VIVEKANANDA COLLEGE of Arts, Science and Commerce (Autonomous) Puttur

Re - accredited at 'A' Grade by the NAAC with 3.30 CGPA

Recognised as the College with Potential for Excellence (CPE) by the UGC

| +91 8251 230 455 | Kannada

ವಿವೇಕಾನಂದದಲ್ಲಿ ವಿಕಸನವಾದ ಮೀಡಿಯಾ ವಿವೇಚನ್ – ಮಾಧ್ಯಮ ಸಮಾವೇಶ

 

ವೃತ್ತಿ ಮತ್ತು ಪ್ರವೃತ್ತಿ ಒಂದೇ ಆದಾಗ ಜೀವನ ಸುಗಮ : ಅಜಿತ್ ಹನಮಕ್ಕನವರ್

ಪುತ್ತೂರು ಆ. ೦೮: ಪ್ರವೃತ್ತಿಯೇ ವೃತ್ತಿಯಾಗಬೇಕು, ಹಾಗಾದಾಗ ಜೀವನ ಸುಗಮವಾಗಿರುತ್ತದೆ. ಪ್ರವೃತ್ತಿಯನ್ನು ವೃತ್ತಿಯಾಗಿಸುವ ಸಾಮರ್ಥ್ಯ ನಮ್ಮಲ್ಲಿರಬೇಕು. ಪತ್ರಿಕೋದ್ಯಮದ ವಿದ್ಯಾರ್ಥಿಗಳು ಬರವಣಿಗೆ, ಮಾತು ಮತ್ತು ಪ್ರಚಲಿತ ವಿದ್ಯಮಾನಗಳ ಬಗ್ಗೆ ಜ್ಞಾನ ಹೊಂದಿರಬೇಕು. ಎಡ ಬಲ ವಿಚಾರವಾದಗಳಿಗೆ ಅಡಿಯಾಳಾಗಿರಬಾರದು. ಸುದ್ದಿ ಮಾಧ್ಯಮದಲ್ಲಿ ಪತ್ರಕರ್ತನ ವ್ಯಕ್ತಿತ್ವ ಹಾಗೂ ನಿಷ್ಟತೆ ಅಗತ್ಯವಾಗಿ ಬೇಕು. ಪತ್ರಿಕೋದ್ಯಮ ಇತರೇ ವೃತ್ತಿಯಂತೆ ನಿರ್ದಿಷ್ಟ ಅವಧಿಗೆ ಸೀಮಿತವಾಗಿ ಕಾರ್ಯನಿರ್ವಹಿಸುವುದಿಲ್ಲ. ಪತ್ರಿಕೋದ್ಯಮಕ್ಕೆ ಸಮಯ ನೀಡಿದರೆ ಮಾತ್ರ ಯಶಸ್ಸು ಸಿಗಲು ಸಾಧ್ಯ. ಎಂದು ಬೆಂಗಳೂರಿನ ಏಷ್ಯಾನೆಟ್ ಸುವರ್ಣ ಸುದ್ದಿವಾಹಿನಿಯ ಸಂಪಾದಕ ಅಜಿತ್ ಹನಮಕ್ಕನವರ್ ಹೇಳಿದರು.


ವಿವೇಕಾನಂದ ಮಹಾವಿದ್ಯಾಲಯದಲ್ಲಿ ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ ಮತ್ತು ಐಕ್ಯೂಎಸಿ ಘಟಕದ ಆಶ್ರಯದಲ್ಲಿ ‘ಮೀಡಿಯಾ ವಿವೇಚನ್’ ರಾಜ್ಯ ಮಟ್ಟದ ಮಾಧ್ಯಮ ಕಾರ್ಯಗಾರವನ್ನು ಉದ್ಘಾಟಿಸಿ ಸೋಮವಾರ ಮಾತನಾಡಿದರು.
