VIVEKANANDA COLLEGE, PUTTUR

Re - accredited at 'A' Grade by the NAAC with 3.30 CGPA

Recognised as the College with Potential for Excellence (CPE) by the UGC

| +91 8251 230 455 | Kannada

ವಿವೇಕಾನಂದ ಕಾಲೇಜಿನ ಉಪನ್ಯಾಸಕಿ ಮೈತ್ರಿ ಭಟ್‌ಗೆ ಡಾಕ್ಟರೇಟ್ ಪದವಿ

ಪುತ್ತೂರು: ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಕನ್ನಡ ವಿಭಾಗದ ಉಪನ್ಯಾಸಕಿ, ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಂಶೋಧನಾರ್ಥಿ ಮೈತ್ರಿ ಭಟ್ ಮಂಡಿಸಿದ ‘ಕನ್ನಡ ಕಾದಂಬರಿಗಳಲ್ಲಿ ಮನೋವೈಜ್ಞಾನಿಕ ಪರಿಕಲ್ಪನೆಗಳು’ ಎಂಬ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಪದವಿ ನೀಡಿದೆ. ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಹ ಪ್ರಾಧ್ಯಾಪಕ ಡಾ.ನಾಗಪ್ಪಗೌಡ ಆರ್. ಇವರ ಮಾರ್ಗದರ್ಶನದಲ್ಲಿ ಕನ್ನಡ ಕಾದಂಬರಿಗಳನ್ನು ಮನೋವೈಜ್ಞಾನಿಕ ಪರಿಕಲ್ಪನೆಗಳ ಹಿನ್ನೆಲೆಯಲ್ಲಿ ಅಧ್ಯಯನ ನಡೆಸಿ ಈ ಮಹಾಪ್ರಬಂಧವನ್ನು ಸಿದ್ಧಪಡಿಸಲಾಗಿತ್ತು. ಪ್ರಮುಖ ಮನೋವಿಜ್ಞಾನಿಗಳ ಚಿಂತನೆಗಳನ್ನು ಆಧರಿಸಿ ಕಾದಂಬರಿಗಳಲ್ಲಿ ಕಂಡುಬರುವ ಅಂತಃಕೇAದ್ರೀಯ, ಅಂತರ್ವ್ಯಕ್ತಿ ಮತ್ತು ಸಾಮಾಜಿಕ ಸಂಬAಧಗಳ ಸ್ವರೂಪವನ್ನು ಕುರಿತಂತೆ ಮಹಾಪ್ರಬಂಧವು ಬೆಳಕು ಚೆಲ್ಲಿದೆ. ಪ್ರಸ್ತುತ ವಿಟ್ಲದ ನೆತ್ರಕೆರೆಯಲ್ಲಿ ನೆಲೆಸಿರುವ ಇವರು ಶಿಮಿಲಡ್ಕ ಗೋಪಾಲಕೃಷ್ಣ ಭಟ್ ಮತ್ತು ಸುಶೀಲಾ ಜಿ. ಭಟ್ ದಂಪತಿಯ ಪುತ್ರಿ ಹಾಗೂ ವಳಚ್ಚಿಲ್ ಶ್ರೀನಿವಾಸ ತಾಂತ್ರಿಕ ಶಿಕ್ಷಣಸಂಸ್ಥೆಯ ಗಣಕವಿಜ್ಞಾನ ವಿಭಾಗದ ಮುಖ್ಯಸ್ಥ ರವಿಶಂಕರ ಕೆ. ಅವರ ಪತ್ನಿ. ಇವರು ಮನೋವಿಜ್ಞಾನದಲ್ಲಿ ಪ್ರಥಮ ರ‍್ಯಾಂಕ್‌ನೊAದಿಗೆ ಸ್ನಾತಕೋತ್ತರ ಪದವಿ ಪಡೆದಿದ್ದು, ಕನ್ನಡದಲ್ಲಿ ಎನ್‌ಇಟಿ, ಜೆಆರ್‌ಎಫ್, ಕೆಸೆಟ್ ಪರೀಕ್ಷೆಗಳಲ್ಲೂ ಉತ್ತೀರ್ಣರಾಗಿರುತ್ತಾರೆ.
