VIVEKANANDA COLLEGE of Arts, Science and Commerce (Autonomous) Puttur

Re - accredited at 'A' Grade by the NAAC with 3.30 CGPA

Recognised as the College with Potential for Excellence (CPE) by the UGC

| +91 8251 230 455 | Kannada

ಪುಸ್ತಕ ಅಧ್ಯಯನದಿಂದ ಜ್ಞಾನ ವೃದ್ಧಿಯಾದರೆ ಪ್ರಾಯೋಗಿಕ ಅಧ್ಯಯನದಿಂದ ಅನುಭವ ವೃದ್ಧಿಯಾಗುವುದು: ಎ.ಪಿ. ಸದಾಶಿವ ಮರಿಕೆ

ಪುತ್ತೂರು, ಡಿ.೨೩: ಎಷ್ಟೇ ವಿದ್ಯೆ ಕಲಿತರು ಕೃಷಿ ವಿದ್ಯೆ ಮೇಲು. ಕೃಷಿ ಮಾಡದಿದ್ದರೆ ಜೀವನಚಕ್ರ ನಡೆಸಲು ಬಹಳ ಕಷ್ಟ ಜ್ಞಾನದ ಮಾತುಗಳನ್ನು ಮರೆಯಬಹುದು. ಆದರೆ ಅನುಭವದ ಪಾಠಗಳನ್ನು ಮರೆಯಲಾಗದು. ಕಲಿಯುವುದೆ ಜೀವನ. ಪುಸ್ತಕ ಅಧ್ಯಯನದಿಂದ ಜ್ಞಾನ ವೃದ್ಧಿಯಾದರೆ, ಪ್ರಾಯೋಗಿಕ ಅಧ್ಯಯನದಿಂದ ಅನುಭವ ವೃದ್ಧಿಯಾಗುತ್ತದೆ. ಅಂತಹ ಅನುಭವ ಜೀವನಕ್ಕೆ ಬಹಳ ಮುಖ್ಯ ಎಂದು ಸಾವಯವ ಕೃಷಿಕ ಎ.ಪಿ. ಸದಾಶಿವ ಹೇಳಿದರು .
ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಪ್ರಾಣಿಶಾಸ್ತç ವಿಭಾಗ ಮತ್ತು ಸಸ್ಯ ಶಾಸ್ತç ವಿಭಾಗ ಹಾಗೂ ಐಕ್ಯೂಎಸಿ ಘಟಕ ಇದರ ಸಹಯೋಗದಲ್ಲಿ ನೇಚರ್ ಕ್ಲಬ್, ರಾಷ್ಟಿçÃಯ ‘ರೈತ ದಿನ’ದ ಅಂಗವಾಗಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿ ‘ಸಾವಯವ ಕೃಷಿ’ ಎಂಬ ವಿಷಯದ ಕುರಿತು ಗುರುವಾರ ಅವರು ಮಾತನಾಡಿದರು.