ಕಾರ್ಯಕ್ರಮದ ಬಗ್ಗೆ ಮಾತನಾಡಿದ ಅವರು, ಯಾವುದೇ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಲು ಸಂಖ್ಯೆಯ ಅಗತ್ಯವಿಲ್ಲ. ಬದಲಾಗಿ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಬೇಕು ಅನ್ನುವ ತುಡಿತ ವಿದ್ಯಾರ್ಥಿಗಳಲ್ಲಿರಬೇಕು. ಜೊತೆಗೆ ಸ್ನಾತಕೋತ್ತರ ಪತ್ರಿಕೋದ್ಯಮವನ್ನು ಶ್ಲಾಘಿಸುತ್ತಾ, ವಿದ್ಯಾಸಂಸ್ಥೆಯ ಪಾತ್ರ ಕೂಡ ಮಹತ್ವವಾಗಿರುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕತೆಯನ್ನು ವಹಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷö್ಯ ಡಾ. ಕಲ್ಲಡ್ಕ ಪ್ರಭಾಕರ್ ಮಾತನಾಡಿ, ಪ್ರಚಲಿತ ದಿನಗಳಲ್ಲಿ ಮಾಧ್ಯಮ ನಂಬಿಕೆಯನ್ನು ಕಳೆದುಕೊಂಡಿದೆ. ಮಾಧ್ಯಮ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯವನ್ನು ಮಾಡಬೇಕು. ಪ್ರಚಲಿತ ವಿದ್ಯಮಾನಗಳನ್ನು ಪ್ರಕಟಿಸುವ ಪತ್ರಕರ್ತರಿಗೆ ಧೈರ್ಯ, ಗಟ್ಟಿನಿಲುವು ಇರಬೇಕು. ಪತ್ರಕರ್ತರಲ್ಲಿ ಎಡ ಬಲ ವಿಚಾರಗಳ ಬದಲಾಗಿ ರಾಷ್ಟಿçÃಯತೆಯ ಭಾವನೆಯಿರಬೇಕು ಎಂದು ಹೇಳಿದರು.


ಪತ್ರಿಕೋದ್ಯಮ ಕಾರ್ಯಕ್ರಮದಲ್ಲಿ ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ, ಸಂಚಾಲಕ ಮುರಳಿಕೃಷ್ಣ ಕೆ.ಎನ್, ಪ್ರಾಚಾರ್ಯ ಪ್ರೊ. ವಿಷ್ಣುಗಣಪತಿ ಭಟ್, ಐಕ್ಯೂಎಸಿ ಘಟಕದ ಸಂಯೋಜಕ ಶಿವಪ್ರಸಾದ್ ಕೆ ಎಸ್ ಕಾಲೇಜಿನ ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದದವರು ಉಪಸ್ಥಿತರಿದ್ದರು.
ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ತಾರಾ ಕರುಣ್ ಸ್ವಾಗತಿಸಿ, ಪ್ರಸ್ತಾವನೆಗೈದರು. ದ್ವಿತೀಯ ಎಂಸಿಜೆ ವಿದ್ಯಾರ್ಥಿನಿ ಪ್ರಜ್ಞಾ ಓಡಿಲ್ನಾಳ, ದೀಪ್ತಿ ಅಡ್ಡಂತಡ್ಕ ಕಾರ್ಯಕ್ರಮವನ್ನು ನಿರ್ವಹಿಸಿದರು.
ನೇರ ದಿಟ್ಟ ನಿರಂತರ
ಗೋಷ್ಟಿಯಲ್ಲಿ ಅಜಿತ್ ಹನಮಕ್ಕನವರ್ ಮಾತನಾಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಪತ್ರಕರ್ತರು ಗೂಗಲ್ ಮಾಹಿತಿಗಳನ್ನು ನಂಬಬಾರದು. ಮಾಧ್ಯಮದಲ್ಲಿ ಬರುವ ಸುದ್ದಿಗಳು ವೀಕ್ಷಕರ ಅಭಿರುಚಿಗೆ ಅನುಗುಣವಾಗಿದೆ. ವಿಷಾಯಾಧಾರಿತ ನಿಲುವುಗಳು ಪತ್ರಕರ್ತರಿಗಿರಬೇಕು. ಪತ್ರಕರ್ತನ ನಿಷ್ಠೆ ಸತ್ಯದೆಡೆಗಿರಬೇಕು. ಹಣೆಪಟ್ಟಿಗಳು ಎಲ್ಲಾ ಹುದ್ದೆಯಲ್ಲಿರುತ್ತದೆ ಎಂದರು.
ಹಿನ್ನಲೆ ಧ್ವನಿಯ ಮುಂದಾಳಾಗುವುದು ಹೇಗೆ?
