ವಿವೇಕಾನಂದ ಕಾಲೇಜಿಗೆ ಎರಡು Rank – ಬಿಎಸ್ಸಿಯಲ್ಲಿ ಶ್ವೇತಾ ಪ್ರಥಮ, ಬಿಬಿಎಂನಲ್ಲಿ ಕಾರ್ತಿಕ್ಗೆ 6ನೇ ಸ್ಥಾನ
ಪುತ್ತೂರು: ಮಂಗಳೂರು ವಿಶ್ವವಿದ್ಯಾನಿಲಯವು 2014ರ ಎಪ್ರಿಲ್/ಮೇ ತಿಂಗಳಲ್ಲಿ ನಡೆಸಿದ ಪದವಿ ಪರೀಕ್ಷೆಯ ಬಿಎಸ್ಸಿ ವಿಭಾಗದಲ್ಲಿ ಇಲ್ಲಿನ ವಿವೇಕಾನಂದ ಕಾಲೇಜಿನ ಶ್ವೇತಾ ಕೆ.ಎಸ್ ಪ್ರಥಮ ರ್ಯಾಂಕ್ ಹಾಗೂ ಬಿಬಿಎಂ ವಿಭಾಗದಲ್ಲಿ ಕಾರ್ತಿಕ್ ಪ್ರಭು ಎಂ ಆರನೇ ರ್ಯಾಂಕ್ ಗಳಿಸಿರುತ್ತಾರೆ. ನೆಹರು ನಗರದ ನಿವಾಸಿಗಳಾದ ಉದ್ಯಮಿ ಶಿವರಾಜ್ ಭಟ್ ಹಾಗೂ ನಳಿನಿ ಎಸ್ ಭಟ್ ದಂಪತಿಯ ಪುತ್ರಿಯಾಗಿರುವ ಶ್ವೇತಾ ಒಟ್ಟು 5೦೦೦ ಅಂಕಗಳಲ್ಲಿ 4896 ಅಂಕಗಳೊಂದಿಗೆ 97.92 ಶೇಕಡ ದಾಖಲಿಸಿದರೆ ದರ್ಭೆಯಲ್ಲಿ ವಾಸವಿರುವ ಉದ್ಯಮಿ ಎಂ.ರಾಮಚಂದ್ರ ಪ್ರಭು ಹಾಗೂ ರಚನಾ ಆರ್ ಪ್ರಭು ದಂಪತಿಯ ಪುತ್ರನಾಗಿರುವ ಕಾರ್ತಿಕ್ ಪ್ರಭು 5೦೦೦ ಅಂಕಗಳಲ್ಲಿ 4468 ಅಂಕಗಳೊಂದಿಗೆ 89.36 ಶೇಕಡ ಗಳಿಸಿರುತ್ತಾರೆ.