ಅಡ್ಡ ಹೆಸರು ಮನಸ್ಸು ನೋಯಿಸುವಂತಿರಬಾರದು : ರೇಖಾ
ಪುತ್ತೂರು : ಅಡ್ಡ ಹೆಸರಿಡುವ ಪ್ರಕ್ರಿಯೆ ಸಮಕಾಲೀನ ಸಮಾಜದಲ್ಲಿ ಸೃಷ್ಠಿಯಾದದ್ದಲ್ಲ. ಬದಲಾಗಿ ಇದು ಪರಂಪರೆಯಿಂದ ನಡೆದು ಬಂದಿರುವಂತದ್ದು. ಒಳ್ಳೆಯ ದೃಷ್ಠಿಯಿಂದ, ಪ್ರೀತಿಯಿಂದ ಕರೆಯಬೇಕೇ ಹೊರತು ಅದರಿಂದ ಯಾರ ಮನಸ್ಸೂ ನೋಯುವಂತಾಗಬಾರದು ಎಂದು ವಿವೇಕಾನಂದ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕಿ ರೇಖಾ ಹೇಳಿದರು.
ಅವರು ಕಾಲೇಜಿನ ತೃತೀಯ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ಆಯೋಜಿಸುತ್ತಿರುವ ಮಣಿಕರ್ಣಿಕ ಮಾತುಗಾರರ ವೇದಿಕೆಯಲ್ಲಿ ಪೆಟ್ ನೇಮ್ ಎಂಬ ವಿಷಯದ ಕುರಿತು ಗುರುವಾರ ಮಾತನಾಡಿದರು.
ವಿದ್ಯಾರ್ಥಿಗಳಾದ ದೀಕ್ಷಿತ್, ಆಝಾದ್, ಶ್ರೇಯಸ್, ಅಪರ್ಣ, ಶಿಲ್ಪಾ, ಸಚಿನ್ ಎಲ್. ಆಚಾರ್ಯ, ಪ್ರಿಯಾ, ಪ್ರಿಯಾಶ್ರೀ, ಕಾವೇರಿ, ಸೀಮಾ, ಸಾಗರ್ ಹೆಗ್ಡೆ, ಶಿವಶಂಕರ್ ತಮ್ಮ ಅನುಭವ ಅಂಚಿಕೊಂಡರು. ವೇದಿಕೆಯಲ್ಲಿ ಮಣಿಕರ್ಣಿಕ ಮಾತುಗಾರರ ವೇದಿಕೆಯ ಕಾರ್ಯದರ್ಶಿ ಭವಿಷ್ಯ ಉಪಸ್ಥಿತರಿದ್ದರು.
ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ಸ್ವಾಗತಿಸಿದರು. ಉಪನ್ಯಾಸಕಿ ಭವ್ಯ ಪಿ. ಆರ್ ವಂದಿಸಿದರು. ವಿದ್ಯಾರ್ಥಿನಿ ಪೂಜಾಶ್ರೀ ಕಾರ್ಯಕ್ರಮ ನಿರ್ವಹಿಸಿದರು.