ಪತ್ರಿಕೋದ್ಯಮ ಎಂ.ಎ ಹಾಗೂ ಗಣಿತ ಎಂ.ಎಸ್ಸಿ ಗೆ ಅರ್ಜಿ ಲಭ್ಯ
ಪ್ರಸ್ತುತ ಶೈಕ್ಷಣಿಕ ವರ್ಷದಿಂದ ವಿವೇಕಾನಂದ ಕಾಲೇಜಿನಲ್ಲಿ ಪತ್ರಿಕೋದ್ಯಮ ಎಂ.ಎ ಹಾಗೂ ಗಣಿತಶಾಸ್ತ್ರ ಎಂ.ಎಸ್ಸಿಗಳು ಪ್ರಾರಂಭಗೊಳ್ಳಲಿವೆ. ಅದಕ್ಕೆ ಸಂಬಂಧಿಸಿದಂತೆ ಅರ್ಜಿ ನಮೂನೆಗಳು ಕಾಲೇಜಿನಲ್ಲಿ ಲಭ್ಯವಿದ್ದು ಆಸಕ್ತರು ಪಡೆದುಕೊಂಡು ಹೋಗುತ್ತಿದ್ದಾರೆ. ಯಾವುದೇ ಪದವಿ ಓದಿದವರೂ ಪತ್ರಿಕೋದ್ಯಮ ಎಂ.ಎ ಗೆ ಅರ್ಜಿ ಸಲ್ಲಿಸಬಹುದು. ಅಂತೆಯೇ ಬಿಎಸ್ಸಿ ಪದವಿ ಓದಿದವರು ಗಣಿತ ಎಂ.ಎಸ್ಸಿಗೆ ಅರ್ಜಿ ಸಲ್ಲಿಸಬಹುದು.