ಆಶಾಸಾವಿತ್ರಿಗೆ ಡಾಕ್ಟರೇಟ್
ಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜಿನ ಹಿಂದಿ ಉಪನ್ಯಾಸಕಿ ಆಶಾಸಾವಿತ್ರಿ ಪಿ. ಇವರು ’ಶಂಕರ್ ಪುಣತಾಂಬೇಕರ್ ಕೀ ರಚನಾಓ ಮೇ ಸಾಮಾಜಿಕ್ ಏವಂ ರಾಜನೀತಿಕ್ ವ್ಯಂಗ್ಯ’ ಅನ್ನುವ ವಿಷಯದ ಬಗೆಗೆ ಸಲ್ಲಿಸಿದ ಪ್ರೌಢ ಪ್ರಬಂಧಕ್ಕೆ ಮದ್ರಾಸಿನ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಡಾಕ್ಟರೇಟ್ ನೀಡಿದೆ. ಇವರು ಮಂಗಳೂರಿನ ಸಂತ ಆಗ್ನೆಸ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ.ಸ್ಮಿತಾ ಚಿಪಳೂಣ್ಕರ್ ಮಾರ್ಗದರ್ಶನದಲ್ಲಿ ಪ್ರಬಂಧ ಸಿದ್ಧಪಡಿಸಿದ್ದರು. ಇವರು ಪಾಣಾಜೆ ಗ್ರಾಮದ ಗಿಳಿಯಾಲು ಅವಿನಾಶ್ ಜಿ.ಕೆ ಇವರ ಪತ್ನಿ.