ವಿದ್ಯಾರ್ಥಿಗಳು ಗುಣಮಟ್ಟದ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು – ಆದಿತ್ಯ ರಾವ್
ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಮತ್ತು ವಾಣಿಜ್ಯಶಾಸ್ತç ವಿಭಾಗದಿಂದ ಐಆರ್‌ಡಿಎ ಎಕ್ಸಾಮ್ ಆಂಡ್ ಆಪರ್ಚುನಿಟಿಸ್ ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಾಗಾರ
ಪುತ್ತೂರು: ವಿದ್ಯಾರ್ಥಿಗಳು ಸಂದರ್ಶನಗಳನ್ನು ಎದುರಿಸಲು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸದಾ ಸನ್ನದ್ಧರಾಗಿರಬೇಕು. ಕಲಿಕೆಯ ಜೊತೆಗೆ ಪೂರಕ ಮಾಹಿತಿಗಳನ್ನು ಪಡೆದುಕೊಂಡು ಗುಣಮಟ್ಟದ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಪುತ್ತೂರಿನ ಎಸ್ ಬಿ ಐ ಲೈಫ್‌ನ ಅಧಿಕಾರಿ ಆದಿತ್ಯ ರಾವ್ ಹೇಳಿದರು.
ಇವರು ಇಲ್ಲಿನ ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಮತ್ತು ವಾಣಿಜ್ಯಶಾಸ್ತ್ರ ವಿಭಾಗ ಹಾಗೂ ಐಕ್ಯೂಎಸಿ ಘಟಕದÀ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಐಆರ್‌ಡಿಎ ಎಕ್ಸಾಮ್ ಆಂಡ್ ಆಪರ್ಚುನಿಟಿಸ್ ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಾಗಾರ ಕಾಲೇಜಿನ ಪಿ ಜಿ ಸೆಮಿನಾರ್ ಹಾಲ್ ನಲ್ಲಿ ನಡೆಯಿತು.
ವಿದ್ಯಾರ್ಥಿಗಳು ಶಿಕ್ಷಣದ ಪ್ರಾಯೋಗಿಕ ಆಯಾಮಗಳನ್ನು ಪರಿಪೂರ್ಣವಾಗಿ ಅರ್ಥೈಸಿಕೊಂಡು, ಅಳವಡಿಸಿಕೊಳ್ಳಬೇಕು. ಉದ್ಯೋಗಕ್ಕೆ ನಿಯೋಜನೆಗೊಂಡ ಕೂಡಲೇ ಜೀವನ ಭದ್ರತೆಯ ಬಗ್ಗೆ ಯೋಜನೆ ಹಾಕಿಕೊಳ್ಳಬೇಕು. ನಿವೃತ್ತಿಯ ಸಮಯದಲ್ಲಿ ಗಳಿಸಿದ ಹಣವನ್ನು ಸೂಕ್ತವಾಗಿ ಹೂಡಿಕೆ ಮಾಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊಫೆಸರ್ ವಿಷ್ಣು ಗಣಪತಿ ಭಟ್ ಮಾತನಾಡಿ ವಿದ್ಯಾರ್ಥಿ ದೆಸೆಯಲ್ಲಿ ಸಮಯದ ಸದುಪಯೋಗ ಪಡೆದುಕೊಳ್ಳಬೇಕು. ಎಲ್ಲಾ ವಿಷಯಗಳ ಮೇಲೆ ತಕ್ಕಮಟ್ಟಿಗಾದರೂ ಪರಿಣಿತರಾಗಬೇಕು. ಸಂವಹನ ಕೌಶಲ್ಯ, ವೃತ್ತಿಪರತೆ, ತಾಂತ್ರಿಕ ಜ್ಞಾನಗಳನ್ನು ಪಡೆದುಕೊಂಡು ಪಕ್ವವಾಗಿರಬೇಕು. ಆಗ ಅವಕಾಶಗಳು ನಮ್ಮನ್ನು ಹುಡುಕಿಕೊಂಡು ಬರುತ್ತವೆ ಎಂದರು.
ಕಾರ್ಯಕ್ರಮದಲ್ಲಿ ಎಸ್ ಬಿ ಐ ಲೈಫ್‌ನ ಅಧಿಕಾರಿ ಅಶೋಕ್, ಕಾಲೇಜಿನ ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ವಿಜಯಸರಸ್ವತಿ ಉಪಸ್ಥಿತರಿದ್ದರು. ಎಂ.ಕಾA ವಿದ್ಯಾರ್ಥಿನಿಯರಾದ ಮೇಘಶ್ರೀ ಸ್ವಾಗತಿಸಿ, ರೂಪ ವಂದಿಸಿ, ಕವನ ಪೈ ಕಾರ್ಯಕ್ರಮವನ್ನು ನಿರೂಪಿಸಿದರು