VIVEKANANDA COLLEGE of Arts, Science and Commerce (Autonomous) Puttur

Re - accredited at 'A' Grade by the NAAC with 3.30 CGPA

Recognised as the College with Potential for Excellence (CPE) by the UGC

| +91 8251 230 455 | Kannada

ಸಂಸ್ಕೃತಿ – ಪ್ರಸ್ತುತಿ ಸರಣಿ ಕಾರ್ಯಾಗಾರ ಉದ್ಘಾಟನೆ

ಪುತ್ತೂರು :ಸಂಸ್ಕೃತಿ- ಪ್ರಸ್ತುತಿ ಇಂದಿನ ಕಾಲಕ್ಕೆ ಅತೀ ಅಗತ್ಯ ಎನಿಸುವಂತದ್ಧು.ಸಂಸ್ಕೃತಿ ನಮ್ಮನ್ನು ಗಟ್ಟಿ ಗೊಳಿಸುವಂತ ಶಕ್ತಿಯನ್ನು ಹೊಂದಿದೆ.  ಪ್ರಸ್ತುತ ಉಪನ್ಯಾಸಕನಾದವ ವಿಚಾರ ಪ್ರಸ್ತುತಿಯಲಿ ಎಂದು  ಎಡವಬಾರದು. ಭವಿಷ್ಯದ  ಬೆಳಕಾದ ವಿದ್ಯಾರ್ಥಿಗಳ ಉತ್ತಮ ಏಳಿಗೆಗಾಗಿ , ಜಗತ್ತಿನ ಜ್ಞಾನ ಜ್ಯೋತಿಯನ್ನು  ತೆರೆಯುವ ಕೆಲಸ ಉಪನ್ಯಾಸಕನಿಂದ  ಸಾದ್ಯ. ಭಾರತದ ಸಂಸ್ಕೃತಿ ,ಆಚಾರ ವಿಚಾರಗಳ  ಪಸರುವಿಕೆ ಈಗ ಅಗತ್ಯ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೃಷ್ಣ ಭಟ್ ಕೆ. ಎನ್ ಹೇಳಿದರು.

ಸೆ.26ರಂದು   ವಿವೇಕಾನಂದ ಕಾಲೇಜಿನಲ್ಲಿ ಐಕ್ಯೂಎಸಿ, ಫ್ಯಾಕಲ್ಟಿ ಡೆವಲಪ್ಮೆಂಟ್ ಸೆಲ್ ಮತ್ತು ಹ್ಯುಮ್ಯಾನಿಟಿ  ಅಸೋಸಿಯೇಷನ್ ನ ಆಶ್ರಯದಲ್ಲಿ ನಡೆದ ಸಂಸ್ಕೃತಿ -ಪ್ರಸ್ತುತಿ  ಸರಣಿ ಕಾರ್ಯಾಗಾರವನ್ನು  ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ   ಶ್ರೀನಿವಾಸ ಪೈ ಮಾತನಾಡಿ,ಸಂಸ್ಕೃತಿ- ಪ್ರಸ್ತುತಿ ಎಂಬ ಶೀರ್ಷಿಕೆಯಡಿ ಆರಂಭವಾದ ಈ ಕಾರ್ಯಾಗಾರ ಗಮನಾರ್ಹ.  ಪ್ರತಿಯೊಬ್ಬ ಉಪನ್ಯಾಸಕನಲ್ಲೂ ಜ್ಞಾನಾರ್ಚನೆ  ಪ್ರಸ್ತುತಿಯ ಕಲೆ ಇರುತ್ತದೆ. ಅದು ವಿದ್ಯಾರ್ಥಿಗಳ ಏಳಿಗೆಗೆ ಸಹಕಾರಿ ಆಗಬೇಕು. ಪಾಠದ ಜೊತೆ ಜೊತೆಗೆ ದೇಶದ ಉದ್ದಾರ   ಕಲೆಯನ್ನು ಮಕ್ಕಳಲ್ಲಿ ಬೆಳೆಯುವಂತೆ ಮಾಡುವ ಜವಾಬ್ದಾರಿ ಶಿಕ್ಷಕನಿಗಿದೆ. ಈ ಕಾರ್ಯಾಗಾರ ಇಂತಹ ಕೆಲಸಕ್ಕೆ ಮುನ್ನುಡಿಯಾಗಲಿ ಎಂದು ಶುಭಹಾರೈಸಿದರು.

ಈ ಸಂದರ್ಭದಲ್ಲಿ ಕಾಲೇಜಿನ ಸಂಚಾಲಕರಾದ  ಮುರಳಿಕೃಷ್ಣ ಕೆ.ಎನ್. ವಿವೇಕಾನಂದ ವಿದ್ಯಾವರ್ಧಕ ಸಂಘದ ಕೋಶಾಧಿಕಾರಿ ಸೇಡಿಯಾಪು ಜನಾರ್ದನ ಭಟ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕಾಲೇಜಿನ ಐಕ್ಯೂಎಸಿ ಸಂಯೋಜಕ ಶಿವಪ್ರಸಾದ್ ಸ್ವಾಗತಿಸಿ, ಪ್ರಾಚಾರ್ಯರಾದ ವಿಷ್ಣು ಗಣಪತಿ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪನ್ಯಾಸಕಿ ವರ್ಷಾ ಮೊಳೆಯಾರ್ ಪ್ರಾರ್ಥಿಸಿ ,ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕ ವಿಷ್ಣು ಕುಮಾರ್ ವಂದಿಸಿದರು. ಕಾರ್ಯಕ್ರಮವನ್ನು ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕಿ ಡಾ. ಮಲ್ಲಿಕಾ ನಿರೂಪಿಸಿದರು.

ಬಳಿಕ ಸಂಸ್ಕೃತಿ ಪ್ರಸ್ತುತಿ ಮೊದಲ ಹಂತದ ಉಪನ್ಯಾಸ ಕಾರ್ಯಕ್ರಮವನ್ನು ಡಾ.ಅರುಣ್ ಪ್ರಕಾಶ್ ನೆರೆವೇರಿಸಿ ನೂತನ ಕೃಷಿ ಕಾಯಿದೆಯಿಂದ ಮುಂದಿನ ದಿನಗಳಲ್ಲಿ ರೈತರು ತಾವು ಬೆಳೆದ ವಸ್ತುಗಳನ್ನು ಎಲ್ಲಿ ಬೇಕಾದರೂ  ಮಾರಾಟ ಮಾಡಬಹುದು. ತನ್ನ ವಸ್ತು ಗಳಿಗೆ  ತಾನೆ ದರ ನಿಗದಿ ಪಡಿಸಬಹುದು.ಕಂಪನಿಯ ಜತೆ ಆತ ಒಪ್ಪಂದ ಮಾಡಿಕೊಳ್ಳಲು ಅವಕಾಶವಿದೆ.ನೂತನ ಕಾಯಿದೆಯಿಂದ ದಲ್ಲಾಳಿ ಗಳ ಕಾಟ ಕಡಿಮೆಯಾಗಲಿದೆ.ಹಾಗು ಕೃಷಿ ಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ದಿಸುವಂತೆ ಮಾಡುವಲ್ಲಿ ಸಹಕಾರಿಯಾಗಲಿದೆ ಎಂದು ತಿಳಿಸಿದರು.