ವಿವೇಕಾನಂದ ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ದಿನಾಚರಣೆ
ಶಿಕ್ಷಣದ ಜೊತೆಗೆ ಸಂಸ್ಕಾರವನ್ನೂ ಕಡ್ಡಾಯವಾಗಿ ಕಲಿಯಬೇಕು-ಸರ‍್ಯನಾರಾಯಣ
ಪುತ್ತೂರು: ಆ 16: ಇಂದು ಶಿಕ್ಷಣ ಎನ್ನುವಂತದ್ದು ಅಂಕಾಧಾರಿತವಾಗಿದೆ.ಆದರೆ ಅದು ಸಲ್ಲದು. ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಕಲಿತುಕೊಳ್ಳುವುದು ಅನಿವಾರ್ಯ. ಇಂದಿನ ಯುವ ಶಕ್ತಿಯೇ ಭವಿಷ್ಯದ ರಾಷ್ಟç ಶಕ್ತಿ. ಹಾಗಿರುವಾಗ ಇದೇ ಯುವಜನತೆಗೆ ದಾರಿ ತಪ್ಪಲು ಸಾವಿರಾರು ಅವಕಾಶಗಳಿವೆ. ಸಮಾಜದಲಿ ಸಂಸ್ಕಾರವAತರ ಅಗತ್ಯವಿದೆ. ಪ್ರತಿಯೊಬ್ಬರೂ ಕೂಡಾ ಸಮಾಜದ ಸುಧಾರಣೆಗಾಗಿ ನಾವೇನು ಮಾಡಬಹುದು ಎಂಬುವುದನ್ನು ಯೋಚಿಸಬೇಕು. ಸಮಾಜಮುಖಿ ಚಿಂತನೆಗಳು ವಿದ್ಯಾರ್ಥಿಗಳಲ್ಲಿ ಜೀವಂತವಾಗಬೇಕು ಎಮದು ಕಾಲೇಜಿನ ಹಿರಿಯ ವಿದ್ಯಾರ್ಥಿ, ಭಜರಂಗ ದಳದ ರಾಷ್ಟಿçÃಯ ಸಹ ಸಂಯೋಜಕ ಸರ‍್ಯನಾರಾಯಣ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯದಲ್ಲಿ ಹಿರಿಯ ವಿದ್ಯಾರ್ಥಿ ಸಂಘ ಮತ್ತು ಐಕ್ಯೂಎಸಿ ಇದರ ಸಹಯೋಗದಲ್ಲಿ ಅಂತಿಮ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ತೀಗಳ ಬೀಳ್ಕೊಡುಗೆ ಕರ‍್ಯಕ್ರಮ ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ದಿನಾಚರಣೆ ಕರ‍್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ನಾವು ಪಡೆದ ಶಿಕ್ಷಣ ನಮ್ಮ ಕುಟುಂಬವನ್ನು ಸಲಹುವುದಕ್ಕೆ ಮಾತ್ರ ಸೀಮಿತವಾಗದೆ ನಮ್ಮ ಸಮಾಜಕ್ಕೂ ಉಪಯೋಗಕ್ಕೆ ಬರಬೇಕು.ಆಗ ಮಾತ್ರ ಶಿಕ್ಷಣವು ಶ್ರೇಷ್ಟತೆಯನ್ನು ಪಡೆಯಲು ಸಾಧ್ಯ ಇದಕ್ಕೆಲ್ಲ ಸಂಸ್ಕಾರದ ಅಗತ್ಯತೆಯೂ ಇದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ನಮ್ಮ ಭವಿಷ್ಯಕ್ಕಾಗಿ ಹತ್ತಾರು ದಾರಿಗಳಿವೆ.ಆದುದರಿಂದ ನಿಮ್ಮ ದಾರಿಯನ್ನು ನೀವೇ ಹುಡುಕಿಕೊಳ್ಳಿ. ಸರಿಯಾದ ದೃಷ್ಟಿಕೋನವನ್ನು ಇಟ್ಟುಕೊಂಡು ಉತ್ತಮ ದಾರಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಮದರು.
ಈ ಸಂದರ್ಭದಲ್ಲಿ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಪ್ರೊ.ಆರ್ ವೇದವ್ಯಾಸ ಇವರನ್ನು ಸನ್ಮಾನಿಸಲಾಯಿತು. ಜೊತೆಗೆ ಅಂತಿಮ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಭಾರತಮಾತೆಯ ಭಾವಚಿತ್ರವನ್ನು ನೀಡಲಾಯಿತು. ಅಂತೆಯೇ ಶೈಕ್ಷಣಿಕ ರಂಗದಲ್ಲಿ ಸಾದನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮನಿಸಲಾಯಿತು.
ವೇದಿಕೆಯಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ ಕೆ.ಎನ್, ಪ್ರಾಂಶುಪಾಲ ಪ್ರೊ.ವಿಷ್ಣು ಗಣಪತಿ ಭಟ್, ಐಕ್ಯೂಎಸಿ ಸಂಯೋಜಕ ಪ್ರೊ.ಶಿವಪ್ರಸಾದ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ರಾವ್, ಕರ‍್ಯದರ್ಶಿ ಡಾ.ಮನಮೋಹನ ಎಂ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಅನುಷಾ, ಶಿಲ್ಪಾ, ಅನ್ನö್ಯ ಲಕ್ಷಿö್ಮ ಪ್ರಾರ್ಥಿಸಿದರು. ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ್ ನಾಯಕ್ ಸ್ವಾಗತಿಸಿ, ಅರ್ಥಶಾಸ್ತç ವಿಭಾಗದ ಮುಖ್ಯಸ್ಥ ಡಾ. ಅರುಣ್ ಪ್ರಕಾಶ್ ವಂದಿಸಿದರು. ಡಾ. ಗೀತಾ ಕುಮಾರಿ ಹಾಗೂ ಸರಸ್ವತಿ ಸಿ.ಕೆ ಕರ‍್ಯಕ್ರಮ ನಿರೂಪಿಸಿದರು.