ವಿವೇಕಾನಂದ ಕಾಲೇಜಿನಲ್ಲಿ ಟೆಕ್ನೋ ತರಂಗ್ – 16 ಸಮಾರೋಪ : ಯಶಸ್ಸು ಗಳಿಕೆಯೇ ವಿದ್ಯಾರ್ಥಿಗಳ ಪರಮ ಧ್ಯೇಯವಾಗಲಿ : ರಾಕೇಶ್ ಕುಮಾರ್
ಪುತ್ತೂರು: ಜೀವನದಲ್ಲಿ ಯಶಸ್ಸನ್ನು ಗಳಿಸುವುದೇ ವಿದ್ಯಾರ್ಥಿಗಳ ಪರಮ ಧ್ಯೇಯವಾಗಿರಬೇಕು. ಅದಕ್ಕೆ ಪೂರಕವಾಗಿ ಯೋಚನೆ ಮತ್ತು ಯೋಜನೆಯೊಂದನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕು ಎಂದು ಸೈಂಟ್ ಅಲೋಶಿಯಸ್ ಕಾಲೇಜ್ನ ಮಾಹಿತಿ ತಂತ್ರಜ್ಞಾನ ವಿಭಾಗದ ಸಹಾಯಕ ಪ್ರಾದ್ಯಾಪಕ ಪ್ರೊ.ರಾಕೇಶ್ ಕುಮಾರ್ ಹೇಳಿದರು.
ಅವರು ವಿವೇಕಾನಂದ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗ ಮತ್ತು ಐ.ಟಿ ಕ್ಲಬ್ ಜಂಟಿಯಾಗಿ ಆಯೋಜಿಸಿದ ಟೆಕ್ನೋ ತರಂಗ್ – ೧೬ ಎಂಬ ಸ್ಪರ್ಧಾ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಆತಿಥಿಯಾಗಿ ಮಾತನಾಡಿದರು.
ಸಾಧನೆಯ ಬೆನ್ನು ಹಿಡಿಯಲು ಅತ್ಮ ಸ್ಥೈರ್ಯ ಮತ್ತು ಆತ್ಮ ಶಕ್ತಿಯನ್ನು ವಿದ್ಯಾರ್ಥಿಗಳು ಎಳೆಯ ವಯಸ್ಸಿನಲ್ಲೆ ರೂಡಿಸಿಕೊಳ್ಳಬೇಕು. ಸದಾ ಕ್ರಿಯಾಶೀಲತೆಯಿಂದ ಕಾರ್ಯ ಪವೃತ್ತರಾದಾಗ ಯಶಸ್ಸು ಗಳಿಸಲು ಸಾಧ್ಯ. ಆಧುನಿಕ ತಂತ್ರಜ್ಞಾನ ಬಹಳ ಅಭಿವೃದ್ದಿ ಹೊಂದಿದೆಯಾದರೂ ಜನ ಇನ್ನೂ ಹೆಚ್ಚಿನ ಪ್ರಗತಿಯನ್ನು ಬಯಸುತ್ತಿದ್ದಾರೆ ಎಂದರು.
ಮಾನವ ಇಂದು ತಂತ್ರಜ್ಞಾನಗಳೊಂದಿಗೆ ಸಂವಹನ ನಡೆಸುತ್ತಿದ್ದಾನೆ. ತಂತ್ರಜ್ಞಾನದ ಆವಿಷ್ಕೃತ ಬೆಳವಣಿಗೆಗಳು ಮಾನವನ ಸಮಯವನ್ನು ಉಳಿಸಲು ನೆರವಾಗುತ್ತಿವೆ. ಆಧುನಿಕ ಸೂಪರ್ ಕಂಪ್ಯೂಟರ್ ಇಂದು ಜಗತ್ತಿನ ಮುಂದಿದೆ. ಇದ್ಯಾವುದೂ ಮಾನವನ ಬೌದ್ಧಿಕ ಮಟ್ಟಕ್ಕಿಂತ ಮಿಗಿಲಾಗಿಲ್ಲ. ಮಾನವನ ಬುದ್ದಿವಂತಿಕೆಯಿಂದ ಇದು ಸಾಕಾರಗೊಂಡಿದೆ ಎಂಬುದನ್ನು ಮರೆಯುವಂತಿಲ್ಲ ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ, ದೂರ ದೃಷ್ಠಿ ಮತ್ತು ಬುದ್ದಿವಂತಿಕೆಯಿಂದ ಸಾಧನೆಯ ರೇಖೆ ಮತ್ತಷ್ಟು ಹತ್ತಿರವಾಗುತ್ತಾ ಹೋಗುತ್ತದೆ. ಪರಸ್ಪರ ಜ್ಞಾನವನ್ನು ಹಂಚಿ ಕೊಳ್ಳುವುದರಿಂದ ವೈಯಕ್ತಿಕ ಬುದ್ಧಿಮಟ್ಟ ಹೆಚ್ಚುವುದರೊಂದಿಗೆ ಸಮುದಾಯದ ಏಳಿಗೆಯಾಗುತ್ತದೆ. ಆಧುನಿಕ ತಂತ್ರಜ್ಞಾನದ ಲಾಭ ಪಡೆದುಕೊಂಡು ಯಶಸ್ಸಿನ ಉತ್ತುಂಗಕ್ಕೆ ಸಾಗಬೇಕು ಎಂದು ನುಡಿದರು.
ವೇದಿಕೆಯಲ್ಲಿ ಟೆಕ್ನೋ ವೆಂಚರ್ ಗ್ಲೋಬ್ನ ಸಲಹೆಗಾರ ದಿನೇಶ್ ಕಾವೂರು, ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಪ್ರಕಾಶ್ ಕುಮಾರ್, ಐ.ಟಿ. ಕ್ಲಬ್ನ ಸಂಯೋಜಕಿ ರಮ್ಯ ಕಶ್ಯಪ್, ಐ.ಟಿ. ಕ್ಲಬ್ನ ಅಧ್ಯಕ್ಷ ಸಚಿನ್ ಉಪಸ್ಥಿತರಿದ್ದರು. ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜು ಟೆಕ್ನೋ ತರಂಗ್ ೨೦೧೬ರ ಸಮಗ್ರ ಪ್ರಶಸ್ತಿಗೆ ಭಾಜನವಾಯಿತು.
ಐ.ಟಿ. ಕ್ಲಬ್ನ ಕಾರ್ಯದರ್ಶಿ ಪಾರ್ಥನ್ ಸ್ವಾಗತಿಸಿದರು. ಬಿ.ಸಿ.ಎ ವಿದ್ಯಾರ್ಥಿನಿ ಪೂರ್ಣಿಮ ನಿರೂಪಿಸಿ, ಜೊತೆ ಕಾರ್ಯದರ್ಶಿ ಸಿಂಧು ವಂದಿಸಿದರು.