ಭಾರತದಲ್ಲಿ ವ್ಯಕ್ತಿ ಸ್ವಾತಂತ್ರ್ಯಕ್ಕೆ ವಿಶೇಷ ಮನ್ನಣೆ : ಜಯರಾಮ ಭಟ್
ಪುತ್ತೂರು: ಭಾರತ ದೇಶದಲ್ಲಿ ವ್ಯಕ್ತಿ ಸ್ವಾತಂತ್ರ್ಯಕ್ಕೆ ವಿಶೇಷ ಮನ್ನಣೆ ನೀಡಲಾಗುತ್ತಿದೆ. ಧಾರ್ಮಿಕ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯ, ಆಸ್ತಿ ಹಕ್ಕು, ಶೋಷಣೆ ವಿರುದ್ಧದ ಹಕ್ಕು ಹೀಗೆ ನಾನಾ ಹಕ್ಕುಗಳೂ ದಕ್ಕುತ್ತಿವೆ. ಇಂತಹ ವಿಶಿಷ್ಟ ಆಷ್ಟ್ರದ ಪ್ರಜೆಗಳಾಗಿರುವುದು ನಮ್ಮ ಹೆಮ್ಮೆ. ಸ್ವಾತಮತ್ರ್ಯಾ ನಂತರದಲ್ಲಿ ರಚಿತವಾದ ಸಂವಿಧಾನ ನಮಗೆ ವಿಶೇಷವಾದ ಸ್ಥಾನವನ್ನು ಕಲ್ಪಿಸಿದೆ ಎಂದು ವಿವೇಕಾನಂದ ಕಾಲೇಜು ಆಡಳಿತ ಮಂಡಳಿ ಸಂಚಾಲಕ ಎಂ.ಟಿ.ಜಯರಾಮ ಭಟ್ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ಆಯೋಜಿಸಲಾದ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಭಾಗವಹಿಸಿ ದ್ವಜಾರೋಹಣಗೈದು ಶುಕ್ರವಾರ ಮಾತನಾಡಿದರು.
ಸಂವಿಧಾನದ ಆಶಯಕ್ಕೆ ಬದ್ಧರಾಗಿ ಜೀವನ ನಡೆಸಬೇಕಿರುವುದು ಈ ದೇಶದ ಜನರ ಆದ್ಯ ಕರ್ತವ್ಯ. ದೇಶದ ಭದ್ರತೆ, ಸಾರ್ವಭೌಮತೆಗೆ ಧಕ್ಕೆ ತರುವಂತಹ ಕಾಯ್ದಲ್ಲಿ ಯಾರೂ ತೊಡಗಬಾರದು. ಅದರಲ್ಲೂ ವಿದ್ಯಾರ್ಥಿಗಳು ತಮ್ಮ ಜವಾಬ್ಧಾರಿಯನ್ನರಿತು ಕಾರ್ಯತತ್ಪರರಾಗಬೇಕು. ಆಗ ಸುಂದರ ಭಾರತದ ನಿರ್ಮಾಣವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಸ್ವಾಗತಿಸಿದರು. ವಿದ್ಯಾರ್ಥಿ ಕ್ಷೇಮಪಾಲಕರಾದ ಪ್ರೊ.ಕೃಷ್ಣ ಕಾರಂತ್, ಕ್ಯಾ.ಡಿ.ಮಹೇಶ್ ರೈ, ಹರಿಣಿ ಪುತ್ತೂರಾಯ, ರೇಖಾ, ಮೋತಿ ಬಾ, ಐಕ್ಯುಎಸಿ ಸಂಯೋಜಕ ಡಾ.ಶ್ರೀಧರ ಎಚ್.ಜಿ, ಕಾಲೇಜಿನ ಉಪನ್ಯಾಸಕ, ಉಪನ್ಯಾಸಕೇತರ ವೃಂದ, ಎನ್.ಸಿ.ಸಿ, ಎನ್‌ಎಸ್‌ಎಸ್, ರೋವರ್‍ಸ್ ರೇಂಜರ್‍ಸ್ ಹಾಗೂ ರೆಡ್ ಕ್ರಾಸ್ ಸದಸ್ಯರುಗಳು, ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.