉಪನ್ಯಾಸಕಿ ಭವ್ಯ ಪಿ. ಆರ್ ನಿಡ್ಪಳ್ಳಿ ಸ್ವಾಗತಿಸಿದರು. ವಿದ್ಯಾರ್ಥಿನಿ ಸುಮಿತ್ರಾ ವಂದಿಸಿದರು. ವಿದ್ಯಾರ್ಥಿನಿ ರಮ್ಯಾ. ಸಿ ಕಾರ್ಯಕ್ರಮ ನಿರ್ವಹಿಸಿದರು.