ವಿವೇಕಾನಂದದಲ್ಲಿ ಆಟಿದ ಅಯಿತಾರ ಆಚರಣೆ
ಪುತ್ತೂರು: ತುಳು ಹಾಗೂ ಕನ್ನಡ ಭಾಷೆಗೆ ಆತಂಕವಿದೆ. ಇಂಗ್ಲೀಷ್ ಭಾರತಕ್ಕೆ ಬಾಷೆಗಳ ಉದ್ಧಾರಕ್ಕಾಗಿ ಬಂದಿದೆ ಎಂಬುದು ಹಿರಿಯರ ಅಭಿಪ್ರಾಯ. ಭಾರತದ ಭಾಷೆಗಳ ಉದ್ಧಾರಕ್ಕಾಗಿ ಬಂದಂತಹ ಆಂಗ್ಲಭಾಷೆ ಇಂದು ಪ್ರಭಲವಾಗಿ ಬೆಳೆದಿದೆ. ಇದರ ಶಕ್ತಿಯುತ ಬೆಳವಣಿಗೆಯನ್ನು ಎದುರಿಸಲು ತಂತ್ರಜ್ಞಾನ- ಮಾಹಿತಿ ತಂತ್ರಜ್ಞಾನದ ವ್ಯವಸ್ಥೆಯನ್ನು ಅಳವಡಿಸಬೇಕು ಎಂದು ಡಾ.ವರದರಾಜ ಚಂದ್ರಗಿರಿ ತಿಳಿಸಿದರು.
ಅವರು ಇತ್ತೀಚೆಗೆ ವಿವೇಕಾನಂದ ಕಾಲೇಜಿನಲ್ಲಿ ತುಳುಸಂಘದ ವತಿಯಿಂದ ನಡೆದ ’ಆಟಿದ ಅಯಿತಾರ’ ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಆಟಗಳ ಬಗೆಗೆ ತಿಳಿಸುತ್ತಾ ಮಾತಿಲ್ಲದೆ ಅಥವಾ ಭಾಷೆ ಇಲ್ಲದೆ ಯಾವುದೇ ಆಟಗಳನ್ನು ಆಡಲು ಸಾಧ್ಯವಿಲ್ಲ. ಆದರೆ ಇಂದಿನ ಆಧುನಿಕ ಯುಗದಲ್ಲಿ ಕಂಪ್ಯೂಟರ್‌ನಲ್ಲಿ ಆಡುವ ಆಟಗಳಲ್ಲಿ ಯಾವುದೇ ಮಾತನ್ನು ಬಳಸುವುದಿಲ್ಲ. ಕೇವಲ ಯಾಂತ್ರಿಕವಾಗಿ ಆಟಗಳನ್ನು ಆಡುತ್ತಾರೆ. ಅಂತೆಯೇ ಮನೆಗಳಿಗೆಟಿವಿ ಬಂದಾಗಿನಿಂದ ಮನೆಯವರೆಲ್ಲಾ ಒಟ್ಟಾಗಿ ಕೂತು ನಡೆಸುವ ಪಟ್ಟಾಂಗವನ್ನು ಮರೆತಿದ್ದಾರೆ ಎಂದರಲ್ಲದೆ ಇಂದಿನ ದಿನಗಳಲ್ಲಿ ತಂತ್ರಜ್ಞಾನ ಮುಂದುವರಿದಂತೆ ಅದು ಭಾಷೆಗೆ ಸವಾಲಾಗಿ ಪರಿಣಮಿಸಿದೆ. ತಂತ್ರಜ್ಞಾನ ಎಂಬುದು ಭಾರತಕ್ಕೆ ಜ್ಞಾನವಾಗಿ ಬರಲಿಲ್ಲ ಬದಲಿಗೆ ಒಂದು ಉದ್ಯಮವಾಗಿ ಬಂದಿದೆ
ಕಾರ್‍ಯಕ್ರಮದ ಅಧ್ಯಕ್ಷತೆಯನ್ನು ಡಾ.ಎಚ್ ಮಾಧವ ಭಟ್ ವಹಿಸಿದ್ದರು. ತುಳುಸಂಘದ ಅಧ್ಯಕ್ಷ ಅತುಲ್ ಕಶ್ಯಪ್ ಹಾಗೂ ಸಂಘದ ಕಾರ್ಯಕರ್ತೆ ಶೃತಿ ಆರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಶಬರಿ ಶೆಟ್ಟಿ ಸ್ವಾಗತಿಸಿದರು. ವಿದ್ಯಾರ್ಥಿನಿ ಯಶಸ್ವಿನಿ ರೈ ಪ್ರಾರ್ಥಿಸಿದರು. ತುಳು ಸಂಘದ ಸಂಚಾಲಕ ಡಾ.ಶ್ರೀಶ ಕುಮಾರ್ ಎಂ.ಕೆ ಸ್ವಾಗತಿಸಿದರು. ಮತ್ತೋರ್ವ ಸಂಚಾಲಕ ಪ್ರೊ.ನರಸಿಂಹ ಭಟ್ ವಂದಿಸಿದರು.