VIVEKANANDA COLLEGE of Arts, Science and Commerce (Autonomous) Puttur

Re - accredited at 'A' Grade by the NAAC with 3.30 CGPA

Recognised as the College with Potential for Excellence (CPE) by the UGC

| +91 8251 230 455 | Kannada

ಹಿರಿಯ ವಿದ್ಯಾರ್ಥಿ ಸಂಘದಿಂದ ಮೂರುಕೋಟಿ ವೆಚ್ಚದ ನೂತನಕಟ್ಟಡ ನಿರ್ಮಾಣ – ವಿವೇಕಾನಂದಕಾಲೇಜಿನ ಸುವರ್ಣ ಮಹೋತ್ಸವದ ಹಿನ್ನಲೆಯಲ್ಲಿಘೋಷಣೆ

ಪುತ್ತೂರು: ಇಲ್ಲಿನ ವಿವೇಕಾನಂದಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದ ವಾರ್ಷಿಕ ಮಹಾಸಭೆಕಾಲೇಜಿನಲ್ಲಿ ಭಾನುವಾರ ನಡೆಯಿತು. ಪ್ರಸ್ತುತ ವರ್ಷ ಸಂಸ್ಥೆಯುತನ್ನ ಸುವರ್ಣ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಹಿನ್ನಲೆಯಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದಕಾಲೇಜಿಗೆ ಸುಮಾರು ಮೂರುಕೋಟಿರೂಪಾಯಿ ವೆಚ್ಚದ ಸುಸಜ್ಜಿತ ಸ್ನಾತಕೋತ್ತರಅಧ್ಯಯನಕಟ್ಟಡ ನಿರ್ಮಿಸಿಕೊಡುವುದೆಂದು ಸಭೆ ಸರ್ವಾನುಮತದ ನಿರ್ಣಯಕೈಗೊಂಡಿತು.

ಈ ಸಂದರ್ಭದಲ್ಲಿ ಮಾತನಾಡಿದ ವಿವೇಕಾನಂದ ವಿದ್ಯಾವರ್ಧಕ ಸಂಘದಅಧ್ಯಕ್ಷ ಹಾಗೂ ಸಂಸ್ಥೆಯ ಹಿರಿಯ ವಿದ್ಯಾರ್ಥಿಎಸ್.ಆರ್.ರಂಗಮೂರ್ತಿಪ್ರಸ್ತುತ ವರ್ಷದಲ್ಲಿತನ್ನ ಸುವರ್ಣ ಮಹೋತ್ಸವವನ್ನು ಆಚರಿಸಿಕೊಳ್ಳಲಿರುವ ವಿವೇಕಾನಂದಕಾಲೇಜು ಭವಿಷ್ಯದೆಡೆಗೆಉತ್ತಮ ಹಾಗೂ ಬೃಹತ್ ಹೆಜ್ಜೆಯನ್ನಿಡಲುತಯಾರಾಗುತ್ತಿದೆ. ಈ ಸಂದರ್ಭದಲ್ಲಿ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳೆಲ್ಲರೂ ಒಂದಾಗಿ ಮುನ್ನಡೆದು ಸಮಾಜಕ್ಕೊಂದು ಸುಂದರ ಸಂದೇಶವನ್ನು ನೀಡಬೇಕು. ರಚನಾತ್ಮಕ ಕಾರ್ಯಗಳು ಸಾಂಘಿಕವಾಗಿ ಹೊರಹೊಮ್ಮಬೇಕುಎಂದು ಹೇಳಿದರು.

       ಸಂಸ್ಥೆಯೊಂದುಎತ್ತರಕ್ಕೆಏರಿದರಷ್ಟೇ ಸಾಲದು, ವಿಶಾಲವಾಗಿಯೂ ಬೆಳೆಯಬೇಕು. ಆಗ ಮಾತ್ರ ಸದೃಢತೆ ಮೂಡಲು ಸಾಧ್ಯ. ಈಗಾಗಲೇ ವಿವೇಕಾನಂದ ವಿದ್ಯಾವರ್ಧಕ ಸಂಘದಆಶ್ರಯದಲ್ಲಿ ೪೯ ಸಂಸ್ಥೆಗಳು ವಿವಿಧ ತಾಲೂಕುಗಳ ಅನೇಕ ಗ್ರಾಮಗಳಲ್ಲಿ ಜ್ಞಾನವಾರಿಧಿಯನ್ನು ಹರಿಸುವಲ್ಲಿ ನಿರತವಾಗಿವೆ. ಇನ್ನೂ ಅನೇಕ ಗ್ರಾಮಗಳಲ್ಲಿ ಸಂಸ್ಥೆಗಳನ್ನು ಆರಂಭಿಸುವಇರಾದೆಇದೆ. ಈ ಹಿನ್ನಲೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಪ್ರೋತ್ಸಾಹಅಗತ್ಯಎಂದರು.

