ಹೊಸ ಆಲೋಚನೆಗಳನ್ನು ಕಳೆದುಕೊಳ್ಳಬಾರದು: ಸುದರ್ಶನ್ ಎಸ್.
ಪುತ್ತೂರು: ವ್ಯಕ್ತಿಯನ್ನು ಅಭಿವ್ಯಕ್ತಗೊಳಿಸುವುದೇ ವ್ಯಕ್ತಿತ್ವ. ಆದರೆ ತೆರೆಯ ಮರೆಯಲ್ಲಿನ ವ್ಯಕ್ತಿತ್ವವನ್ನು ಬಯಲಿಗೆ ತರುವುದು ಯಾರು ಎಂಬುದು ಪ್ರಶ್ನೆಯಾಗುತ್ತದೆ. ಹೊಸ ಆಲೋಚನೆಗಳನ್ನು ಅಳವಡಿಸಬೇಕೇ ಹೊರತು ಕಳೆದುಕೊಳ್ಳಬಾರದು. ಅದಕ್ಕಾಗಿ ಅತ್ಯುತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ವಿವೇಕಾನಂದ ಇನ್‌ಸ್ಟಿಟ್ಯೂಟ್ ಆಫ್ ಮೈಸೂರಿನ ನಿರ್ದೇಶಕ ಸುದರ್ಶನ್ ಎಸ್ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದಲ್ಲಿ ಆಯೋಜಿಸಲ್ಪಟ್ಟ ವ್ಯಕ್ತಿತ್ವ ವಿಕಸನ ಮತ್ತು ನಾಯಕತ್ವ ತರಬೇತಿ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ರಬ್ಬರ್ ಮನುಷ್ಯನು ಮಾಡಿದ ತಪ್ಪುಗಳನ್ನು ಅಳಿಸುತ್ತದೆ ಎಂಬುದರ ಬದಲು ರಬ್ಬರ್ ಮನುಷ್ಯನು ಮಾಡಿದ ತಪ್ಪುಗಳನ್ನು ಸರಿಪಡಿಸಲು ಸಹಕಾರಿಯಾಗಿದೆ ಎಂದು ಧನಾತ್ಮಕವಾಗಿಯೂ ಹೇಳಬಹುದು. ಅದು ಹೇಳುವವನ ಮನಸ್ಥಿತಿಗೆ ಬಿಟ್ಟಿರುತ್ತದೆ. ಮಾತ್ರವಲ್ಲದೇ ವ್ಯಕ್ತಿಯೊಬ್ಬ ತನ್ನ ಜೊತೆಗೆ ಯಾರೂ ಇಲ್ಲದಿದ್ದಾಗ ಏನನ್ನು ಮಾಡುತ್ತಾನೆಯೋ ಅದು ಅವನ ನಿಜವಾದ ವ್ಯಕ್ತಿತ್ವವನ್ನು ಸೂಚಿಸುತ್ತದೆ ಎಂದು ತಿಳಿಸಿದರು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್‌ವಿಲ್ಸನ್ ಪ್ರಭಾಕರ್ ಉಪಸ್ಥಿತರಿದ್ದರು