ಹಿನ್ನಲೆ ಧ್ವನಿ ಕಲಾವಿದ ಹಾಗೂ ಭರತನಾಟ್ಯ ಕಲಾವಿದ ದೇವರಾಜ್ ಬಿ.ವಿ ಮಾತನಾಡಿ, ಭರತನಾಟ್ಯ ಮುದ್ರೆಗಳು ಸಂವಹನದಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಹಿನ್ನಲೆ ಧ್ವನಿ ಕಲಾವಿದರಾಗಲು ಧ್ವನಿಯಲ್ಲಿ ಹಿಡಿತ ಅಗತ್ಯ. ಸಂಗೀತ ಕಲಾವಿದರಿಗೆ ಧ್ವನಿಯನ್ನು ಹಿಡಿತದಲ್ಲಿಡಲು ಸಾಧ್ಯ. ರೇಡಿಯೋ, ದೂರದರ್ಶನ ಹಾಗೆ ಇತರೆ ಮಾಧ್ಯಮಗಳಲ್ಲಿ ಬಳಸುವ ಧ್ವನಿ ವಿಭಿನ್ನವಾಗಿರುತ್ತದೆ. ಪ್ರತಿಭೆ ಹುಟ್ಟಿನಿಂದ ಅಥವಾ ನಮ್ಮ ಸ್ವಪ್ರಯತ್ನದಿಂದಲೇ ಎಲ್ಲರಲ್ಲೂ ಅಡಕವಾಗಿರುತ್ತದೆ. ನಮ್ಮಲ್ಲಿರುವ ಕೌಶಲ್ಯಗಳನ್ನು ನಾವು ಮೊದಲು ಅರಿತುಕೊಂಡಾಗ ಮಾತ್ರ ಯಶಸ್ಸನ್ನು ಗಳಿಸಲು ಸಾಧ್ಯ. ಭಾಷ ಸ್ಪಷ್ಟತೆಯನ್ನು ಕಲಿಯಬೇಕು. ಹಲವಾರು ಪ್ಲಾಟ್‌ಫಾರ್ಮ್ಗಳು ಅನೇಕ ವೇದಿಕೆಯನ್ನು ಕಲ್ಪಿಸಿಕೊಡುತ್ತಿದೆ. ಸಿಕ್ಕಿರುವ ಅವಕಾಶಗಳನ್ನು ಬಳಸಿಕೊಳ್ಳಬೇಕು.
ತೊದಲು ನುಡಿಗಳನ್ನು ಕಲಿಯಲು ಅನೇಕ ವ್ಯಾಯಾಮಗಳಿವೆ. ಅದನ್ನು ಕಲಿಯಬೇಕು. ಅನೇಕ ಭಾಷೆಗಳನ್ನು ಅನುಕರಿಸುವುದನ್ನು ಕಲಿತುಕೊಳ್ಳಬೇಕು. ವೇದಿಕೆಯ ಭಯವಿದ್ದರೆ ಉತ್ತಮ. ದಿನಂಪ್ರತಿ ಆಡಿಯೋ, ವೀಡಿಯೋಗಳನ್ನು ಮಾಡುತ್ತಿರಬೇಕು. ಕಠಿಣ ಪರಿಶ್ರಮದಿಂದ ವೇದಿಕೆಯ ಭಯ ಹೋಗಲಾಡಿಸಲು ಮತ್ತು ಭಾಷೆಯಲ್ಲಿ ಪರಿಪಕ್ವತೆಯನ್ನು ಪಡೆಯಲು ಸಾಧ್ಯ.
ಬಾನುಲಿಯ ಬಾನಂಗಳ
ಮೂರನೇ ಗೋಷ್ಠಿಯಲ್ಲಿ ಮಂಗಳೂರು ಆಕಾಶವಾಣಿಯ ಪ್ರಸರಣ ಅಧಿಕಾರಿ ಲತೀಶ್ ಪಾಲ್ದಾನೆ ನಡೆಸಿ ರೇಡಿಯೋ ಎಂಬುದು ಅಕ್ಷರ ಜ್ಞಾನ ವಿಲ್ಲದ್ದಿದ್ದರು ಸುದ್ದಿಯನ್ನು ಜನರಿಗೆ ತಲುಪಿಸಲು ಇರುವ ಉತ್ತಮ ಮಾಧ್ಯಮ. ಅನೇಕ ಕೇಳುಗರು ರೇಡಿಯೋವನ್ನು ತಮ್ಮ ದಿನನಿತ್ಯ ಜೀವನದ ಒಂದು ಭಾಗವಾಗಿ ಆರಿಸಿಕೊಂಡಿದ್ದಾರೆ, ಮುಖ್ಯವಾಗಿ ಅಂಧರು ರೇಡಿಯೋಗೆ ಹೆಚ್ಚಾಗಿ ಅವಲಂಬಿತರಾಗಿದ್ದಾರೆ. ಮತ್ತು ರೇಡಿಯೋ ಜನರ ಭಾವನಾತ್ಮಕ ಜೀವನದಲ್ಲಿ ಮಹತ್ವದ ಪಾತ್ರವನ್ನು ವಹಿಸಿದೆ.