ನೋವಿನ ನಡುವೆಯೂ ‘ವೈವಾ’ ಎದುರಿಸಿದ ಮೈತ್ರಿ ಭಟ್:
ವಿಟ್ಲ ನಿವಾಸಿಯಾದ ಮೈತ್ರಿ ಭಟ್ ಸಾಲೆತ್ತೂರು ಮಾರ್ಗವಾಗಿ ಮಂಗಳೂರು ವಿವಿಯ ಕಡೆಗೆ ತಮ್ಮ ದ್ವಿಚಕ್ರ ವಾಹನದಲ್ಲಿ ಹೊರಟಿದ್ದರು. ಹಲವು ವರ್ಷಗಳಿಂದ ಸಂಚರಿಸುತ್ತಿದ್ದ ಚಿರಪರಿಚಿತ ಮಾರ್ಗವೇ ಆಗಿದ್ದರೂ, ಆ ದಿನ ವಿಧಿ ಪರೀಕ್ಷೆಯೊಂದನ್ನು ಅವರ ಮುಂದಿಟ್ಟಿತ್ತು. ಹಲವು ತಿಂಗಳಿನಿAದ ಕಾತುರದಿಂದ ಕಾಯುತ್ತಿದ್ದ ತಮ್ಮ ಪಿ.ಎಚ್.ಡಿ. ಮೌಖಿಕ ಪರೀಕ್ಷೆ(ವೈವಾ)ಯನ್ನು ಎದುರಿಸಲು ಹೊರಟಿದ್ದ ಮೈತ್ರಿ ಭಟ್ ಅವರ ವಾಹನಕ್ಕೆ ಎದುರಿದ್ದ ಪಿಕಪ್‌ನ ಮೇಲಿದ್ದ ರಾಡ್ ಜಾರಿ ಬಂದು ತಗುಲಿತ್ತು. ತಮ್ಮ ದ್ವಿಚಕ್ರ ವಾಹನದ ಮೇಲೆ ನಿಯಂತ್ರಣ ಸಿಗದೇ ಮೈತ್ರಿ ಅವರು ನೆಲಕ್ಕುರುಳಿದರು. ದಾರಿಹೋಕರ ಸಹಾಯದಿಂದ ಎದ್ದುಕುಳಿತ ಮೈತ್ರಿ ಅವರಿಗೆ, ವಿಜ್ಞಾನದ ವಿದ್ಯಾರ್ಥಿಯಾಗಿದ್ದ ಕಾರಣ ತಮ್ಮ ‘ಕಾಲರ್ ಬೋನ್’ ಮುರಿದಿರುವ ಸೂಚನೆ ಸಿಕ್ಕಿತ್ತು. ಅದರೊಂದಿಗೆ ಒಂದಿಷ್ಟು ತರಚು ಗಾಯಗಳು. ಆದರೂ ಅಲ್ಲಿದ್ದವರ ಸಹಾಯದೊಂದಿಗೆ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಯನ್ನು ಪಡೆದುಕೊಂಡು, ಮಾರ್ಗದರ್ಶಕರ ಬಳಿ ವಿನಂತಿಸಿಕೊAಡು ಸ್ನೇಹಿತರ ಹಾಗೂ ಮಾರ್ಗದಶÀðಕರ ಸಹಾಯದಿಂದ ‘ವೈವಾ’ ಪರೀಕ್ಷೆಯನ್ನೂ ಯಶಸ್ವಿಯಾಗಿ ಪೂರ್ಣಗೊಳಿಸಿದರು. ಆನಂತರದಲ್ಲಿ ತಜ್ಞ ವೈದ್ಯರ ಬಳಿಗೆ ತೆರಳಿ ಶಸ್ತçಚಿಕಿತ್ಸೆಗೆ ಒಳಪಟ್ಟ ಮೈತ್ರಿಭಟ್ ಸದ್ಯ ವೈದ್ಯರ ಸಲಹೆ ಮೇರೆಗೆ ವಿಶ್ರಾಂತಿ ಪಡೆಯುತ್ತಿದ್ದಾರೆ. ಮೈತ್ರಿಭಟ್ ಅವರಿಗೆ ವೈವಾ ಪರೀಕ್ಷೆಯನ್ನು ಮುಂದೂಡುವ ಆಯ್ಕೆಯನ್ನು ಅವರ ಮಾರ್ಗದರ್ಶಕರು ನೀಡಿದ್ದರು. ಅದನ್ನು ನಿರಾಕರಿಸಿ ಪೇಷೆಂಟ್ ಆಗಿದ್ದರೂ ತಮ್ಮ ಬಹು ಸಮಯದ ಕನಸಾದ ಡಾಕ್ಟರೇಟ್ ಪದವಿಯ ಮೌಖಿಕ ಪರೀಕ್ಷೆಯನ್ನು ಎದುರಿಸಿದ ಮೈತ್ರಿ ಭಟ್ ಅವರ ಛಲ ಆತ್ಮಸ್ಥೆರ್ಯ ಶ್ಲಾಘನೀಯ.