ಹಿಂದಿನ ಕಾಲದಲ್ಲಿ ಗದ್ದೆಯಲ್ಲಿ ಕೃಷಿ ಮಾಡುವಾಗ ಅದೆಷ್ಟೋ ಪ್ರಾಣಿಗಳು, ಪಕ್ಷಿಗಳು, ಜಲಚರಗಳು ಕಾಣಸಿಗುತ್ತಿತ್ತು. ಅವುಗಳಿಗೆ ಆಸರೆಯಾಗಿತ್ತು. ಆದರೆ ಈಗಿನ ಕಾಲದಲ್ಲಿ ರಾಸಾಯನಿಕ ಔಷಧಿಗಳು, ಕ್ರಿಮಿನಾಶಕಗಳನ್ನು ಕೃಷಿಯಲ್ಲಿ ಬಳಸುವುದರಿಂದ ಅದೆಷ್ಟೋ ಜೀವಿಗಳು ನಾಶವಾಗುವುದರ ಜೊತೆಗೆ, ಸಸ್ಯಗಳು ನಾಶವಾಗುತ್ತಿವೆ. ಬಳಕೆಗೆ ಬಾರದ ಸಸ್ಯ ಯಾವುದು ಇಲ್ಲ. ಸಸ್ಯಗಳು ಆರೋಗ್ಯ ಕಾಪಾಡಲು ಮತ್ತು ಭೂಮಿಯಲ್ಲಿನ ಫಲವತ್ತತೆಯನ್ನು ಕಾಪಾಡಲು ತುಂಬಾ ಅವಶ್ಯಕ. ಸಸ್ಯಗಳ ನಾಶದಿಂದ ಭೂಮಿಯಲ್ಲಿ ಉಷ್ಣಾಂಶ ಹೆಚ್ಚಾಗಿ ಮಳೆಯು ಕಡಿಮೆಯಾಗುತ್ತಿದೆ. ಮನುಷ್ಯ ಸೃಷ್ಟಿಯ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾನೆ. ಕೃಷಿಯನ್ನು ಬಿಟ್ಟರೆ ಪ್ರಕೃತಿಗೆ ಮೋಸ, ಪ್ರಕೃತಿಯಿಂದಲೇ ನಮ್ಮ ಉಳಿವು ಎಂದು ತಮ್ಮ ಕೃಷಿ ಜೀವನದ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳುವುದರ ಜೊತೆಗೆ, ವಿದ್ಯಾರ್ಥಿಗಳಿಗೆ ಹಲವು ವಿಧದ ಔಷಧಿ ಗಿಡಗಳನ್ನು ಪ್ರದರ್ಶಿಸಿ ಅವುಗಳ ಉಪಯೋಗಗಳನ್ನು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್ ಮಾತನಾಡಿ, ಈಗಿನ ಯುವಜನಾಂಗಕ್ಕೆ ಕೃಷಿಯ ಬಗ್ಗೆ ಜ್ಞಾನವೂ ಇಲ್ಲ ಆಸಕ್ತಿಯೂ ಇಲ್ಲ, ಕೃಷಿಯ ಪ್ರಯೋಜನವನ್ನು ತಿಳಿದು ಅದರಿಂದ ಪ್ರೇರೇಪಿತರಾಗಿ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಅದನ್ನು ಬೆಳೆಸಬೇಕು. ಕೃಷಿಯಲ್ಲಿ ವಾತಾವರಣದ ಏರುಪೇರಿನಂದಾಗಿ ಹಲವು ಸಮಸ್ಯೆಗಳಿದ್ದರೂ, ಕೃಷಿ ಮಾಡುವಾಗ ಸಿಗುವ ಸಂತೋಷ ಬೇರೆಯೇ ಎಂದು ತಮ್ಮ ಅಭಿಪ್ರಾಯಪಟ್ಟರು.


ಕಾರ್ಯಕ್ರಮದಲ್ಲಿ ಪ್ರಾಣಿಶಾಸ್ತç ವಿಭಾಗದ ಮುಖ್ಯಸ್ಥ ಡಾ. ಈಶ್ವರ ಭಟ್ ಮತ್ತು ಉಪನ್ಯಾಸಕ ಸುಹಾಸ್ ಕೃಷ್ಣ ಮತ್ತು ಸಸ್ಯಶಾಸ್ತç ವಿಭಾಗದ ಮುಖ್ಯಸ್ಥ ಶ್ರೀಕೃಷ್ಣ ಗಣರಾಜ ಭಟ್ ಹಾಗೂ ಉಪನ್ಯಾಸಕಿ ಸ್ಮಿತಾ ಪಿ.ಜಿ. ಉಪಸ್ಥಿತರಿದ್ದರು.

ತೃತೀಯ ಬಿ.ಎಸ್.ಸಿ. ವಿದ್ಯಾರ್ಥಿಗಳಾದ ಸಿಂಚನ ವಿ.ಬಿ.ಸ್ವಾಗತಿಸಿ, ಪ್ರತಿಕ್ಷ ಕೆ.ಎಲ್. ವಂದಿಸಿದರು. ಅಪೇಕ್ಷ ಕಾರ್ಯಕ್ರಮವನ್ನು ನಿರೂಪಿಸಿದರು.