ಎಫ್‌ಎಂ ರೇಡಿಯೋ ಮತ್ತು ಆಕಾಶವಾಣಿಯ ಸಿಗ್ನಲ್‌ಗಳಲ್ಲಿ ಬದಲಾವಣೆಯಿದೆ, ಜೊತೆಗೆ ಎರಡು ಕಡೆ ಮಾತನಾಡುವ ರೀತಿಯೂ ಬೇರೆಯಾಗಿದ್ದು, ಆಕಾಶವಾಣಿಯಲ್ಲಿ ಮುಖ್ಯವಾಗಿ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುತ್ತದೆ. ಯಾವುದೇ ಯೋಜನೆಗಳು ಬಂದಾಗ ಅದನ್ನು ಜನರಿಗೆ ತಲುಪಿಸುವ ಕಾರ್ಯವನ್ನು ರೇಡಿಯೋ ಮಾಡುತ್ತದೆ, ಜೊತೆಗೆ ಜನರ ಭಾವನೆಗಳನ್ನು ಸರಕಾರಕ್ಕೆ ತಲುಪಿಸುವ ಕೆಲಸವನ್ನು ಆಕಾಶವಾಣಿ ಮಾಡುತ್ತದೆ. ತೆರೆಯ ಮರೆಯಲ್ಲಿರುವ ವಿಷಯಗಳ ಕುರಿತು ಕಾರ್ಯಕ್ರಮ ನೀಡುವುದರ ಜೊತೆಗೆ ಕೇಳುಗರನ್ನು ಶಿಕ್ಷಿತರನ್ನಾಗಿಸುವ ಕಾರ್ಯವನ್ನು ಮಾಡುತ್ತಿದೆ. ಎಂದರು.
ಆಕಾಶವಾಣಿ ಮುಖ್ಯವಾಗಿ ಜನರಿಗೆ ಮನರಂಜನೆಯ ಜೊತೆಗೆ ಶಿಕ್ಷಣವನ್ನು ನೀಡಿ, ಜನರನ್ನು ಶಿಕ್ಷಿತರನ್ನಾಗಿಸುತ್ತಿದೆ.ಜೊತೆಗೆ ಇಂದಿಗೂ ಅನೇಕ ಗಳನ್ನು ನೀಡುತ್ತಿದೆ, ಹಾಗೆ ಅನೇಕ ಸ್ಥಳೀಯ ಭಾಷೆಯಲ್ಲಿ ಕಾರ್ಯಕ್ರಮವನ್ನು ನೀಡುತ್ತಿದೆ. ಇದರ ಜೊತೆಗೆ ಅನೇಕ ವಿಶೇಷ ಕಾರ್ಯಕ್ರಮಗಳು ಮಂಗಳೂರು ಆಕಾಶವಾಣಿಯಲ್ಲಿ ಮೂಡಿ ಬರುತ್ತಿದೆ ಎಂದರು.
