VIVEKANANDA COLLEGE, PUTTUR

Re - accredited at 'A' Grade by the NAAC with 3.30 CGPA

Recognised as the College with Potential for Excellence (CPE) By the UGC

| +91 8251 230 455 | Kannada

ವಿವೇಕಾನಂದದಲ್ಲಿ ಅನ್ವೇಷಣಾ-2013 ಉದ್ಘಾಟನೆ

ಪುತ್ತೂರು: ಪಾರಂಪರಿಕ ನಂಬಿಕೆಯನ್ನು ಮೂಢನಂಬಿಕೆಯೆಂದು ತಿರಸ್ಕರಿಸಬಾರದು. ಪ್ರಾಚೀನ ಜ್ಞಾನವನ್ನು ವಿಜ್ಞಾನದೊಂದಿಗೆ ಬೆರೆಸಿಕೊಂಡಾಗ ಅದ್ಭುತ ಸಾಧನೆ ಸಾಧ್ಯ. ವಿಜ್ಞಾನ ಮತ್ತು ಮೂಢನಂಬಿಕೆಗಳ ನಡುವಿನ ಅಂತರವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಪರಂಪರಾನುಗತ ಜ್ಞಾನವನ್ನು ಅರಿಯಬೇಕಿದೆ ಎಂದು ಕೃಷಿ ಸಂಶೋಧಕ ಬದನಾಜೆ ಶಂಕರ ಭಟ್ ಹೇಳಿದರು.

ಅವರು ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ಮಂಗಳವಾರ ವಿಜ್ಞಾನ ಸಂಘದ ಆಶ್ರಯದಲ್ಲಿ ವಿದ್ಯಾರ್ಥಿಗಳಿಗಾಗಿ ನಡೆದ ಅನ್ವೇಷಣಾ ಅನ್ನುವ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

       ಪ್ರಾಚೀನ ಗ್ರಂಥಗಳಿಗೆ ಧಾರ್ಮಿಕ ವ್ಯಾಖ್ಯಾನವನ್ನು ಹೊರತುಪಡಿಸಿದ ಅರ್ಥಗಳೂ ಇವೆ. ಆ ಗ್ರಂಥಗಳಲ್ಲಿನ ವೈಜ್ಞಾನಿಕ ವಿಚಾರಗಳನ್ನು ಅರ್ಥ್ಯಸಿಕೊಳ್ಳಬೇಕಿದೆ. ಆಗ ನೂತನ ಆವಿಷ್ಕಾರಗಳನ್ನು ಸಾಧಿಸಬಹುದಾಗಿದೆ ಎಂದರಲ್ಲದೆ ನಮ್ಮ ದೇಶದಲ್ಲಿ ಸಾಕಷ್ಟು ಸಸ್ಯ ಸಂಪತ್ತಿದೆ. ಔಷಧೀಯ ಮಹತ್ವವುಳ್ಳ ಸಸ್ಯಗಳಿಂದ ತುಂಬಿದ ಸಮೃದ್ಧ ರಾಷ್ಟ್ರ ನಮ್ಮದು. ಪುರಾತನ ಗ್ರಂಥಗಳಲ್ಲಿ ಉಕ್ತವಾದ ಅನೇಕ ಸಸ್ಯಗಳು ಇಂದಿಗೂ ಇವೆ ಎಂದರು.

ಭಾರತೀಯ ವೈಜ್ಞಾನಿಕ ಸಂಶೋಧನೆಗಳಲ್ಲಿ ಅನ್ವೇಷಣೆಯ ಪ್ರವೃತ್ತಿ ನಿರಂತರವಾಗಿರುವುದನ್ನು ಕಾಣುವುದಕ್ಕೆ ಸಾಧ್ಯ. ವಿಜ್ಞಾನವನ್ನು ಪ್ರಾಚೀನ ದೃಷ್ಟಿಕೋನದಿಂದ ಕಂಡಾಗ ಹೊಸ ಆಯಾಮವನ್ನು ಸಾಕಾರಗೊಳಿಸುವುದಕ್ಕೆ ಅವಕಾಶವಿದೆ    ಎಂದು ನುಡಿದರು.

              ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಎಚ್.ಮಾಧವ ಭಟ್ ಮಾತನಾಡಿ ಜ್ಞಾನದ ಉತ್ಖನನಕ್ಕೆ ಸಂಶೊಧನೆ ಮಾರ್ಗ. ಈ ಹಿನ್ನಲೆಯಲ್ಲಿ ವಿಜ್ಞಾನ ವಿದ್ಯಾರ್ಥಿಗಳಿಂದ ಹೆಚ್ಚಿನ ಯತ್ನ ನಡೆಯಬೇಕು ಎಂದರು.

       ವಿಜ್ಞಾನ ಸಂಘದ ಸಂಚಾಲಕ ಡಾ.ಸುಧಾಕರನ್ ಸ್ವಾಗತಿಸಿದರು. ವಿದ್ಯಾರ್ಥಿ ನಿರಂಜನ ವಂದಿಸಿದರು. ವಿದ್ಯಾರ್ಥಿನಿಯರಾದ ನವ್ಯತಾ, ಚೈತ್ರ ಹಾಗೂ ನಿಖಿಲಸುಮ ಕಾರ್ಯಕ್ರಮ ನಿರ್ವಹಿಸಿದರು.