       ಸುವರ್ಣ ಮಹೋತ್ಸವದ ಸುಸಂದರ್ಭದಲ್ಲಿ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳೇ ಸಂಸ್ಥೆಗೆ ಬಹುದೊಡ್ಡ ಶಕ್ತಿ. ಈ ಬೃಹತ್ ಶಕ್ತಿಯನ್ನು ಸದುಪಯೋಗಪಡಿಸುವುದುಅಗತ್ಯ. ಈಗಾಗಲೇ ವಿವಿಧ ಗ್ರಾಮಗಳಲ್ಲಿ ವಿವೇಕ ಬಳಗ ಆರಂಭಿಸಲಾಗಿದೆ. ಕನಿಷ್ಟ ನೂರುಗ್ರಾಮಗಳಲ್ಲಿ ವಿವೇಕ ಬಳಗ ಅಸ್ತಿತ್ವಕ್ಕೆ ಬರಲಿದೆ. ತನ್ಮೂಲಕ ಹಿರಿಯ ವಿದ್ಯಾರ್ಥಿಗಳನ್ನು ಸಂಸ್ಥೆಯ ಮಹೋತ್ಸವದಲ್ಲಿ ಮಿಳಿತಗೊಳಿಸುವ ಯತ್ನ ನಡೆಯಲಿದೆಎಂದು ನುಡಿದರು.

       ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದಅಧ್ಯಕ್ಷ ಕೆ.ಸಿ.ಪ್ರಭು ಮಾತನಾಡಿ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಹಿರಿಯ ವಿದ್ಯಾರ್ಥಿ ಸಂಘ ಬಲಿಷ್ಟಗೊಳ್ಳಬೇಕು. ಪ್ರತಿಯೊಬ್ಬ ಹಿರಿಯ ವಿದ್ಯಾರ್ಥಿಯೂತಾನು ಸಂಸ್ಥೆಗೆ ಏನು ಮಾಡಬಹುದುಎಂಬುದನ್ನುಯೋಚಿಸಬೇಕುಎಂದರು.

       ಹಿರಿಯ ವಿದ್ಯಾರ್ಥಿ ಸಂಘದಉಪಾಧ್ಯಕ್ಷರಾದ ಡಾ.ತಾಳ್ತಜೆ ವಸಂತಕುಮಾರ್, ಭಾರತ ಸರ್ಕಾರದ ನಿವೃತ್ತ ಕಾರ್ಯದರ್ಶಿ ವಿ.ವಿ.ಭಟ್, ಐಎಎಸ್‌ಅಲ್ಲದೆಕಾಲೇಜಿನಆಡಳಿತ ಮಂಡಳಿ ಅಧ್ಯಕ್ಷ ಪಿ.ಶ್ರೀನಿವಾಸ ಪೈ, ವಿವೇಕಾನಂದ ವಿದ್ಯಾವರ್ಧಕ ಸಂಘದಕಾರ್ಯನಿರ್ವಹಣಾಧಿಕಾರಿ ಪ್ರೊ.ಎ.ವಿ.ನಾರಾಯಣ ಮಾತನಾಡಿದರು. ಅನೇಕ ಮಂದಿ ಹಿರಿಯ ವಿದ್ಯಾರ್ಥಿಗಳು ಸಲಹೆ ಸೂಚನೆಗಳನ್ನು ನೀಡಿದರು. ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಪ್ರೊ.ದೇವಿ ಪ್ರಸಾದ್‌ಕೆ.ಎನ್ ವಾರ್ಷಿಕ ವರದಿ ಹಗೂ ಲೆಕ್ಕಪತ್ರ ಮಂಡಿಸಿದರು. ಸಂಘದ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

       ಕಾಲೇಜಿನಉಪನ್ಯಾಸಕಿತನ್ಮಯಲಕ್ಷ್ಮಿ ಮತ್ತು ಬಳಗದವರು ಪ್ರಾರ್ಥಿಸಿದರು. ಕಾಲೇಜಿನ ಪ್ರಾಂಶುಪಾಲ ಹಾಗೂ ಹಿರಿಯ ವಿದ್ಯಾರ್ಥಿ ಸಂಘದಗೌರವಾಧ್ಯಕ್ಷ ಡಾ.ಎಚ್.ಮಾಧವ ಭಟ್‌ಸ್ವಾಗತಿಸಿ ಪ್ರಸ್ತಾವಿಸಿದರು. ಸಂಘಟನಾ ಕಾರ್ಯದರ್ಶಿ ಸುಭಾಶ್ಚಂದ್ರರೈ ವಂದಿಸಿದರು. ಉಪನ್ಯಾಸಕಡಾ.ಅರುಣ್ ಪ್ರಕಾಶ್‌ಕಾರ್ಯಕ್ರಮ ನಿರ್ವಹಿಸಿದರು.