ನಾಲ್ಕನೇ ಗೋಷ್ಠಿಯಲ್ಲಿ ಗ್ಲಾನ್ಸ್ ಡಿಜಿಟಲ್ ಮೀಡಿಯಾದ ಕನ್ನಡ ವಿಭಾಗದ ಮುಖ್ಯಸ್ಥ ರಾಜೀವ್ ಹೆಗಡೆ ನವಮಾಧ್ಯಮದ ಅವಕಾಶಗಳು ಎಂಬ ವಿಷಯದ ಕುರಿತು ಮಾತನಾಡಿ ಭಾರತದ ನವಮಾಧ್ಯಮ ಅಮೇರಿಕಾದ ನವಮಾಧ್ಯಮದ ದುಪ್ಪಟ್ಟು ವೇಗದಲ್ಲಿ ಬದಲಾಗುತ್ತಿದೆ. ಇಂದಿನ ಟ್ರೆಂಡ್ ಗಳಿಗೆ ಸರಿಯಾಗಿ ರೂಪುಗೊಳ್ಳುತ್ತಿದೆ. ನವಮಾಧ್ಯಮಗಳು ಸ್ವತಂತ್ರ ಪತ್ರಕರ್ತರನ್ನು ಸೃಷ್ಠಿಮಾಡುತ್ತಿದೆ. ವಿದ್ಯುತ್ಮಾನ ಜಗತ್ತಿನಲ್ಲಿ ಕಾಣಿಸಿಕೊಳ್ಳಬೇಕಾದರೆ ಸ್ಪರ್ಧಾತ್ಮಕ ಜಗತ್ತಿಗೆ ಒಗ್ಗಿಕೊಳ್ಳಬೇಕು ಎಂದರು.
ಐದನೇ ಗೋಷ್ಠಿಯಲ್ಲಿ ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕ ನಾ. ಕಾರಂತ ಪೆರಾಜೆ ಅಂಕಣ ಸಾಹಿತ್ಯದ ನಂಟು ಎಂಬ ವಿಷಯದ ಕುರಿತು ಮಾತನಾಡಿ, ಅಂಕಣ ಬರಹಗಳು ಸಮಾಜದಿಂದ ಮೂಡಿಬಂದಾಗ ನೆಲದ ಪರಿಮಳವಿರುತ್ತದೆ.ಅಂಕಣ ಸಾಹಿತ್ಯ ಬದುಕುಕಟ್ಟಿಕೊಳ್ಳುವ ವಸ್ತುವಾಗಿರಬೇಕು. ಇಲ್ಲಿ ಸತ್ಯಾಂಶಗಳನ್ನು ಕೆದಕಿ ತೆಗೆಯಲು ಸಾಧ್ಯ. ಮಾನವೀಯ ಸಂಬAಧಗಳನ್ನು ಅಂಕಣ ಸಾಹಿತ್ಯ ಕೊಡಬೇಕು. ಮಾಧ್ಯಮಗಳು ಬದುಕಿನ ಬುತ್ತಿಯನ್ನು ತೆರೆದಿಡುವ ಸಂವಾಹಕಗಳಾಗಬೇಕು ಎಂದರು.
ಸಮಾರೋಪ ಸಮಾರಂಭ
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಹಿನ್ನಲೆ ಧ್ವನಿ ಕಲಾವಿದ ಬಡೆಕ್ಕಿಲ ಪ್ರದೀಪ್ ಮಾತನಾಡಿ, ಪತ್ರಕರ್ತನಿಗೆ ಕಲಿಯುವ ಹಸಿವು ಇರಬೇಕು. ಇದರಿಂದ ಪ್ರತೀ ಕಾರ್ಯದಲ್ಲಿ ಹೊಸ ವಿಷಯಗಳನ್ನು ಕಂಡುಕೊಳ್ಳಲು ಸಾಧ್ಯ. ನಾಳೆಗಳ ಬದಲಾವಣೆಗೆ ಒಗ್ಗಿಕೊಳ್ಳುವುದು ಒಬ್ಬ ಉತ್ತಮ ಪರ್ತಕತ್ರನ ಲಕ್ಷಣ. ಪ್ರಚಲಿತ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಕೀರ್ತಿಯನ್ನು ಸಂಪಾದಿಸುವುದು ಸುಲಭ ಆದರೆ ಸಾಮಾಜಿಕ ಜಾಲತಾಣಗಳನ್ನು ತನ್ನ ವೃತ್ತಿಗೆ ಪೂರಕವಾಗಿ ಬಳಸಿಕೊಳ್ಳುವ ಕಲೆಯನ್ನು ಪತ್ರಕರ್ತರು ಕಲಿತುಕೊಳ್ಳಬೇಕು. ಯಶಸ್ಸಿನ ಹಿಂದೆ ವಿದ್ಯಾರ್ಥಿಗಳು ಓಡಬೇಕು. ಯಶಸ್ಸಿನ ಮಧ್ಯೆ ಯಾವುದೇ ಅಡೆತಡೆಗಳಿಗೆ ಎಡೆಮಾಡಿಕೊಡಬಾರದು.
ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣುಗಣಪತಿ ಭಟ್ ಮಾತನಾಡಿ, ಪತ್ರಿಕೋದ್ಯಮ ವಿದ್ಯಾರ್ಥಿಗಳು ಚುರುಕಾಗಿರಬೇಕು. ಪ್ರತಿ ವಿಷಯಗಳನ್ನು ಗ್ರಹಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿ ಶುಭಹಾರೈಸಿದರು.
ಸಂಚಾಲಕ ಮುರಳಿಕೃಷ್ಣ ಕೆ. ಎನ್ ಮಾತನಾಡಿ, ಪತ್ರಿಕೋದ್ಯಮ ಅಂದರೆ ಟಿವಿ, ಪತ್ರಿಕೆ ಮಾತ್ರವಲ್ಲ. ಅದು ವಿಫುಲ ಅವಕಾಶಗಳನ್ನು ಹೊಂದಿರುವ ಕ್ಷೇತ್ರವಾಗಿದೆ ಎಂದರು.

ಈ ಸಂದರ್ಭ ನಾ ಕಾರಂತ ಪೆರಾಜೆಯವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಪಾಕ್ಷಿಕ ನಿಯತಕಾಲಿಕೆ ‘ವಿನೂತನ’, ಪ್ರಾಯೋಗಿಕ ವಾರ ಪತ್ರಿಕೆ ‘ವಿಕಾಸ’ ಬಿಡುಗಡೆಗೊಂಡಿತು.
ಕಾರ್ಯಕ್ರಮದ ಪ್ರಯುಕ್ತ ನಡೆದ ರಸಪ್ರಶ್ನೆ ಸ್ಫರ್ದೆಯಲ್ಲಿ ಮಂಗಳೂರು ಯುನಿವರ್ಸಿಟಿ ಕಾಲೇಜಿನ ಲತೇಶ್ ಸಾಂತ ಪ್ರಥಮ, ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಸುಮನ ದ್ವಿತೀಯ, ಮತ್ತು ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಮಂಜುಶ್ರೀ ತೃತೀಯ ಬಹುಮಾನ ಪಡೆದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಆಡಳಿತ ಮಂಡಳಿ ಪ್ರೊ. ಶ್ರೀಪತಿ ಕಲ್ಲೂರಾಯ ಮಾತನಾಡಿ, ಶಿಕ್ಷಣದಲ್ಲಿ ಪಠ್ಯದ ಜೊತೆ ಪ್ರಾಯೋಗಿಕ ತರಬೇತಿ ಅತೀ ಅಗತ್ಯ. ಪತ್ರಿಕೋದ್ಯಮ ಯಾಂತ್ರಿಕ ಮಾನದ ಅಳತೆಗೆ ಒಳಗಾಗದೆ ಸಮಾಜದ ಮೌಲ್ಯಗಳನ್ನು ತಿಳಿಸುವ ಕಾರ್ಯವನ್ನು ಮಾಡಬೇಕು. ರಾಷ್ಟಿçÃಯ ಕಲ್ಪನೆಯನ್ನು ಸಾಮಾನ್ಯರಲ್ಲಿ ಬೆಳೆಸಬೇಕು. ಸಮಾಜದ ಆಗುಹೋಗುಗಳಲ್ಲಿ ಬದಲಾವಣೆಯನ್ನು ತರುವ ಪ್ರಯತ್ನವನ್ನು ಪತ್ರಿಕೋದ್ಯಮ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕಿ ತಾರಾ ಕರುಣ್ ಉಪಸ್ಥಿತರಿದ್ದರು.
ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಭರತ್ ಕೋಲ್ಪೆ ಸ್ವಾಗತಿಸಿ, ದ್ವಿತೀಯ ಎಂಸಿಜೆ ವಿದ್ಯಾರ್ಥಿ ಅರುಣ್ ಕಿರಿಮಂಜೇಶ್ವರ ವಂದಿಸಿದರು. ವಿದ್ಯಾರ್ಥಿನಿಯರಾದ ದಿವ್ಯಶ್ರೀ ವಜ್ರದುಂಬಿ ಮತ್ತು ಪ್ರಜ್ಞಾ ಓಡಿಲ್ನಾಳ ಕಾರ್ಯಕ್ರಮ ನಿರೂಪಿಸಿದರು.